
‘ಪಾಪ.. ಅವಕ್ಕೆ ವಿದ್ಯೆ-ಬುದ್ಧಿ ಗೊತ್ತಿಲ್ಲ’ – CM ಡಿ.ಕೆ. ಶಿವಕುಮಾರ್ ಬೆನ್ನಿಗೆ ನಿಂತ ಕಾಂಗ್ರೆಸಿಗರ ವಿರುದ್ಧವೂ ಮುಗಿಬಿದ್ದ ಹೆಚ್.ಡಿ. ಕುಮಾರಸ್ವಾಮಿ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಅವರ ಕುಟುಂಬದ ವಿರುದ್ಧ ಭೂಕಬಳಿಕೆ ಆರೋಪಗಳನ್ನು ಮಾಡಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ತಮ್ಮ ಆರೋಪಗಳನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಆರೋಪಗಳನ್ನು ಮಾಡಿದ ಬೆನ್ನಲ್ಲೇ ಕಾಂಗ್ರೆಸ್ನ ಹಲವು ಸಚಿವರು ಹಾಗೂ ಶಾಸಕರು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ,ಕಾಂಗ್ರೆಸಿಗರ ವಿರುದ್ಧ ಕಿಡಿ ಕಾರಿದ್ದಾರೆ.
READ THIS : ಕಾಂಗ್ರೆಸ್ ಸರ್ಕಾರ ಪಿಕ್ಪಾಕೆಟ್ ಸರ್ಕಾರ ಎಂದು ಕಿಡಿ ಕಾರಿದ HDK

‘ಪಾಪ.. ಅವಕ್ಕೆ ವಿದ್ಯೆ-ಬುದ್ಧಿ ಗೊತ್ತಿಲ್ಲ’
ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸ್ವತಃ ನಡೆಸಿರುವ, ತಮ್ಮ ಇಡೀ ಕುಟುಂಬವನ್ನು ಅಕ್ರಮಗಳಲ್ಲಿ ಭಾಗಿದಾರರನ್ನಾಗಿ ಮಾಡಿರುವುದು ಅಕ್ಷರಶಃ ರುಜುವಾತಾಗಿದೆ. ಆದರೂ ಕೆಲ ಸೈಡ್ ವಿಂಗ್ ನಾಲಿಗೆಗಳು ವ್ಯರ್ಥ ಸಮರ್ಥನೆಗೆ ಇಳಿದಿವೆ. ಪಾಪ.. ಅವಕ್ಕೆ ವಿದ್ಯೆಬುದ್ಧಿ ಗೊತ್ತಿಲ್ಲ. ದಾಖಲೆಗಳನ್ನು ಓದಿಕೊಳ್ಳುವ ಬೌದ್ಧಿಕ ಸಾಮರ್ಥ್ಯವು ಇಲ್ಲ! ಆದರೂ ಮಂತ್ರಿಗಳಾಗಿದ್ದಾರೆ!! ಅಕ್ರಮ ಸಂಪತ್ತು ಗಳಿಸಿದ ಸಿಎಂ ಸಾಹೇಬರನ್ನು ಸಮರ್ಥಿಸಿಕೊಳ್ಳದಿದ್ದರೆ ಸಂಪುಟದಲ್ಲಿ ಉಳಿಗಾಲವಿಲ್ಲ. ಆ ಭಯಕ್ಕೆ ಕಿರುಚುತ್ತಿವೆ.

ಅಕ್ರಮಗಳನ್ನು ದಾಖಲೆಗಳೇ ಸಾರಿ ಸಾರಿ ಹೇಳುತ್ತಿದೆ
ಹೆಚ್.ಡಿ.ದೇವೇಗೌಡರ ಕಾಲದಲ್ಲಿ ಏನಾಯ್ತು? ಜೆ.ಎಚ್.ಪಟೇಲರ ಕಾಲದಲ್ಲಿ ಏನಾಯ್ತು? ಆ ನಂತರ ಬಂದ ಆಕ್ಸ್ಫರ್ಡ್ ಯುನಿವರ್ಸಿಟಿ ಪದವೀಧರರ ಸರಕಾರದಲ್ಲಿ ಹಾಲಿ ಸಿಎಂ ಮಹಾಶಯ ನಗರಾಭಿವೃದ್ಧಿ ಸಚಿವರಾಗಿ, BMICPA ಅಧ್ಯಕ್ಷರಾಗಿ ಎಸಗಿರುವ ಅಕ್ರಮಗಳನ್ನು ದಾಖಲೆಗಳೇ ಸಾರಿ ಸಾರಿ ಹೇಳುತ್ತಿದೆ ಎಂದು ಹೇಳುವ ಮೂಲಕ ತಮ್ಮ ವಿರುದ್ಧ ಕಾಂಗ್ರೆಸ್ ನಾಯಕರು ಮಾಡಿರುವ ಟೀಕೆಗಳಿಗೆ HDK ಪ್ರತಿಕ್ರಿಯಿಸಿದ್ದಾರೆ.
MUST WATCH : ಮಧುಗಿರಿಯಲ್ಲಿ ಟ್ರಾಫಿಕ್ ಕಿರಿಕಿರಿಗೆ ಬ್ರೇಕ್ ಪುರಸಭೆ–ಪೊಲೀಸರ ಜಂಟಿ ಕಾರ್ಯಾಚರಣೆ





