ಅವರದು ಎಲುಬಿಲ್ಲದ ನಾಲಿಗೆ ಟೀಕೆ ಮಾಡುತ್ತಿದ್ದಾರೆ ಮಾಡಲಿ : HDK ಗೆ ಸಿಎಂ ಡಿಕೆ ಶಿವಕುಮಾರ್ ತಿರುಗೇಟು

‘SIR’ ಪ್ರಕ್ರಿಯೆ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮಾಡಿರುವ ಆರೋಪಗಳಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. “SIR ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವುದು ನಮ್ಮ ಕೆಲಸವಲ್ಲ. ಎಲುಬಿಲ್ಲದ ನಾಲಿಗೆ ಇರುವವರು ಟೀಕೆ ಮಾಡುತ್ತಿದ್ದಾರೆ ಮಾಡಲಿ” ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.

ಇದು ನನ್ನ ವೈಯಕ್ತಿಕ ವಿಚಾರವಲ್ಲ
ಕರ್ನಾಟಕ ಒಂದು ಮಾಡೆಲ್ ನಾವು ಏನು ಜಾಹಿರಾತು ಕೊಟ್ಟಿದ್ದೆವೊ, ನಾವು ಜನರಿಗೆ ಏನು ಜಾಗೃತಿ ಮೂಡಿಸುತ್ತಿದ್ದೆವೊ ಇದು ನನ್ನ ವೈಯಕ್ತಿಕ ವಿಚಾರವಲ್ಲ ರಾಜ್ಯವನ್ನು ಮುನ್ನಡೆಸುತ್ತಿರುವ ನಾನೊಬ್ಬ ಮುಖ್ಯಸ್ಥನಾಗಿ ಮುಖ್ಯವಾಗಿ ನಾನು, ಪರಮೇಶ್ವರ್ ಅವರು, ಮಂತ್ರಿಗಳಿಗೂ ಶಾಸಕರ ಗಳಿಗೆ ನೀವು ಮತದಾರರ ಹಕ್ಕನ್ನು ಕೊಡಿಸಿ ಅಂತ ಫಸ್ಟ್ ಟೈಮ್ ಪ್ರತಿಯೊಂದರಲ್ಲೂ ಬೂಟ್ ಮಾಡಿ ಹೆಲ್ಪ್ ಲೈನ್ ಮಾಡುತ್ತಿದ್ದೇವೆ ಇತರ ಯಾವ ರಾಜ್ಯದಲ್ಲಿ ಮಾಡಿದಾರೆ ಹೇಳಿ? ನಾವು ಮಾಡಿರುವಂತಹ ಕೆಲಸಕ್ಕೆ ಅವರು ಅಭಿನಂದನೆ ಸಲ್ಲಿಸಬೇಕು.
ಇದನ್ನು ಓದಿ : CM ಆದ್ಮೇಲೂ ಬ್ಲೂಫಿಲ್ಮ್, ಪೋಸ್ಟರ್ ರಾಜಕೀಯ ಬಿಡಲಿಲ್ಲ’ – DK Shivakumar ವಿರುದ್ಧ HDK ವಾಗ್ದಾಳಿ

ಮತದ ಹಕ್ಕಲ್ಲಿ ದೊಡ್ಡ ಸಂಚು ನಡೆಯುತ್ತಿದೆ
“ನಿಮ್ಮ ಮತದಾನದ ಹಕ್ಕಿನ ಮೇಲೆ ದೊಡ್ಡ ಸಂಚು ನಡೆಯುತ್ತಿದೆ. ಬೇರೆ ರಾಜ್ಯಗಳಲ್ಲಿ ನಡೆದಿರುವ ರೀತಿಯ ಘಟನೆಗಳು ಇಲ್ಲಿ ನಡೆಯದಂತೆ ಎಚ್ಚರಿಕೆಯಿಂದಿರಿ ಎಂದು ಎಲ್ಲ ಶಾಸಕರಿಗೂ ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ? ರಾಜ್ಯದ ಜನರ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ ಅಲ್ಲವಾ? ಇದರ ಬಗ್ಗೆ ನಮ್ಮ ಆಲೋಚನೆ ಇದೆ ಪಾಪ ಅವರು ರಾಜಕಾರಣ ಮಾಡುತ್ತಿದ್ದಾರೆ ರಾಜಕಾರಣ ಮಾಡೋರಿಗೆ ಬೇಡ ಅನ್ನೋಕಾಗುತ್ತಾ? ಟೀಕೆ ಮಾಡುತ್ತಾರೆ ಎಲುಬಿಲ್ಲದ ನಾಲಿಗೆ ಟೀಕೆ ಮಾಡುತ್ತಾರೆ ನೀಡಲಿ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

HD ಕುಮಾರಸ್ವಾಮಿ ಆರೋಪವೇನು?
ಈ ವಿಚಾರವಾಗಿ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. SIR ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ. ಈ ಕುರಿತು ಸಾಕ್ಷ್ಯಗಳಿರುವ ಪೆನ್ಡ್ರೈವ್ ಅನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ನೀಡಿದ್ದೇವೆ. ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಅಧಿಕಾರಿಗಳು ಪಾಲಿಸದೇ ಸರ್ಕಾರವನ್ನು ಖುಷಿಪಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಇದನ್ನು ನೋಡಿ : ಶೀಲ ಶಂಕಿಸಿ ಪತಿಯಿಂದ ಪತ್ನಿ ಕೊ* – ಕೊ* ಮಾಡಿ ಪರಾರಿಯಾದ ಪಾಪಿ ಪತಿ





