ರಾಜ್ಯ ಸರ್ಕಾರದಿಂದ ‘ಅನ್ನ ಸೇವಾ ಅಪ್ಲಿಕೇಶನ್ ಬಿಡುಗಡೆ’ ಪಡಿತರ ಚೀಟಿ e-KYC ಈಗ ಮತ್ತಷ್ಟು ಸುಲಭ!

ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಸಿಹಿಸುದ್ದಿ ಸಿಕ್ಕಿದೆ. ಅನ್ನಭಾಗ್ಯ ಯೋಜನೆ ಹಾಗೂ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಫಲಾನುಭವಿಗಳು ಇನ್ಮುಂದೆ ಇ-ಕೆವೈಸಿ ಮಾಡಿಸಿಕೊಳ್ಳಲು ನ್ಯಾಯಬೆಲೆ ಅಂಗಡಿಗಳಿಗೆ ಅಲೆಯಬೇಕಿಲ್ಲ. ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಇ-ಕೆವೈಸಿ ಪೂರ್ಣಗೊಳಿಸಲು ಅವಕಾಶ ನೀಡುವ ‘ಅನ್ನ ಸೇವಾ’ ಮೊಬೈಲ್ ಆ್ಯಪ್ ಅನ್ನು ರಾಜ್ಯಾದ್ಯಂತ ವಿಸ್ತರಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ರಾಜ್ಯಾದ್ಯಂತ ‘ಅನ್ನ ಸೇವಾ’ ಮೊಬೈಲ್ ಆ್ಯಪ್ ಸೌಲಭ್ಯ
ಹೌದು.. ರೇಷನ್ ಕಾರ್ಡ್ ಇ-ಕೆವೈಸಿ ಅಂದ್ರೆ ಈ ಹಿಂದೆ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ಪ್ರಕ್ರಿಯೆ ಪೂರ್ಣಗೊಳಿಸಬೇಕಿತ್ತು. ಇದರಿಂದ ಹಿರಿಯ ನಾಗರಿಕರು ಹಾಗೂ ದೂರದ ಊರುಗಳಲ್ಲಿರುವ ಫಲಾನುಭವಿಗಳಿಗೆ ತೊಂದರೆಯಾಗುತ್ತಿತ್ತು. ಆದರೆ ಇದೀಗ ‘ಅನ್ನ ಸೇವಾ’ ಮೊಬೈಲ್ ಆ್ಯಪ್ ಮೂಲಕ ಮನೆಯಲ್ಲೇ ಇ-ಕೆವೈಸಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಉಳಿದ ಜಿಲ್ಲೆಗಳಿಗೂ ಆ್ಯಪ್ ಸೌಲಭ್ಯ ವಿಸ್ತರಣೆ
ಇನ್ನು ಈ ಆ್ಯಪ್ ಅನ್ನು ಆರಂಭದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಉತ್ತರ ಕನ್ನಡ, ಬಳ್ಳಾರಿ, ಬೀದರ್ ಮತ್ತು ಕೊಪ್ಪಳ ಸೇರಿದಂತೆ ಆಯ್ದ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಪರಿಚಯಿಸಲಾಗಿತ್ತು.
ಪ್ರಾಯೋಗಿಕ ಹಂತದ ಬಳಿಕ ಇದೀಗ ರಾಜ್ಯದ ಉಳಿದ ಜಿಲ್ಲೆಗಳ ಫಲಾನುಭವಿಗಳಿಗೂ ಸೌಲಭ್ಯ ವಿಸ್ತರಿಸಲಾಗಿದೆ ಎಂದು ಆಹಾರ ಇಲಾಖೆ ತಿಳಿಸಿದೆ.
READ THIS : ಪಡಿತರದಾರರಿಗೆ ಗುಡ್ ನ್ಯೂಸ್ – ರಾಜ್ಯ ಸರ್ಕಾರದಿಂದ E-KYC ಆ್ಯಪ್ ಬಿಡುಗಡೆ

e-KYC – ಮುಖ ಗುರುತಿಸುವಿಕೆ ಮೂಲಕ ಕೆವೈಸಿ ಪರಿಶೀಲನೆ
ಇನ್ನು ‘ಅನ್ನ ಸೇವಾ’ ಆ್ಯಪ್ನಲ್ಲಿ ಆಧಾರ್ ಆಧಾರಿತ ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಬಳಸಲಾಗುತ್ತದೆ.
ಫಲಾನುಭವಿಯ ಗುರುತನ್ನು ಮುಖದ ಮೂಲಕ ಪರಿಶೀಲಿಸಿ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಈ ವ್ಯವಸ್ಥೆ ನೆರವಾಗಲಿದೆ. ಇದರಿಂದ ಪ್ರತಿ ಬಾರಿ ನ್ಯಾಯಬೆಲೆ ಅಂಗಡಿಗೆ ತೆರಳುವ ಅಗತ್ಯ ಕಡಿಮೆಯಾಗುವ ನಿರೀಕ್ಷೆಯಿದೆ.
ಆ್ಯಪ್ ಡೌನ್ಲೋಡ್ ಮಾಡೋದೇಗೆ?
ಇನ್ನು ಆ್ಯಪ್ ಬಳಸಲು ಬಯಸುವ ಫಲಾನುಭವಿಗಳು ಗೂಗಲ್ ಪ್ಲೇ ಸ್ಟೋರ್ನಲ್ಲಿ ಅಧಿಕೃತ ‘ಅನ್ನ ಸೇವಾ’ ಆ್ಯಪ್ ಅನ್ನು ಪರಿಶೀಲಿಸಿ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಇಲಾಖೆ ತಿಳಿಸಿದೆ.
ವಿಶೇಷವಾಗಿ ಹಿರಿಯ ನಾಗರಿಕರು ಹಾಗೂ ನ್ಯಾಯಬೆಲೆ ಅಂಗಡಿಗೆ ತೆರಳಲು ತೊಂದರೆ ಇರುವವರಿಗೆ ಈ ವ್ಯವಸ್ಥೆ ಅನುಕೂಲವಾಗಲಿದೆ.

MUST WATCH : ಊರಿಗೆ ಬಂದಿದ್ದ ಯುವಕ ನಾಪತ್ತೆ – ನೇ* ಬಿಗಿದ ಸ್ಥಿತಿಯಲ್ಲಿ ಶ* ವಾಗಿ ಪತ್ತೆ




