
ಉಪಚುನಾವಣೆ ರೇಸ್! ನಂದಿಗ್ರಾಮದಲ್ಲಿ ಬಿಜೆಪಿ ಮುನ್ನಡೆ; ತಮಿಳುನಾಡಿನಲ್ಲಿ AIADMK – TVK ಮಧ್ಯೆ ‘ನೆಕ್ ಟು ನೆಕ್’ ಫೈಟ್
ದೇಶದ ನಾಲ್ಕು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಒಟ್ಟು ಆರು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಇಂದು ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದೆ. ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಪುದುಚೇರಿಯ ಐದು ವಿಧಾನಸಭಾ ಕ್ಷೇತ್ರಗಳು ಮತ್ತು ಅಸ್ಸಾಂನ ಒಂದು ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಯುತ್ತಿದೆ. ಅಕ್ಟೋಬರ್ 6ರಂದು ಮತದಾನ ನಡೆದಿದ್ದು, ಇಂದು ಫಲಿತಾಂಶ ಪ್ರಕಟವಾಗಲಿದೆ.
ಅಂತಿಮ ಫಲಿತಾಂಶ ಘೋಷಣೆ ಯಾಗಾಗ?
ನಿಯಮದಂತೆ ಮೊದಲಿಗೆ ಅಂಚೆ ಮತಪತ್ರಗಳ ಎಣಿಕೆ ಆರಂಭವಾಗಿದ್ದು, ನಂತರ ಇವಿಎಂ ಯಂತ್ರಗಳಲ್ಲಿ ದಾಖಲಾದ ಮತಗಳ ಎಣಿಕೆ ನಡೆಯುತ್ತಿದೆ.
ಎಲ್ಲಾ ಸುತ್ತುಗಳ ಮತ ಎಣಿಕೆ ಪೂರ್ಣಗೊಂಡ ಬಳಿಕ ಚುನಾವಣಾಧಿಕಾರಿಗಳು ಅಂತಿಮ ಫಲಿತಾಂಶ ಘೋಷಿಸಲಿದ್ದಾರೆ.
TVK ಮಧ್ಯೆ ‘ನೆಕ್ ಟು ನೆಕ್’ ಫೈಟ್!
ತಮಿಳುನಾಡಿನ ಮಧುರಾಂತಕಂ ಹಾಗೂ ಧರಾಪುರಂ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ ಮಹತ್ವ ಪಡೆದುಕೊಂಡಿದೆ. ಈ ಹಿಂದೆ ಎಐಎಡಿಎಂಕೆಯಿಂದ ಆಯ್ಕೆಯಾಗಿದ್ದ ಶಾಸಕರು ಟಿವಿಕೆಗೆ ಸೇರ್ಪಡೆಯಾದ ಬಳಿಕ ತೆರವಾದ ಸ್ಥಾನಗಳಿಗೆ ಉಪಚುನಾವಣೆ ನಡೆದಿದ್ದು, ಟಿವಿಕೆ ಮತ್ತು ಎಐಎಡಿಎಂಕೆ ನಡುವಿನ ಪೈಪೋಟಿ ಕುತೂಹಲ ಮೂಡಿಸಿದೆ.
READ THIS : ಮೋದಿ, ರಾಹುಲ್ ಬಳಿಕ ಪ್ರಧಾನಿ ಆಯ್ಕೆಯಲ್ಲಿ ವಿಜಯ್ಗೆ ಮೂರನೇ ಸ್ಥಾನ!

ಬಿಜೆಪಿ ಮುನ್ನಡೆ
ಇನ್ನು ಪಶ್ಚಿಮ ಬಂಗಾಳದ ನಂದಿಗ್ರಾಮ ಹಾಗೂ ರೇಜಿನಗರ ಕ್ಷೇತ್ರಗಳಲ್ಲೂ ಮತ ಎಣಿಕೆ ನಡೆಯುತ್ತಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಭವಾನಿಪುರ ಕ್ಷೇತ್ರವನ್ನು ಉಳಿಸಿಕೊಂಡ ಹಿನ್ನೆಲೆಯಲ್ಲಿ ನಂದಿಗ್ರಾಮ ಸ್ಥಾನ ತೆರವಾಗಿತ್ತು. ಮತ್ತೊಂದೆಡೆ ಆಮ್ ಜನತಾ ಉನ್ನಯನ್ ಪಾರ್ಟಿ ನಾಯಕ ಹುಮಾಯೂನ್ ಕಬೀರ್ ಮತ್ತೊಂದು ಕ್ಷೇತ್ರವನ್ನು ಉಳಿಸಿಕೊಂಡ ಕಾರಣ ರೇಜಿನಗರದಲ್ಲಿ ಉಪಚುನಾವಣೆ ನಡೆದಿದೆ.
ಪುದುಚೇರಿಯ ಥಟ್ಟಂಚಾವಡಿ ವಿಧಾನಸಭಾ ಕ್ಷೇತ್ರ ಹಾಗೂ ಅಸ್ಸಾಂನ ನಾಗಾಂವ್ ಲೋಕಸಭಾ ಕ್ಷೇತ್ರದಲ್ಲೂ ಮತ ಎಣಿಕೆ ನಡೆಯುತ್ತಿದೆ.
ಈ ಉಪಚುನಾವಣೆಗಳಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳ ನಡುವೆ ಪೈಪೋಟಿ ಏರ್ಪಟ್ಟಿದ್ದು, ಅಂತಿಮ ಫಲಿತಾಂಶದತ್ತ ಗಮನ ನೆಟ್ಟಿದೆ.
MUST WATCH : ವಿಜಯಪುರ ಡಿಪೋದಲ್ಲಿ ಡೀಸೆಲ್ ಸಂಕಷ್ಟ ಬಸ್ ಡಿಪೋಗೆ ವಿಜಯೇಂದ್ರ ದಿಢೀರ್ ಭೇಟಿ




