
BBK 13 : ಮನೆಯಿಂದ ಹೋದ್ರೂ ಪರವಾಗಿಲ್ಲ, ಇಬ್ರು ಹುಡುಗ್ರನ್ನ ಹೊಡೆದು ಹೋಗ್ತೀನಿ: ಆಸಿಯಾ ವೈಲೆಂಟ್
ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವಿನ ಕಿತ್ತಾಟ ದಿನೇ ದಿನೇ ತಾರಕಕ್ಕೇರುತ್ತಿದ್ಈದು, ಈ ನಡುವೆ ಕಿಚ್ಚನ ಚಪ್ಪಾಳೆ ಪಡೆದುಕೊಂಡ ಮೊದಲ ಕಂಟೆಸ್ಟಂಟ್ ಆಸಿಯಾ ಫಿರ್ದೋಸ್, ಇದೀಗ ಲಿಖಿತ್ ಮತ್ತು ಮಾಡರ್ನ್ ಮಹಾಕವಿ ಮಂಜ ವಿರುದ್ಧ ಸಿಡಿದೆದ್ದಿದ್ದಾರೆ.
‘ಮಂಗನ ಥರ ಕಾಣ್ತೀಯ’
ಬಿಗ್ಬಾಸ್ ಬಿಡುಗಡೆ ಮಾಡಿರುವ ಹೊಸ ಪ್ರೋಮೋದಲ್ಲಿ ಆಸಿಯಾ ಸಿಟ್ಟಿನಿಂದ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಅಸಲಿಗೆ ಆಸಿಯಾ ಕೋಪಕ್ಕೆ ಕಾರಣವಾಗಿದ್ದು ಲಿಖಿತ್ ವರ್ತನೆ. ಮನೆಯ ಪ್ರಧಾನ ಬಾಗಿಲ ಬಳಿ ನಿಂತಿದ್ದ ಲಿಖಿತ್, ಅಲ್ಲಿಂದಲೇ ಆಸಿಯಾರನ್ನು ಅಣುಕಿಸುತ್ತಾ ವ್ಯಂಗ್ಯ ಮಾಡುತ್ತಿದ್ರು. ಈ ವೇಳೆ ಡೈನಿಂಗ್ ಹಾಲ್ನಲ್ಲಿ ಕುಳಿತಿದ್ದ ಆಸಿಯಾ, ಲಿಖಿತ್ನ ವರ್ತನೆಗೆ ಪ್ರತಿಕ್ರಿಯಿಸಿ, ‘ಮಂಗನ ಥರ ಕಾಣ್ತೀಯ’ ಎಂದು ಹೇಳಿದ್ದಾರೆ.
READ THIS : ಮನೆಯವರಿಗೆ ಬಿಗ್ ಶಾಕ್ – ದೊಡ್ಮನೆಗೆ ತಾಂಡವ್ ರೀ-ಎಂಟ್ರಿ!

‘ಮುಚ್ಕೊಂಡ್ ಇದ್ರೆ ಸರಿ ಇವಾಗ’
ಆದರೂ ಲಿಖಿತ್ ಸುಮ್ಮನಾಗದೆ ಅದೇ ರೀತಿ ವರ್ತನೆ ಮುಂದುವರಿಸಿದಾಗ, ಆಸಿಯಾ ಕುಳಿತಿದ್ದ ಜಾಗದಿಂದ ಎದ್ದು ಅವರ ಬಳಿಗೆ ತೆರಳಿ, ‘ಮುಚ್ಕೊಂಡ್ ಇದ್ರೆ ಸರಿ ಇವಾಗ’ ಎಂದು ಗರಂ ಆಗಿದ್ದಾರೆ. ಇದೇ ವೇಳೆ ಜೈಲಿನಲ್ಲಿದ್ದ ಮಾಡರ್ನ್ ಮಹಾಕವಿ ಮಂಜ ಸೀಟಿ ಹೊಡೆದು ಲಿಖಿತ್ಗೆ ಬೆಂಬಲ ಸೂಚಿಸಿದ್ದಾರೆ. ಇದರಿಂದ ಮತ್ತಷ್ಟು ಕೆರಳಿದ ಆಸಿಯಾ, ಮಂಜನ ವಿರುದ್ಧವೂ ಕಿಡಿಕಾರಿದ್ದಾರೆ. ಇಬ್ಬರನ್ನೂ ತರಾಟೆಗೆ ತೆಗೆದುಕೊಂಡ ಆಸಿಯಾ, ‘ಮುಚ್ಕೊಂಡ್ ಕೂತ್ಕೊಳ್ಳೊಲೋ’ ಎಂದಿದ್ದಾರೆ.
BBK 13 – ಮನೆಯಿಂದ ಹೋದ್ರೂ ಪರವಾಗಿಲ್ಲ, ಇಬ್ರು ಹುಡುಗ್ರನ್ನ ಹೊಡೆದು ಹೋಗ್ತೀನಿ
ಕೋಪದ ಭರದಲ್ಲಿ ಆಸಿಯಾ, ‘ನಾನು ಮನೆಯಿಂದ ಹೋದ್ರೂ ಪರವಾಗಿಲ್ಲ, ಇಬ್ರು ಹುಡುಗ್ರನ್ನ ಹೊಡೆದು ಹೋಗ್ತೀನಿ’ ಎಂದು ಎಚ್ಚರಿಕೆ ನೀಡಿದ್ದಾರೆ.
MUST WATCH : ಕೈ ಪಾಳಯದಲ್ಲಿ ಪಟ್ಟಕ್ಕಾಗಿ ಪೈಪೋಟಿ ತುಮಕೂರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸ್ ಅರ್ಜಿ




