10 ಲಕ್ಷದ ದುಬಾರಿ ವಾಚ್ ಕಟ್ತಾರಾ HDK ಕುಮಾರಸ್ವಾಮಿ..?

ಈ ಹಿಂದೆ ಹ್ಯೂಬ್ಲೆಟ್ ವಾಚ್ ಕಂಟಕ ಮಾಜಿ ಸಿಎಂ ಸಿದ್ದರಾಮಯ್ಯರನ್ನ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿಸಿತ್ತು. ಇದೇ ರೀತಿಯ ದುಬಾರಿ ವಾಚ್ ಪ್ರಕರಣವೊಂದು ಇದೀಗ ಮತ್ತೇ ಸದ್ದು ಮಾಡ್ತಿದೆ. ಈ ಬಾರಿ ದುಬಾರಿ ವಾಚ್ ಸಂಕಷ್ಟ ತಲೆದೂರಿರೋದು ಮಣ್ಣಿನ ಮಗ ಕುಮಾರಸ್ವಾಮಿ ವಿರುದ್ದ. ಹೌದು, ಹೆಚ್ಡಿ ಕುಮಾರಸ್ವಾಮಿ ಅವರ ಬಳಿ 60 ಕ್ಕೂ ಹೆಚ್ಚು ದುಬಾರಿ ವಾಚ್ ಗಳಿಗೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಆರೋಪಿಸಿದ್ದಾರೆ. ಈ ಆರೋಪ ಇದೀಗ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗಳನ್ನ ಹುಟ್ಟುಹಾಕಿದೆ.

ಕುಮಾರಸ್ವಾಮಿ ಅವ್ರ ಪಂಚೆ ಒಂದೇ ಸಿಂಪಲ್, ಇನ್ನೆಲ್ಲವೂ ಕಾಸ್ಟ್ಲಿ
ಈ ಹಿಂದೆ ಕುಮಾರಸ್ವಾಮಿ ಅವ್ರು ಸಿಎಂ ಆಗಿದ್ದಾಗ 62 ವಾಚ್ ಗಳನ್ನ ಕಟ್ಟಿದ್ರು. ಅದರಲ್ಲಿ 72 ಲಕ್ಷದ ದುಬಾರಿ ವಾಚ್ ಕೂಡ ಇತ್ತು.
ಕುಮಾರಸ್ವಾಮಿ ಅವ್ರ ಪಂಚೆ ಒಂದೇ ಸಿಂಪಲ್, ಇನ್ನೆಲ್ಲವೂ ಕಾಸ್ಟ್ಲಿ ಎಂದು ಪ್ರದೀಪ್ ಈಶ್ವರ್ ಗಂಭೀರವಾದ ಆರೋಪವೊಂದನ್ನ ಮಾಡಿದ್ದಾರೆ.
ಬಿಡದಿ ಟೌನ್ ಶಿಪ್ ವಿಚಾರದಲ್ಲಿ ರೈತರ ಪರ ಕುಮಾರಸ್ವಾಮಿ ಹೋರಾಟಕ್ಕೆ ಪ್ರದೀಪ್ ಈಶ್ವರ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನು ಓದಿ : CM ಆದ್ಮೇಲೂ ಬ್ಲೂಫಿಲ್ಮ್, ಪೋಸ್ಟರ್ ರಾಜಕೀಯ ಬಿಡಲಿಲ್ಲ’ – DK Shivakumar ವಿರುದ್ಧ HDK ವಾಗ್ದಾಳಿ

ದುಬಾರಿ ವಾಚ್ ಕಟ್ತಾರೆ ಎಂದ ಪ್ರದೀಪ್ ಈಶ್ವರ್ಗೆ HDK ತಿರುಗೇಟು
ಪ್ರದೀಪ್ ಈಶ್ವರ್ ರ ಈ ಹೇಳಿಕೆ ಸಾಕಷ್ಟು ಸದ್ದು ಮಾಡ್ತಿರೋ ಬೆನ್ನಲ್ಲೇ ಹೆಚ್.ಡಿ ಕುಮಾರಸ್ವಾಮಿ ಅವ್ರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅದೇನೋ ನನ್ನ ಬಳಿ ದುಬಾರಿ ವಾಚ್ ಇದೆ ಅಂತಾ ಹೇಳಿದ್ದಾರೆ.
ನೋಡಿ ಇದೊಂದು ಅಂಬೇಡ್ಕರ್ ಚಿತ್ರ ಇರುವ ಸಾಧಾರಣ ಹೆಚ್ಎಂಟಿ ವಾಚ್ ಕಟ್ಟಿದ್ದೇನೆ ಎಂದು ಕ್ಯಾಮೆರಾಗಳಿಗೆ ತೋರಿಸಿದ್ದಾರೆ.
ಅವರ ಬಳಿ ಎಸ್ ಐಟಿ ಇದೆ ಅಲ್ವಾ, ನನ್ನ ಮನೆಗೆ ಕಳಿಸಿ ತನಿಖೆ ಮಾಡಿಸಲು ಹೇಳಿ ಎಂದು ಪ್ರದೀಪ್ ಈಶ್ವರ್ ಹೇಳಿಕೆಗೆ ಟಾಂಗ್ ನೀಡಿದ್ದಾರೆ.

ಸಿದ್ದರಾಮಯ್ಯ ಅವರ ಹ್ಯೂಬ್ಲೆಟ್ ವಾಚ್ ಪ್ರಕರಣದ ಬಳಿಕ ಅಂತದ್ದೇ ಆರೋಪವೊಂದು ಕುಮಾರಸ್ವಾಮಿ ವಿರುದ್ದ ಕೇಳಿಬಂದಿದ್ದು, ಈ ದುಬಾರಿ ವಾಚ್ ವಿಚಾರ ಎಲ್ಲಿಗೆ ಹೋಗಿ ಮುಟ್ಟುತ್ತೆ ಅನ್ನೋದನ್ನ ಕಾದು ನೋಡ್ಬೇಕಿದೆ.
ಇದನ್ನು ನೋಡಿ : ನಾನೇನು ಅಲ್ಲಿ ಗಲಾಟೆ ಮಾಡೋಕೆ ಹೋಗ್ತಿಲ್ಲ ಸರ್ಕಾರದ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಕಿಡಿ




