
BELAGAVI : ಬೈಕ್ʼನಲ್ಲಿ ಹೋಗುತ್ತಿದ್ದಾಗ ಕುತ್ತಿಗೆಗೆ ಸಿಲುಕಿದ ಮಾಂಜಾ ದಾರ – 19 ವರ್ಷದ ಯುವಕನ ದಾರುಣ ಅಂತ್ಯ
ಗಾಳಿಪಟ ಹಾರಿಸುವ ಸಂಭ್ರಮ ಬೆಳಗಾವಿಯಲ್ಲಿ ಜೀವಕ್ಕೆ ಕಂಟಕವಾಗುತ್ತಿದೆ. ಗಾಳಿಪಟ ಹಿಡಿಯಲು ಹೋಗಿ 9 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ, ಇದೀಗ ಗಾಳಿಪಟದ ಮಾಂಜಾ ದಾರಕ್ಕೆ ಸಿಲುಕಿ 19 ವರ್ಷದ ಯುವಕ ಮೃತಪಟ್ಟ ಮತ್ತೊಂದು ದುರಂತ ನಡೆದಿದೆ.
ದಾರುಣ ಅಂತ್ಯ ಕಂಡ 19 ವರ್ಷದ ಯುವಕ
ಮಹಾಂತೇಶನಗರದ ನಿವಾಸಿ 19 ವರ್ಷದ ಧ್ರುವ ಸಂತೋಷ ಕರ್ಜಗಿ ಮೃತ ಯುವಕ. ಧ್ರುವ ದ್ವಿಚಕ್ರ ವಾಹನದಲ್ಲಿ ಗಾಂಧಿನಗರದ ರಾಷ್ಟ್ರೀಯ ಹೆದ್ದಾರಿ ಬಳಿ ತೆರಳುತ್ತಿದ್ದ ವೇಳೆ ಗಾಳಿಪಟದ ಮಾಂಜಾ ದಾರ ಆತನ ಕುತ್ತಿಗೆಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಧ್ರುವನನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.
READ THIS : ಕಸ ವಿಂಗಡನೆ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು – ತುಂಡು ತುಂಡಾದ ದೇಹ!
BELAGAVI – ಎರಡೇ ದಿನದಲ್ಲಿ ಇಬ್ಬರು ಬಲಿ!
ಇದಕ್ಕೂ ಮುನ್ನ ವಡಗಾವ್ನ ನಿಜಾಮಿಯಾನಗರದಲ್ಲಿ ಗಾಳಿಪಟ ಹಿಡಿಯಲು ಯತ್ನಿಸುತ್ತಿದ್ದ 9 ವರ್ಷದ ಸಾದ್ ಮಂಜೂರಅಲಿ ಟಿನವಾಲೆ ಕಟ್ಟಡದ ಎರಡನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದ. ಆ ಘಟನೆ ಮಾಸುವ ಮುನ್ನವೇ ಇದೀಗ ಮಾಂಜಾ ದಾರಕ್ಕೆ ಯುವಕ ಬಲಿಯಾಗಿರುವುದು ಬೆಳಗಾವಿಯಲ್ಲಿ ಆತಂಕ ಹೆಚ್ಚಿಸಿದೆ.

MUST WATCH : ಚುನಾವಣೆಗೆ ದಿನಗಣನೆ ಆರಂಭ ಪದವೀಧರರ ಮತಕ್ಕೆ ಅಭ್ಯರ್ಥಿಗಳ ಕಸರತ್ತು




