
ಖಾಲಿಯಾಗುತ್ತಾ KRS ಜಲಾಶಯ? 110 ಅಡಿಯಿಂದ 98 ಅಡಿಗೆ ಕುಸಿದ ಕಾವೇರಿ ನೀರು!
ರಾಜ್ಯ ಸರ್ಕಾರ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸಿದ ಹಿನ್ನಲೆಯಲ್ಲಿ ಇದೀಗ KRS ಡ್ಯಾಂ ನ ನೀರಿನ ಮಟ್ಟ 110 ಅಡಿಯಿಂದ 98 ಅಡಿಗೆ ಕುಸಿದಿದೆ. ರಾಜ್ಯದ ಪ್ರಮುಖ ಜಲಾಶಯ ಕೆಆರ್ಎಸ್ನಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ರಾಜ್ಯದಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗುವ ಆತಂಕವಿದೆ. ಕೆಆರ್ಎಸ್ ಡ್ಯಾಂನ ಒಟ್ಟು ಸಂಗ್ರಹ ಸಾಮರ್ಥ್ಯ 49.452 ಟಿಎಂಸಿ ಆಗಿದ್ದರೆ, ಈಗ ಡ್ಯಾಂನಲ್ಲಿ 21.945 ಟಿಎಂಸಿ ನೀರು ಮಾತ್ರಇದೆ.
ಖಾಲಿಯಾಗುತ್ತಾ ಕೆಆರ್ಎಸ್ ಜಲಾಶಯ..?
ಕೆಆರ್ಎಸ್ ಡ್ಯಾಂನಲ್ಲಿ ಸುಮಾರು 6 ಟಿಎಂಸಿ ಡೆಡ್ ಸ್ಟೋರೇಜ್ ಆಗಿದ್ದು, ಬಳಕೆಗೆ ಲಭ್ಯವಿರುವ ನೀರಿನ ಪ್ರಮಾಣ ಇನ್ನಷ್ಟು ಕಡಿಮೆಯಾಗಲಿದೆ. ಮುಂದಿನ ತಿಂಗಳುಗಳಲ್ಲಿ ಡ್ಯಾಂನಿಂದ ಕುಡಿಯುವ ನೀರಿನ ಅಗತ್ಯತೆ ಪೂರೈಸುವುದೇ ದೊಡ್ಡ ಸವಾಲಾಗುವ ಆತಂಕ ಎದುರಾಗಿದೆ.
READ THIS : KRS ಜಲಾಶಯದ ನೀರಿನ ಮಟ್ಟ 110 ಅಡಿಗೆ ಇಳಿಕೆ..!!

ತಮಿಳುನಾಡಿಗೆ ನೀರು – ಕರ್ನಾಟಕಕ್ಕೆ ಸಂಕಷ್ಟ?
ಇತ್ತ ಕಾವೇರಿ ಕೊಳ್ಳದಲ್ಲಿ ಮಳೆಯ ಪ್ರಮಾಣ ಕ್ಷೀಣಿಸಿದ್ದು, ಒಳಹರಿವು ಕೂಡ ಬಹಳಷ್ಟು ಇಳಿಕೆಯಾಗಿದೆ. ಸದ್ಯ ಕೆಆರ್ಎಸ್ ಜಲಾಶಯಕ್ಕೆ ಒಳಹರಿವು 485 ಕ್ಯೂಸೆಕ್ ಇದ್ದರೆ, ಹೊರಹರಿವು ಮಾತ್ರ 4,997 ಕ್ಯೂಸೆಕ್ ನೀರು ಡ್ಯಾಂನಿಂದ ಹೊರ ಹೋಗುತ್ತಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದರೆ ರಾಜ್ಯದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆಯಿದೆ.

ಕಾವೇರಿ ಒಡಲು ಬರಿದಾಗುವ ಆತಂಕ!
ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ಕಾವೇರಿ ನೀರನ್ನು ಅವಲಂಬಿಸಿರುವ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಆತಂಕವಿದೆ. ಮನುಷ್ಯರಷ್ಟೇ ಅಲ್ಲ, ಜಾನುವಾರುಗಳು ಹಾಗೂ ಪ್ರಾಣಿ ಪಕ್ಷಿಗಳಿಗೂ ನೀರಿನ ಅಭಾವ ಎದುರಾಗುವ ಭೀತಿ ಕಾಡುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಈಗಲೇ ಎಚ್ಚೆತ್ತುಕೊಂಡು ಕೆಆರ್ಎಸ್ ಡ್ಯಾಂನಲ್ಲಿರುವ ನೀರನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕಿದೆ. ಇಲ್ಲವಾದರೆ ಬೇಸಿಗೆಯಲ್ಲೂ ಜನರು ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಎದುರಾಗುತ್ತದೆ.
MUST WATCH : HIRIYURU TICKET JDSಗೆ ಪಕ್ಕಾ?! – BJPಗೆ ಟಿಕೆಟ್ ಮಿಸ್ ಸತ್ಯನಾ?





