ಬಿಡದಿ ಟೌನ್ಶಿಪ್ ಯೋಜನೆಗೆ ರೈತರನ್ನು ಬಲವಂತವಾಗಿ ಸ್ಥಳಾಂತರಿಸುವುದಿಲ್ಲ ಎಂದು ಡಿಸಿಎಂ ಡಾ.G Parameshwara ಸ್ಪಷ್ಟಪಡಿಸಿದ್ದಾರೆ..

ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ರೈತರ ಆತಂಕಕ್ಕೆ ಉಪ ಮುಖ್ಯಮಂತ್ರಿ ಡಾ. G Parameshwara ಸ್ಪಷ್ಟನೆ ನೀಡಿದ್ದಾರೆ. ರೈತರನ್ನು ಬಲವಂತವಾಗಿ ಸ್ಥಳಾಂತರಿಸಿ ಟೌನ್ಶಿಪ್ ನಿರ್ಮಾಣ ಮಾಡುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.

ರೈತರ ಒಪ್ಪಿಗೆಯೊಂದಿಗೆ ಮಾತ್ರ ಜಮೀನು ಸ್ವಾಧೀನ
ಬಿಡದಿ ಟೌನ್ಶಿಪ್ ವಿಚಾರದಲ್ಲಿ ಮುಖ್ಯಮಂತ್ರಿ ಈಗಾಗಲೇ ಸ್ಪಷ್ಟ ಸೂಚನೆ ನೀಡಿದ್ದಾರೆ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಸಂಪೂರ್ಣ ಒಪ್ಪಿಗೆಯೊಂದಿಗೆ ಮಾತ್ರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದು ಡಿಸಿಎಂ ತಿಳಿಸಿದ್ದಾರೆ.
ಅಲ್ಲದೆ, ರೈತರಿಗೆ ನೀಡಲಾಗುವ ಪರಿಹಾರ ಮೊತ್ತ ಸಮರ್ಪಕವಾಗಿಲ್ಲ ಎಂದು ಅನಿಸಿದರೆ, ಅದನ್ನು ಹೆಚ್ಚಿಸುವ ಸಾಧ್ಯತೆಯನ್ನೂ ಸರ್ಕಾರ ಪರಿಗಣಿಸಲಿದೆ ಎಂದು ಹೇಳಿದರು.
MUST READ : ಹೆಚ್ಡಿಕೆ ಬಳಿ 60ಕ್ಕೂ ಹೆಚ್ಚು ದುಬಾರಿ ವಾಚ್ಗಳಿವೆ ಎಂದ ಪ್ರದೀಪ್ ಈಶ್ವರ್

ಬಲವಂತದ ಭೂಸ್ವಾಧೀನಕ್ಕೆ ಅವಕಾಶವಿಲ್ಲ
ರೈತರನ್ನು ಒತ್ತಾಯಪೂರ್ವಕವಾಗಿ ಜಮೀನಿನಿಂದ ತೆರವುಗೊಳಿಸಿ ಟೌನ್ಶಿಪ್ ನಿರ್ಮಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಯಾವುದೇ ಗೊಂದಲ ಅಥವಾ ವಿವಾದ ಉಂಟಾಗದಂತೆ ಯೋಜನೆಯನ್ನು ಜಾರಿಗೊಳಿಸುವುದೇ ಸರ್ಕಾರದ ಉದ್ದೇಶ ಎಂದು ಡಾ.ಜಿ ಪರಮೇಶ್ವರ್ ಸ್ಪಷ್ಟಪಡಿಸಿದರು.

ಎಐ ಹಬ್ಗಾಗಿ ಈ ಯೋಜನೆ ಅಲ್ಲ
ಬಿಡದಿ ಪ್ರದೇಶದಲ್ಲಿ ಎಐ ಹಬ್ ನಿರ್ಮಾಣಕ್ಕಾಗಿ ಈ ಯೋಜನೆ ಕೈಗೊಳ್ಳಲಾಗುತ್ತಿದೆ ಎಂಬ ಊಹಾಪೋಹಗಳನ್ನು ಡಿಸಿಎಂ ತಳ್ಳಿಹಾಕಿದರು.
ಎಐ ಕೇಂದ್ರಗಳ ಸ್ಥಾಪನೆಗೆ ಯಾವ ಮಾನದಂಡಗಳು ಅನ್ವಯಿಸುತ್ತವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದ್ದರಿಂದ, ಬಿಡದಿ ಟೌನ್ಶಿಪ್ ಯೋಜನೆ ಎಐ ಹಬ್ಗೆ ಸಂಬಂಧಪಟ್ಟದ್ದಲ್ಲ ಎಂದು ಅವರು ಹೇಳಿದರು.

ಬೆಂಗಳೂರು ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶ
ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಸೇರಿದಂತೆ ಹಲವು ಸಮಸ್ಯೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ನಗರದ ಸುತ್ತಮುತ್ತ ಯೋಜಿತ ಟೌನ್ಶಿಪ್ಗಳನ್ನು ಅಭಿವೃದ್ಧಿಪಡಿಸುವ ಉದ್ದೇಶ ಸರ್ಕಾರದ್ದಾಗಿದೆ.
ನೈಸ್ ಯೋಜನೆಯ ಸಂದರ್ಭದಲ್ಲಿ ಏಳು ಟೌನ್ಶಿಪ್ಗಳ ಪ್ರಸ್ತಾವನೆ ಬಂದಿತ್ತು. ಅದರಂತೆ ಕೋಲಾರ, ತುಮಕೂರು ಮತ್ತು ರಾಮನಗರದಂತಹ ಪ್ರದೇಶಗಳನ್ನು ಅಭಿವೃದ್ಧಿಪಡಿಸಿದರೆ ಬೆಂಗಳೂರಿನ ಮೇಲಿರುವ ಜನಸಂಖ್ಯೆ ಹಾಗೂ ಮೂಲಸೌಕರ್ಯಗಳ ಒತ್ತಡ ಕಡಿಮೆಯಾಗಲಿದೆ ಎಂದು ಡಿಸಿಎಂ ಅಭಿಪ್ರಾಯಪಟ್ಟರು.
MUST WATCH : ಮಧುಗಿರಿಯಲ್ಲಿ ಅಪರೂಪದ ಜೀವಿ ಪ್ರತ್ಯಕ್ಷ ಗ್ರಾಮಸ್ಥರ ಭಯಕ್ಕೆ ಬ ಯಾದ ಪ್ಯಾಂಗೊಲಿನ್




