BENGALURU : ರಜೆಗೆ ಸ್ನೇಹಿತರ ಜೊತೆ ಟ್ರೆಕ್ಕಿಂಗ್ʼಗೆ ಹೋಗಿದ್ದ ಟೆಕ್ಕಿ ದುರಂತ: ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿ ನಾಪತ್ತೆ

ರಜೆಯ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ಟ್ರೆಕ್ಕಿಂಗ್ಗೆ ತೆರಳಿದ್ದ ಸಾಫ್ಟ್ವೇರ್ ಉದ್ಯೋಗಿಯೊಬ್ಬರು ಕಲ್ಲು ಕ್ವಾರಿಯ ನೀರಿನಲ್ಲಿ ಈಜಲು ಹೋಗಿ ಮುಳುಗಿ ನಾಪತ್ತೆಯಾಗಿರುವ ಘಟನೆ ಬೆಂಗಳೂರು ಹೊರವಲಯದ ಜಿಗಣಿ ಸಮೀಪ ನಡೆದಿದೆ. 30 ವರ್ಷದ ವಿನಯ್ ನಾಪತ್ತೆಯಾಗಿರುವ ಟೆಕ್ಕಿ.
ಆಗಿದ್ದೇನು?
ಆಂಧ್ರಪ್ರದೇಶ ಮೂಲದ ವಿನಯ್ ಬೆಂಗಳೂರಿನ ಹಲಸೂರಿನಲ್ಲಿ ವಾಸವಾಗಿದ್ದು, ಸಾಫ್ಟ್ವೇರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ರಜೆ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ಟ್ರೆಕ್ಕಿಂಗ್ಗೆ ಹೋಗಲು ಪ್ಲ್ಯಾನ್ ಮಾಡಿಕೊಂಡಿದ್ದರು ಎನ್ನಲಾಗಿದೆ.
ಇನ್ನು BLR Hike ಎಂಬ Instagram ಗ್ರೂಪ್ ಮೂಲಕ ಒಟ್ಟು ಎಂಟು ಜನರ ತಂಡ ಟ್ರೆಕ್ಕಿಂಗ್ಗೆ ಹೋಗಿತ್ತು. ಜಿಗಣಿ ಸಮೀಪದ ಯಲ್ಲಮ್ಮನ ದೊಡ್ಡಯ್ಯ ಕಲ್ಲು ಕ್ವಾರಿ ಪ್ರದೇಶಕ್ಕೆ ತೆರಳಿದ್ದ ತಂಡ, ಸಂಜೆ ಸುಮಾರು 5.30ರ ವೇಳೆಗೆ ಕ್ವಾರಿಯಲ್ಲಿದ್ದ ನೀರಿನಲ್ಲಿ ಈಜಲು ಇಳಿದಿದೆ. ಎಲ್ಲರೂ ನೀರಿನಲ್ಲಿ ಈಜುತ್ತಿದ್ದ ಸಂದರ್ಭದಲ್ಲಿ ವಿನಯ್ ಏಕಾಏಕಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಉಳಿದವರು ನೀರಿನಿಂದ ಹೊರಬಂದು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
READ THIS : ತುಮಕೂರಿನಲ್ಲಿ ಮಹಿಳಾ PSI ಮಿಸ್ಸಿಂಗ್.!

BENGALURU – ವಿನಯ್ ಪತ್ತೆಗಾಗಿ ಶೋಧ
ವಿಷಯ ತಿಳಿಯುತ್ತಿದ್ದಂತೆ ಜಿಗಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ಹಾಗೂ ತುರ್ತು ಸೇವಾ ಸಿಬ್ಬಂದಿ ಕೂಡ ಸ್ಥಳಕ್ಕೆ ಆಗಮಿಸಿ ಕ್ವಾರಿಯ ನೀರಿನಲ್ಲಿ ವಿನಯ್ ಪತ್ತೆಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಘಟನಾ ಸ್ಥಳಕ್ಕೆ ಕುಟುಂಬಸ್ಥರೂ ಆಗಮಿಸಿದ್ದು, ವಿನಯ್ ಪತ್ತೆಗಾಗಿ ಕಾಯುತ್ತಿದ್ದಾರೆ.
MUST WATCH : ತುಮಕೂರಲ್ಲಿ ಕೇಂದ್ರ ಬರ ಅಧ್ಯಯನ ತಂಡ – ಡಿಸಿ ಶುಭಕಲ್ಯಾಣ್ರಿಂದ ಬರದ ವಿವರಣೆ





