
17 ವರ್ಷದ ಕ್ರಿಕೆಟ್ ಕರಿಯರ್ಗೆ ಗುಡ್ಬೈ ಹೇಳಿದ Yuzvendra Chahal !
ಭಾರತ ತಂಡದ ಹಿರಿಯ ಲೆಗ್ಸ್ಪಿನ್ನರ್ ಯಜುವೇಂದ್ರ ಚಹಲ್ ಪ್ರಥಮ ದರ್ಜೆ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಶುಕ್ರವಾರ ಈ ನಿರ್ಧಾರ ಪ್ರಕಟಿಸುವ ಮೂಲಕ 17 ವರ್ಷಗಳ ಅವರ ಕೆಂಪು ಚೆಂಡಿನ ಕ್ರಿಕೆಟ್ ಪಯಣಕ್ಕೆ ತೆರೆ ಎಳೆದಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಭಾರತವನ್ನು ಪ್ರತಿನಿಧಿಸುವ ಬಹುದಿನಗಳ ಕನಸು ನನಸಾಗದಿದ್ದರೂ, ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ತಮ್ಮ ಪಯಣ ಮುಂದುವರಿಸುವುದಾಗಿ ಚಹಲ್ ಸ್ಪಷ್ಟಪಡಿಸಿದ್ದಾರೆ.
72 ಏಕದಿನ ಹಾಗೂ 80 ಟಿ20 ಪಂದ್ಯಗಳನ್ನಾಡಿದ್ದ ಚಹಲ್
35 ವರ್ಷದ ಚಹಲ್ ಭಾರತ ಪರ 72 ಏಕದಿನ ಹಾಗೂ 80 ಟಿ20 ಪಂದ್ಯಗಳನ್ನು ಆಡಿದ್ದಾರೆ. ಆದರೆ ಅವರಿಗೆ ಟೆಸ್ಟ್ ತಂಡದಲ್ಲಿ ಆಡುವ ಅವಕಾಶ ಲಭಿಸಿಲ್ಲ. 2023ರ ಆಗಸ್ಟ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡಿದ ಟಿ20 ಪಂದ್ಯವೇ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ.
READ THIS : ಲೆಜೆಂಡ್ಸ್ ವಿಶ್ವ ಚಾಂಪಿಯನ್ಷಿಪ್ಗೆ ಮರಳಲು ಎಬಿಡಿ, ಗೇಲ್ ಸಜ್ಜು!

ನನ್ನ ಆಟ ಇನ್ನೂ ಮುಗಿದಿಲ್ಲ – Yuzvendra Chahal
ಪ್ರಥಮ ದರ್ಜೆ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರೂ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಸರಿಯುವ ಯಾವುದೇ ಉದ್ದೇಶವಿಲ್ಲ ಎಂದು ಚಹಲ್ ತಿಳಿಸಿದ್ದಾರೆ. “ನನ್ನ ಆಟ ಇನ್ನೂ ಮುಗಿದಿಲ್ಲ. ದೇಶಕ್ಕಾಗಿ ಆಡುವ ಹಸಿವು ನನ್ನಲ್ಲಿ ಇಂದಿಗೂ ಜೀವಂತವಾಗಿದೆ. ನನ್ನಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಬಾಕಿ ಇದೆ ಎಂದು ನಂಬಿದ್ದೇನೆ. ಏಕದಿನ ಮತ್ತು ಟಿ20 ಮಾದರಿಯಲ್ಲಿ ಮತ್ತೆ ಭಾರತ ತಂಡವನ್ನು ಪ್ರತಿನಿಧಿಸಲು ನನ್ನ ಸರ್ವಸ್ವವನ್ನೂ ಧಾರೆಯೆರೆಯುತ್ತೇನೆ,” ಎಂದು ಅವರು ಹೇಳಿದ್ದಾರೆ.
ತಮ್ಮ ವೃತ್ತಿಜೀವನದುದ್ದಕ್ಕೂ ನೀಡಿದ ನಿರಂತರ ಬೆಂಬಲಕ್ಕಾಗಿ ಹರ್ಯಾಣ ಕ್ರಿಕೆಟ್ ಸಂಸ್ಥೆಗೆ ಚಹಲ್ ಕೃತಜ್ಞತೆ ಸಲ್ಲಿಸಿದ್ದಾರೆ. ಸಂಸ್ಥೆಯ ಮಾಜಿ ಪದಾಧಿಕಾರಿಗಳಾದ ರಣಬೀರ್ ಸಿಂಗ್ ಮಹಿಂದ್ರಾ ಮತ್ತು ಅನಿರುದ್ಧ್ ಸಿಂಗ್ ಚೌಧರಿ ಅವರಿಗೂ ಅವರು ವಿಶೇಷ ಧನ್ಯವಾದ ಅರ್ಪಿಸಿದ್ದಾರೆ.
MUST WATCH : ವೇತನ ಪರಿಷ್ಕರಣೆಗೆ ನೌಕರರ ಪಟ್ಟು ಸಿದ್ದಗಂಗಾ ಮಠದಿಂದ ಬೆಂಗಳೂರು ಚಲೋ





