ಶನಿವಾರ ಬೆಳಿಗ್ಗೆ 4 ಗಂಟೆಯಿಂದ ನಗರದಲ್ಲಿ ಎಲ್ಲಾ Metro ಮಾರ್ಗಗಳಲ್ಲಿ ರೈಲು ಸಂಚಾರ ಆರಂಭವಾಗಲಿದೆ.

ಬೆಂಗಳೂರು ನಗರದಲ್ಲಿ ನಾಳೆ ನಡೆಯಲಿರುವ ಬಿಡಿಎ ಸಸಿ ನೆಡುವ ಕಾರ್ಯಕ್ರಮ ಹಾಗೂ ವಾಕ್ಥಾನ್ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ, ವಿಶೇಷ Metro ಸೇವೆಯನ್ನು ಘೋಷಿಸಿದೆ.
ಬೆಳಗಿನಜಾವ 4 ಗಂಟೆಯಿಂದ ಬೆಂಗಳೂರಿನಲ್ಲಿ ಮೆಟ್ರೋ ಸೇವೆ ಆರಂಭ
BMRCL ಪ್ರಕಟಣೆಯ ಪ್ರಕಾರ, ನಾಳೆ ನಗರದ ಎಲ್ಲಾ ಮೆಟ್ರೋ ಮಾರ್ಗಗಳ ಟರ್ಮಿನಲ್ ನಿಲ್ದಾಣಗಳಿಂದ ಬೆಳಗಿನ ಜಾವ 4 ಗಂಟೆಗೆ ರೈಲು ಸಂಚಾರ ಆರಂಭವಾಗಲಿದೆ. ಸಾಮಾನ್ಯವಾಗಿ ಶನಿವಾರ ಬೆಳಿಗ್ಗೆ 5 ಗಂಟೆಗೆ ಆರಂಭವಾಗುವ ಮೆಟ್ರೋ ಸೇವೆಯನ್ನು ಈ ಬಾರಿ ಒಂದು ಗಂಟೆ ಮುಂಚಿತವಾಗಿ ಆರಂಭಿಸಲಾಗುತ್ತಿದೆ.
ಇದನ್ನು ಓದಿ : ಬೆಂಗಳೂರು Metro ಬ್ಲೂ ಲೈನ್ ಶೀಘ್ರ ಆರಂಭ..!!

ಬಿಎಂಆರ್ಸಿಎಲ್ ಮಾಧ್ಯಮ ಪ್ರಕಟಣೆಯಲ್ಲಿ ಏನಿದೆ?
ಬಿಎಂಆರ್ಸಿಎಲ್ ಈ ಕುರಿತಾಗಿ ಮಾಧ್ಯಮ ಪ್ರಕಟಣೆ ಹೊಡಿಸಿದೆ. ಬಿಡಿಎ ವತಿಯಿಂದ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಹಾಗೂ ವಾಕ್ಥಾನ್ನಲ್ಲಿ ಭಾಗವಹಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಜೂನ್ 27ರ ಶನಿವಾರ ವಿಶೇಷ ಮುಂಜಾನೆ ಮೆಟ್ರೋ ಸೇವೆ ಒದಗಿಸಲಾಗುತ್ತಿದೆ.
ಬಿಡಿಎ ಆಯೋಜಿಸಿರುವ ಸಸಿ ನೆಡುವ ಕಾರ್ಯಕ್ರಮ ಹಾಗೂ ವಾಕ್ಥಾನ್ನಲ್ಲಿ ಭಾಗವಹಿಸುವವರು ಯಾವುದೇ ತೊಂದರೆಯಿಲ್ಲದೆ ತಮ್ಮ ಗಮ್ಯಸ್ಥಾನ ತಲುಪುವ ಉದ್ದೇಶದಿಂದ ಈ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಪರಿಸರ ಸ್ನೇಹಿ Metro ಸೇವೆಯನ್ನು ಬಳಸುವಂತೆ ಬಿಎಂಆರ್ಸಿಎಲ್ ಮನವಿ
ಸಾರ್ವಜನಿಕರು ಈ ವಿಶೇಷ ಮುಂಜಾನೆ ಮೆಟ್ರೋ ಸೇವೆಯನ್ನು ಸದುಪಯೋಗಪಡಿಸಿಕೊಂಡು, ಪರಿಸರ ಸಂರಕ್ಷಣೆಯ ಉದ್ದೇಶದಿಂದ ನಡೆಯುವ ಸಸಿ ನೆಡುವ ಕಾರ್ಯಕ್ರಮ ಮತ್ತು ವಾಕ್ಥಾನ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬಿಎಂಆರ್ಸಿಎಲ್ ಮನವಿ ಮಾಡಿದೆ.
ಅಲ್ಲದೆ, ಸುರಕ್ಷಿತ, ಸುಗಮ ಹಾಗೂ ಪರಿಸರ ಸ್ನೇಹಿ ಮೆಟ್ರೋ ಸೇವೆಯನ್ನು ಬಳಸುವಂತೆ ಮನವಿ ಮಾಡಿರುವ ಬಿಎಂಆರ್ಸಿಎಲ್, ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂಚಿತವಾಗಿಯೇ ಯೋಜಿಸಿಕೊಳ್ಳುವಂತೆ ಸೂಚಿಸಿದೆ.

ಇದನ್ನು ನೋಡಿ : VIJAY ನಿನ್ನೆ ಮೊನ್ನೆ ಬಂದಿರೋ CM ಅವನು..! – ರಾಜಕೀಯದ ಗಂಧನೇ ಗೊತ್ತಿಲ್ಲ ಆದ್ರು ಧಮ್ಕಿ ಹಾಕ್ತಾರೆ




