
ಯಾರ್ಯಾರು ಎಂತೆಂತಹ ಕೆಲಸ ಮಾಡ್ತಿದ್ದಾರೆ ಅಂತ ದಾಖಲೆ ಇದೆ: ಕುಮಾರಸ್ವಾಮಿಗೆ CM ನೇರಾ ನೇರ ತಿರುಗೇಟು
ನೈಸ್ ಯೋಜನೆ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ. ಮಾತೆತ್ತಿದ್ರೆ ನೈಸ್.. ನೈಸ್.. ನೈಸ್ ಅಂತಾರೆ. ಇದು ಯಾವ ನೈಸ್ ಅಲ್ಲ, ಪಾಪದ ಕೂಸು ಆಗಿದೆ ಅಂತ ಕುಮಾರಸ್ವಾಮಿ ಆರೋಪಗಳಿಗೆ CM ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಸಮಯ ಬಂದಾಗ ಎಲ್ಲವನ್ನೂ ಬಿಚ್ಚಿಡುತ್ತೇನೆ
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಈ ಬಗ್ಗೆ ನಾನು ಅಲ್ಲಿ ಇಲ್ಲಿ ಮಾತನಾಡಲ್ಲ. ಎಲ್ಲಿ ಮಾತನಾಡಬೇಕೋ ಅಲ್ಲೇ ಮಾತನಾಡುತ್ತೇನೆ. ವಿಧಾನಸಭೆಯಲ್ಲಿ ಎಲ್ಲದಕ್ಕೂ ಉತ್ತರ ಕೊಡುತ್ತೇನೆ. ಸಮಯ ಬಂದಾಗ ಎಲ್ಲವನ್ನೂ ಬಿಚ್ಚಿಡುತ್ತೇನೆ ಅಂತ ಹೇಳಿದ್ದಾರೆ.

ಯಾರ್ಯಾರು ಎಂತೆಂತಹ ಕೆಲಸ ಮಾಡ್ತಿದ್ದಾರೆ ಅಂತ ದಾಖಲೆ ಇದೆ
ಯಾರು ಏನು ಮಾಡಿದ್ದಾರೆ ಅನ್ನೋದಕ್ಕೆ ನನ್ನ ಬಳಿಯೂ ದಾಖಲೆಗಳಿವೆ. ಯಾರ ಹೆಗಲಿಗೆ ಏನು ಬರುತ್ತದೆ ಅನ್ನೋದನ್ನ ಕಾಲವೇ ನಿರ್ಣಯ ಮಾಡುತ್ತೆ. ಯಾರು ಎಷ್ಟು ಆಸ್ತಿ ಇದೆ, ಯಾರ ಕುಟುಂಬ ಎಷ್ಟು ಆಸ್ತಿ ಖರೀದಿ ಮಾಡಿದೆ ಅನ್ನೋದರ ಬಗ್ಗೆಯೂ ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ.
READ THIS : ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಹೆಚ್ಡಿ ಕುಮಾರಸ್ವಾಮಿ.!

ನಾನೇನು ಪ್ರೈಮ್ ಮಿನಿಸ್ಟರ್ ಮಗ ಅಲ್ಲ
ಸಮಯ ಬಂದಾಗ ಮಾಹಿತಿ ಬಿಚ್ಚಿಡ್ತೇನೆ. ಅವರಷ್ಟು ಜ್ಞಾನ ಭಂಡಾರ ನನಗಿಲ್ಲ. ನಾನು ಹಳ್ಳಿ ಪಳ್ಳಿಯಿಂದ ಬಂದವನು. ನಾನೇನು ಪ್ರೈಮ್ ಮಿನಿಸ್ಟರ್ ಮಗ ಅಲ್ಲ, ನನಗೂ ಅಷ್ಟು ಇಷ್ಟು ಅನುಭವ ಇದೆ ಎಂದು ಎಂದು ವ್ಯಂಗ್ಯವಾಡಿದ್ದಾರೆ.
ಒಟ್ಟಿನಲ್ಲಿ ನೈಸ್ ಯೋಜನೆ ವಿಚಾರವಾಗಿ ಕುಮಾರಸ್ವಾಮಿ ಮಾಡುತ್ತಿರುವ ಆರೋಪಗಳಿಗೆ ಡಿಕೆ ಶಿವಕುಮಾರ್ ಖಡಕ್ ತಿರುಗೇಟು ನೀಡಿದ್ದಾರೆ.
MUST WATCH : ನೊಣವಿನಕೆರೆ ಖಾಲಿ.. ರೈತರಿಗೆ ಸಂಕಷ್ಟ – ಷಡಕ್ಷರಿ ವಿರುದ್ಧ ಶಾಂತಕುಮಾರ್ ವಾಗ್ದಾಳಿ




