
HDK : “ಕಾಂಗ್ರೆಸ್ಗೆ ಕರ್ನಾಟಕವೇ ಎಟಿಎಂ”; ಪಿಕ್ಪಾಕೆಟ್ ಸರ್ಕಾರ ಎಂದು ಕಿಡಿ ಕಾರಿದ ಕುಮಾರಸ್ವಾಮಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಹಾಗೂ ಸರ್ಕಾರದ ಇತ್ತೀಚಿನ ಕ್ರಮಗಳ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹೌದು.. ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿರುವ HDK, ರಾಜ್ಯ ಸರ್ಕಾರವನ್ನು ‘ಪಿಕ್ಪಾಕೆಟ್ ಸರ್ಕಾರ’ ಎಂದು ಟೀಕಿಸಿದ್ದಾರೆ.
ಭ್ರಷ್ಟಾಚಾರ ಮತ್ತು ಸುಲಿಗೆಗೆ ಹೊಸ ಅವಕಾಶ
ಬೆಂಗಳೂರಿನ ವ್ಯಾಪ್ತಿ ವಿಸ್ತರಣೆಯ ಹಿಂದೆ ಅಭಿವೃದ್ಧಿಯ ಉದ್ದೇಶವಿಲ್ಲ, ಬದಲಾಗಿ ಭ್ರಷ್ಟಾಚಾರ ಹಾಗೂ ಸುಲಿಗೆಗೆ ಹೊಸ ಅವಕಾಶ ಸೃಷ್ಟಿಸಲಾಗುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ನಾಡಪ್ರಭು ಕೆಂಪೇಗೌಡರು ಕಟ್ಟಿದ ಮಹಾನಗರದ ವ್ಯಾಪ್ತಿಯನ್ನು ಹಿಗ್ಗಿಸುವುದರ ಹಿಂದೆ ಅಭಿವೃದ್ಧಿಯ ಉದ್ದೇಶವಿಲ್ಲ. ಬದಲಾಗಿ ವ್ಯಾಪಕ ಭ್ರಷ್ಟಾಚಾರ ಮತ್ತು ಸುಲಿಗೆಗೆ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳಲಾಗುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
READ THIS : ಹೊಟ್ಟೆಕಿಚ್ಚಿನ ಸುಮಾರ್ ಕೋಳಿ – ಗೇಟ್ಗೆ ಪೋಸ್ಟರ್ ಅಂಟಿಸಿ HDK ವಿರುದ್ಧ ಕಾಂಗ್ರೆಸ್ ವ್ಯಂಗ್ಯ

ಜನಸಾಮಾನ್ಯರ ಹಣವನ್ನು ದೋಚುವ ಪಿಕ್ಪಾಕೆಟ್ ತಂತ್ರ
ಕಾಂಗ್ರೆಸ್ ಸರ್ಕಾರವು ಹೊಸದಾಗಿ ತರುತ್ತಿರುವ ಸಾಫ್ಟ್ವೇರ್ ವ್ಯವಸ್ಥೆಗಳ ಹೆಸರಿನಲ್ಲಿ ನಾಗರಿಕರ ಜೇಬಿಗೆ ಕೈ ಹಾಕುತ್ತಿದೆ. ವಿವಿಧ ನಾಗರಿಕ ಸೇವೆಗಳಿಗೆ ಬರೋಬ್ಬರಿ ₹10,000 ವರೆಗೂ ಭಾರಿ ಶುಲ್ಕವನ್ನು ವಿಧಿಸಲಾಗುತ್ತಿದೆ. ‘ನಿಮ್ಮ ಆಸ್ತಿ, ನಿಮ್ಮ ಹಕ್ಕು’ ಹಾಗೂ ಮನೆ ಬಾಗಿಲಿಗೇ ದಾಖಲೆ ತಲುಪಿಸುತ್ತೇವೆ ಎಂಬುದು ಕೇವಲ ಸುಳ್ಳು ಪ್ರಚಾರವಾಗಿದೆ. ಇದು ಜನಸಾಮಾನ್ಯರ ಹಣವನ್ನು ದೋಚುವ ಪಿಕ್ಪಾಕೆಟ್ ತಂತ್ರವಲ್ಲದೆ ಮತ್ತೇನು ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ಗೆ ಕರ್ನಾಟಕ ರಾಜ್ಯವು ಕೇವಲ ಒಂದು ATM
ದೆಹಲಿ ವರಿಷ್ಠರಿಗೆ ಹಣ ರವಾನಿಸಲು ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ ರಾಜ್ಯವು ಕೇವಲ ಒಂದು ATM ಆಗಿ ಮಾರ್ಪಟ್ಟಿದೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

MUST WATCH : ನಾನು ಟೂರಿಂಗ್ ಟಾಕೀಸ್ ನಡೆಸಿದ್ದೀನಿ – ಹೆಚ್ಡಿಕೆ ಹೇಳಿಕೆಗೆ ಸಿಎಂ ಡಿಕೆ ಟಾಂಗ್




