ಹೊಟ್ಟೆ ಕಿಚ್ಚಿನ ಸುಮಾರ್ ಕೋಳಿ – JDS ಜೆಪಿ ಭವನದ ಗೋಡೆ, ಗೇಟ್ನಲ್ಲಿ ರಾರಾಜಿಸುತ್ತಿದೆ ಲೇವಡಿ ಪೋಸ್ಟರ್!

ಬಿಡದಿ ಟೌನ್ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಪಾದಯಾತ್ರೆ ನಡೆಸುತ್ತಿರುವ ಬೆನ್ನಲ್ಲೇ, ಬೆಂಗಳೂರಿನ ಜೆಪಿ ಭವನದ ಗೋಡೆ ಹಾಗೂ ಗೇಟ್ಗಳಿಗೆ ಆಕ್ಷೇಪಾರ್ಹ ಪೋಸ್ಟರ್ಗಳನ್ನು ಅಂಟಿಸಿರುವ ಮೂಲಕ ಬೆಂಗಳೂರು ಕೇಂದ್ರ ಯುವ ಕಾಂಗ್ರೆಸ್ ಘಟಕ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಹೊಟ್ಟೆ ಕಿಚ್ಚಿನ ಸುಮಾರ್ ಕೋಳಿ
ಬೆಂಗಳೂರು ಕೇಂದ್ರ ಯುವ ಕಾಂಗ್ರೆಸ್ ಘಟಕದ ವತಿಯಿಂದ ಈ ಪೋಸ್ಟರ್ಗಳನ್ನು ಅಂಟಿಸಲಾಗಿದೆ ಎನ್ನಲಾಗಿದ್ದು, ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರನ್ನು ಗುರಿಯಾಗಿಸಿ ‘ಹೊಟ್ಟೆ ಕಿಚ್ಚಿನ ಸುಮಾರ್ ಕೋಳಿ’ ಎಂದು ಲೇವಡಿ ಮಾಡಿರುವ ಪೋಸ್ಟರ್ಗಳು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿವೆ. ವಕ್ಕಲಿಗ ಸಮಾಜದ ಮುಖಂಡರು ಅಧಿಕಾರಕ್ಕೆ ಬಂದಾಗಲೆಲ್ಲಾ ಕುಮಾರಸ್ವಾಮಿ ಅವರಿಗೆ ‘ಹೊಟ್ಟೆಕಿಚ್ಚು’ ಶುರುವಾಗುತ್ತದೆ ಎಂಬ ಆರೋಪವನ್ನೂ ಪೋಸ್ಟರ್ನಲ್ಲಿ ಮಾಡಲಾಗಿದೆ.
ಇದನ್ನು ಓದಿ : ಅವರದು ಎಲುಬಿಲ್ಲದ ನಾಲಿಗೆ – HDK ಗೆ ಸಿಎಂ DK ತಿರುಗೇಟು

‘ಬೇನಾಮಿ ಆಸ್ತಿಗಳನ್ನು’ ರಕ್ಷಿಸಿಕೊಳ್ಳುವ ಉದ್ದೇಶದಿಂದ ನಡೆಸುತ್ತಿರುವ ಹುನ್ನಾರ
ಇದೇ ವೇಳೆ, ಜೆಡಿಎಸ್ ಹಮ್ಮಿಕೊಂಡಿರುವ ಪಾದಯಾತ್ರೆ ತಮ್ಮ ‘ಬೇನಾಮಿ ಆಸ್ತಿಗಳನ್ನು’ ರಕ್ಷಿಸಿಕೊಳ್ಳುವ ಉದ್ದೇಶದಿಂದ ನಡೆಸುತ್ತಿರುವ ಹುನ್ನಾರ ಎಂದು ಕಾಂಗ್ರೆಸ್ ಯುವ ಘಟಕ ಆರೋಪಿಸಿದೆ.
ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ನಡೆದ ಈ ಪೋಸ್ಟರ್ ಅಭಿಯಾನದ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿದ್ದು, ಘಟನೆ ನಡೆದು ಸಮಯ ಕಳೆದರೂ ಸ್ಥಳಕ್ಕೆ ಯಾವುದೇ ಪೊಲೀಸ್ ಸಿಬ್ಬಂದಿ ಆಗಮಿಸದಿರುವುದು ಅಚ್ಚಕಿಗೆ ಕಾರಣವಾಗಿದೆ.
ಇದನ್ನು ನೋಡಿ : ಪಾದಯಾತ್ರೆ ತಡೆಯಲು ಪೊಲೀಸರ ಯತ್ನ- ಬ್ಯಾರಿಕೇಡ್ ತಳ್ಳಿ ಮುನ್ನುಗ್ಗಿದ JDS ಕಾರ್ಯಕರ್ತರು





