
MANDYA : ‘ಕೇಂದ್ರ ಸಚಿವರ ಕುತಂತ್ರದ ದಾಖಲೆ ಇಲ್ಲಿದೆ’- ಪೆನ್ಡ್ರೈವ್ ತೋರಿಸಿ ಹೊಸ ಬಾಂಬ್ ಸಿಡಿಸಿದ ಶಾಸಕ!
ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್ ವಿಚಾರ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಹೌದು.. ಡಿಕೆ ಶಿವಕುಮಾರ್ ಹಾಗೂ ಹೆಚ್.ಡಿ. ಕುಮಾರಸ್ವಾಮಿ ನಡುವಿನ ಆರೋಪ–ಪ್ರತ್ಯಾರೋಪಗಳ ಬೆನ್ನಲ್ಲೇ ಮಂಡ್ಯ ಕಾಂಗ್ರೆಸ್ ಶಾಸಕ ರವಿ ಗಣಿಗ ಪೆನ್ಡ್ರೈವ್ ತೋರಿಸಿ ಹೊಸ ಬಾಂಬ್ ಸಿಡಿಸಿದ್ದಾರೆ. ಸ್ಟಿಂಗ್ ಆಪರೇಷನ್ ನಡೆಸಲು ದೆಹಲಿ ಮೂಲದ ಏಜೆನ್ಸಿಗೆ ಸುಪಾರಿ ನೀಡಲಾಗಿದೆ ಎಂದು ಆರೋಪಿಸಿರುವ ರವಿ ಗಣಿಗ, ಹೆಚ್ಡಿಕೆ ರೀತಿ ಪೆನ್ಡ್ರೈ ಪ್ರದರ್ಶಿಸಿ ಇನ್ನೊಂದು ವಾರದಲ್ಲೇ ಸ್ಟಿಂಗ್ ಕುತಂತ್ರದ ಬಗ್ಗೆ ದಾಖಲೆ ಬಿಡುಗಡೆ ಮಾಡ್ತೀನಿ ಎಂಬ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಪೆನ್ಡ್ರೈವ್ ತೋರಿಸಿ ಹೊಸ ಬಾಂಬ್ ಸಿಡಿಸಿದ ಶಾಸಕ!
ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ರವಿ ಗಣಿಗ, ರಾಜ್ಯದ ಕಾಂಗ್ರೆಸ್ ಸಚಿವರನ್ನು ಸ್ಟಿಂಗ್ ಆಪರೇಷನ್ ಮೂಲಕ ಸಿಲುಕಿಸಲು ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ. ಕೇಂದ್ರ ಸಚಿವರೊಬ್ಬರು ಹಾಗೂ ರಾಜ್ಯದ ಬಿಜೆಪಿ ನಾಯಕರೊಬ್ಬರು ಸೇರಿ ದೆಹಲಿ ಮೂಲದ ಏಜೆನ್ಸಿಗೆ ಹಣ ನೀಡಿದ್ದಾರೆ. ಬೆಂಗಳೂರಿನ ಹೋಟೆಲ್ನಲ್ಲಿ ಏಜೆನ್ಸಿಯವರಿಗೆ ವಾಸ್ತವ್ಯದ ವ್ಯವಸ್ಥೆಯನ್ನೂ ಮಾಡಲಾಗಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ.
READ THIS : ನಾನು ಎಲ್ಲಿ ಮಾತಾಡ್ಬೇಕೋ ಅಲ್ಲಿ ಮಾತಾಡ್ತೇನೆ – HDK ಗೆ ಸಿಎಂ ನೇರಾ ನೇರ ತಿರುಗೇಟು

ಸ್ಟಿಂಗ್ ಮಾಡಿಸಲು ಸುಫಾರಿ
ಇನ್ನು ಸಚಿವರನ್ನು ಸ್ಟಿಂಗ್ ಮಾಡಿ ಸರ್ಕಾರಕ್ಕೆ ಮುಜುಗರ ತರುವುದು ಇವರ ಪ್ಲಾನ್. ಆದರೆ ನಮ್ಮ ಸಚಿವರು ಕ್ಲೀನ್ ಇದ್ದಾರೆ, ಅವರ ಬಲೆಗೆ ಬಿದ್ದಿಲ್ಲ. ಸ್ಟಿಂಗ್ ಮಾಡಿಸಲು ಸುಫಾರಿ ಕೊಟ್ಟಿರುವ ಬಗ್ಗೆ ಎಲ್ಲಾ ದಾಖಲೆಗಳು ನಮ್ಮ ಬಳಿ ಇದೆ. ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡ್ತೀನಿ ಎಂದು ಶಾಸಕ ರವಿ ಗಣಿಗ ಪೆನ್ಡ್ರೈವ್ ತೋರಿಸಿದ್ದಾರೆ.
ವೀಡಿಯೋ ಸಮೇತ ದಾಖಲೆ ಇದೆ
ಇದು ಹಿಟ್ ಆ್ಯಂಡ್ ರನ್ ಆರೋಪವಲ್ಲ. ಯಾವ ಏಜೆನ್ಸಿ, ಎಷ್ಟು ಹಣ ಕೊಟ್ಟಿದ್ದಾರೆ ಯಾವ್ಯಾವ ಸಚಿವರನ್ನು ಭೇಟಿಯಾಗಿದ್ದಾರೆ. ಯಾವ್ಯಾವ ನಾಯಕರ ಪಿಎಗಳಿದ್ರು ಎಲ್ಲಾ ದಾಖಲೆಗಳಿವೆ. ಸಿಸಿಟಿವಿ, ವೀಡಿಯೋ ಸಮೇತ ದಾಖಲೆ ಇದ್ದು, ಈ ದಾಖಲೆ ಇರುವುದರಿಂದಲೇ ಸಿಎಂ ಕ್ಯಾಬಿನೆಟ್ನಲ್ಲಿ ಎಚ್ಚರಿಕೆ ನೀಡಿದ್ರು.

ಒಂದು ವಾರದೊಳಗೆ ದೂರು ಕೊಡ್ತೀವಿ. ಎಲ್ಲಾ ದಾಖಲೆಗಳನ್ನು ತನಿಖಾಧಿಕಾರಿಗಳ ಮುಂದೆ ಇಡ್ತೀವಿ ಎಂದು ಶಾಸಕ ರವಿ ಗಣಿಗ ಹೇಳಿದ್ದಾರೆ.
MUST WATCH : GYANESH KUMAR ವಿರುದ್ಧ CONGRESS ಕಿಡಿ – ತುಮಕೂರಿನಲ್ಲಿ ಕಾಂಗ್ರೆಸ್ ಬೃಹತ್ PROTEST




