
RAIN ALERT : ಮತ್ತೆ ರಾಜ್ಯದಲ್ಲಿ ಅಬ್ಬರಿಸಲಿದ್ದಾನೆ ವರುಣ ದೇವ – ರಾಜ್ಯದ ಹಲವು ಭಾಗಗಳಲ್ಲಿ ನವೆಂಬರ್ 8ರವರೆಗೆ ಮತ್ತೆ ಮಳೆ
ರಾಜ್ಯದಲ್ಲಿ ಮತ್ತೆ ವರುಣ ದೇವನ ಅಬ್ಬರ ಶುರುವಾಗಲಿದೆ. ಹೌದು.. ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ನವೆಂಬರ್ 8ರವರೆಗೆ ಮಳೆಯಾಗುವ ಸಾಧ್ಯತೆಯಿದೆ. ಕೆಲವೆಡೆ ಗುಡುಗು ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು, ಬಲವಾದ ಗಾಳಿಯೂ ಬೀಸುವ ಸಾಧ್ಯತೆ ಇದೆ.
READ THIS : ಕರ್ನಾಟಕಕ್ಕೆ ಚಂಡಮಾರುತದ ಎಫೆಕ್ಟ್ – 4 ದಿನ ಮಳೆ ಅಲರ್ಟ್!

ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ
ಇನ್ನು ಮಳೆಯ ಜೊತೆಗೆ ಕೆಲವು ಭಾಗಗಳಲ್ಲಿ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯೂ ಇದೆ. ಗುಡುಗು, ಮಿಂಚು ಸಹಿತ ಮಳೆಯಾಗುವ ಸಂದರ್ಭದಲ್ಲಿ ಸಾರ್ವಜನಿಕರು ಮರಗಳ ಕೆಳಗೆ, ವಿದ್ಯುತ್ ಕಂಬಗಳ ಸಮೀಪ ನಿಲ್ಲಬಾರದು.

RAIN ALERT – ರೈತರು ಮುನ್ನೆಚ್ಚರಿಕೆಯಿಂದ ಇರಬೇಕಿದೆ
ಒಟ್ಟಿನಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ನವೆಂಬರ್ 8ರವರೆಗೆ ಮಳೆಯಾಗುವ ಸಾಧ್ಯತೆಯಿದ್ದು, ಗುಡುಗು ಸಹಿತ ಮಳೆ ಹಾಗೂ ಬಲವಾದ ಗಾಳಿಯ ಮುನ್ಸೂಚನೆಯೂ ಇದೆ. ಹೀಗಾಗಿ ಸಾರ್ವಜನಿಕರು ಮತ್ತು ರೈತರು ಎಚ್ಚರಿಕೆಯಿಂದ ಇರಬೇಕಿದೆ.
MUST WATCH : ಕನ್ನಡಕ್ಕೆ ಮತ್ತೆ ಕೊಕ್ ಕೊಟ್ರಾ ಇಲಾಖೆ! – ರೈಲ್ವೆ ಪರೀಕ್ಷೆಯಲ್ಲಿ ಕನ್ನಡಕ್ಕಿಲ್ಲ ಚಾನ್ಸ್..!





