ನೈಸ್ ವಿಚಾರದಲ್ಲಿ ಸಚಿವ HDK ವರ್ಸಸ್ ಸಿಎಂ ಡಿಕೆಶಿ ಕದನ – ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಹೆಚ್ಡಿ ಕುಮಾರಸ್ವಾಮಿ.!

ನೈಸ್ ಯೋಜನೆ ವಿಚಾರದಲ್ಲಿ ರಾಜ್ಯ ರಾಜಕೀಯದಲ್ಲಿ ಮತ್ತೆ ಕದನ ಶುರುವಾಗಿದೆ. ನೈಸ್ ಯೋಜನೆಯಿಂದ ಭೂಮಿ ಕಳೆದುಕೊಂಡ ರೈತರನ್ನ ಭೇಟಿ ಮಾಡಿ ಅಹವಾಲು ಆಲಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಯೋಜನೆಯಲ್ಲಿನ ಅಕ್ರಮಗಳ ಬಗ್ಗೆ ಗಂಭೀರ ಆರೋಪಗಳನ್ನ ಮಾಡಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಎಚ್ಡಿಕೆ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.
ರೈತರ ಪರವಾಗಿ ಮುಂದಿನ ಹೋರಾಟ ರೂಪಿಸುವುದಾಗಿ ಭರವಸೆ
ಇನ್ನು ಮಾದಾವರದಿಂದ ಆರಂಭವಾದ HDK ಪ್ರವಾಸದಲ್ಲಿ ತೋಟದ ಗುಡ್ಡಹಳ್ಳಿ, ಅಂಚೆಪಾಳ್ಯ, ತಿರುಮಲಪುರ, ಎಲೆಕ್ಟ್ರಾನಿಕ್ ಸಿಟಿ ಹಾಗೂ ಬೇಗೂರು ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ನೈಸ್ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರನ್ನ ಭೇಟಿ ಮಾಡಿ, ಅವರ ಅಹವಾಲುಗಳನ್ನ ಆಲಿಸಿದ್ದಾರೆ. ಅಲ್ದೇ ಈ ಬಗ್ಗೆ ಸುಪ್ರೀಂ ಕೋರ್ಟಿಗೆ ಹೋಗಿ ಭೂಮಿ ಕಳೆದುಕೊಂಡ ರೈತರ ಪರವಾಗಿ ಮುಂದಿನ ಹೋರಾಟ ರೂಪಿಸುವುದಾಗಿಯೂ ಭರವಸೆ ನೀಡಿದ್ದಾರೆ.

ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ HDK
ಇದೇ ವೇಳೆ ಡಿ.ಕೆ. ಶಿವಕುಮಾರ್ ವಿರುದ್ಧವೂ ಎಚ್ಡಿಕೆ ನೇರ ಆರೋಪ ಮಾಡಿದ್ದಾರೆ. ನೈಸ್ ಯೋಜನೆಯ ಮೂಲ ಚೌಕಟ್ಟಿನಲ್ಲಿ ಬದಲಾವಣೆ ಮಾಡಿ ಖಾಸಗಿ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಆರೋಪಿಸಿದ್ದು, ಹೈದರಾಬಾದ್ ಮೂಲದ ಉದ್ಯಮಿ ಮಹೇಶ್ ರೆಡ್ಡಿ ಹೆಸರು ಪ್ರಸ್ತಾಪಿಸಿ ಅವರು ಯಾರಂತ ಸಿಎಂ ಅವ್ರನೇ ಕೇಳಿ ಎಂದ್ರು. ಅಲ್ದೇ ನೈಸ್ ವಿಚಾರವಾಗಿ ನಾನು ಸಿಂಗಾಪುರ್ನಲ್ಲಿದ್ರೂ, ಬಂದು ಬ್ಲ್ಯಾಕ್ ಮೇಲ್ ಮಾಡಿದ್ರು, ನಾನು ಉಗಿದು ಕಳ್ಸಿದ್ದೆ ಎಂದು ಹೇಳಿದ್ರು.
READ THIS : CM ಡಿಕೆಶಿ ಬೆನ್ನಿಗೆ ನಿಂತ ಕಾಂಗ್ರೆಸಿಗರ ವಿರುದ್ಧವೂ ಮುಗಿಬಿದ್ದ HDK!

ಕಾನೂನುಬಾಹಿರವಾಗಿ ಭೂಮಿ ಪಡೆದಿದೆ
ಇನ್ನು ತಮ್ಮ ಕುಟುಂಬ ನೈಸ್ ಯೋಜನೆಯ ವ್ಯಾಪ್ತಿಯಲ್ಲಿ ಕಾನೂನುಬಾಹಿರವಾಗಿ ಭೂಮಿ ಪಡೆದಿದೆ ಅನ್ನೋದನ್ನ ಸಾಬೀತುಪಡಿಸಿದ್ರೆ ರಾಜಕೀಯವಾಗಿ ಕಠಿಣ ಸವಾಲು ಎದುರಿಸಲು ಸಿದ್ಧ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಮತ್ತೊಂದೆಡೆ, ಕುಮಾರಸ್ವಾಮಿ ಕುಟುಂಬವೇ ನೈಸ್ ವ್ಯಾಪ್ತಿಯಲ್ಲಿ ಭೂಮಿ ಹೊಂದಿರುವ ಬಗ್ಗೆ ಡಿಕೆಶಿ ಆರೋಪಿಸಿದ್ದು,. ಹೀಗಾಗಿ ಇಬ್ಬರು ನಾಯಕರ ನಡುವಿನ ಆರೋಪ-ಪ್ರತ್ಯಾರೋಪ ಮತ್ತಷ್ಟು ತೀವ್ರವಾಗಿದೆ.
ಆರೋಪಗಳಿಗೆ ಯಾವ ತಿರುವು ಸಿಗುತ್ತೆ?
ಒಟ್ನಲ್ಲಿ ನೈಸ್ ಯೋಜನೆ, ಭೂಮಿ ಕಳೆದುಕೊಂಡ ರೈತರ ಸಮಸ್ಯೆ ಹಾಗೂ ಯೋಜನೆಯ ಮೂಲ ಒಪ್ಪಂದದಲ್ಲಿನ ಬದಲಾವಣೆಗಳನ್ನ ಮುಂದಿಟ್ಟುಕೊಂಡು ಎಚ್ಡಿಕೆ ಹೋರಾಟಕ್ಕೆ ಇಳಿದಿದ್ದಾರೆ. ಇದಕ್ಕೆ ಡಿಕೆಶಿ ತಿರುಗೇಟು ನೀಡಿದ್ದು, ಮುಂದಿನ ದಿನಗಳಲ್ಲಿ ಈ ಆರೋಪಗಳಿಗೆ ಯಾವ ತಿರುವು ಸಿಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

MUST WATCH : ತುಮಕೂರಿಗೆ ಯತ್ನಾಳ್ ಮಾಸ್ ಎಂಟ್ರಿ – ಹಿಂದೂ ಕಾರ್ಯಕರ್ತರಿಂದ ಜೈಕಾರ




