
ಲೆಜೆಂಡ್ಸ್ ವಿಶ್ವ ಚಾಂಪಿಯನ್ಷಿಪ್ಗೆ ಮರಳಲು ಯುವರಾಜ್, ABD, ಗೇಲ್ಸ್ ಸಜ್ಜು!
ವಿಶ್ವ ಕ್ರಿಕೆಟ್ನ ದಿಗ್ಗಜ ಆಟಗಾರರು ಮತ್ತೊಮ್ಮೆ ಮೈದಾನದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ (WCL) ಟಿ20 ಲೀಗ್ನ ಮೂರನೇ ಆವೃತ್ತಿ ಅಕ್ಟೋಬರ್ 3ರಿಂದ 18ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನಡೆಯಲಿದೆ. ಇದೇ ಮೊದಲ ಬಾರಿಗೆ ಮಧ್ಯಪ್ರಾಚ್ಯದಲ್ಲಿ WCL ಆಯೋಜನೆಯಾಗುತ್ತಿದ್ದು, ದುಬೈ ಮತ್ತು ಶಾರ್ಜಾದ ಪ್ರಮುಖ ಕ್ರೀಡಾಂಗಣಗಳು ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.
ಎರಡನೇ ಆವೃತ್ತಿಯನ್ನು 42.5 ಕೋಟಿಗೂ ಅಧಿಕ ಮಂದಿ ವೀಕ್ಷಣೆ
ಇಂಗ್ಲೆಂಡ್ನಲ್ಲಿ ನಡೆದ ಮೊದಲ ಎರಡು ಆವೃತ್ತಿಗಳ ಬಳಿಕ ಟೂರ್ನಿ ಇದೀಗ ಯುಎಇಗೆ ಕಾಲಿಟ್ಟಿದೆ.
ಇನ್ನು ಎರಡನೇ ಆವೃತ್ತಿಯನ್ನು ವಿಶ್ವದಾದ್ಯಂತ 42.5 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದರು ಎಂದು ಆಯೋಜಕರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮೂರನೇ ಆವೃತ್ತಿಯನ್ನು ಯುಎಇಯಲ್ಲಿ ಆಯೋಜಿಸುವ ಮೂಲಕ ಟೂರ್ನಿಯ ಜಾಗತಿಕ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶ ಹೊಂದಲಾಗಿದೆ.
READ THIS : ಶತಕ ಸಿಡಿಸಿ ತವರು ನೆಲದಲ್ಲಿ ಅಪರೂಪದ ದಾಖಲೆ ಬರೆದ ಕೊಹ್ಲಿ!

ಮತ್ತೆ ಮೈದಾನಕ್ಕಿಳಿಯಲಿರುವ ಕ್ರಿಕೆಟ್ ದಿಗ್ಗಜರು
ಮೂರನೇ ಆವೃತ್ತಿಯಲ್ಲಿ ಯುವರಾಜ್ ಸಿಂಗ್, ಶಾಹಿದ್ ಅಫ್ರಿದಿ, ಮೊಹಮ್ಮದ್ ಹಫೀಜ್, ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ಡೇವಿಡ್ ವಾರ್ನರ್,
ಮೊಯೀನ್ ಅಲಿ ಮತ್ತು ಮಹಮದುಲ್ಲಾ ರಿಯಾದ್ ಸೇರಿದಂತೆ ಹಲವು ಖ್ಯಾತ ಮಾಜಿ ಕ್ರಿಕೆಟಿಗರು ಕಣಕ್ಕಿಳಿಯಲಿದ್ದಾರೆ. ಇವರ ಆಗಮನ ಟೂರ್ನಿಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.
ಕ್ರಿಸ್ ಗೇಲ್ ಅವರ ಸ್ಫೋಟಕ ಸಿಕ್ಸರ್ಗಳು, ABD ಅವರ 360 ಡಿಗ್ರಿ ಬ್ಯಾಟಿಂಗ್ ಹಾಗೂ ಯುವರಾಜ್ ಸಿಂಗ್ ಅವರ ಆಕ್ರಮಣಕಾರಿ ಆಟವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಲು ಅಭಿಮಾನಿಗಳಿಗೆ ಅವಕಾಶ ದೊರೆಯಲಿದೆ.
ಭಾರತ–ಪಾಕಿಸ್ತಾನ ನಡುವಿನ ಕದನಕ್ಕೆ ವೇದಿಕೆ
ಭಾರತ–ಪಾಕಿಸ್ತಾನ ಕದನಕ್ಕೆ ವಿಶೇಷ್ಸ್ ನಡುವಿನ ಪಂದ್ಯ ವಿಶೇಷ ಗಮನ ಸೆಳೆಯುವ ನಿರೀಕ್ಷೆಯಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹಲವು ಸ್ಮರಣೀಯ ಪಂದ್ಯಗಳಿಗೆ ಸಾಕ್ಷಿಯಾಗಿರುವ ಭಾರತ ಶಾಹಿದ್ ಅಫ್ರಿದಿ ಮತ್ತು ಮೊಹಮ್ಮದ್ ಹಫೀಜ್ ಅವರಂತಹ ಮಾಜಿ ತಾರೆಯರು ಮುಖಾಮುಖಿಯಾಗುವ ಸಾಧ್ಯತೆಯಿರುವುದರಿಂದ ಈ ಪಂದ್ಯಕ್ಕೆ ವಿಶೇಷ ನಿರೀಕ್ಷೆ ಮೂಡಿದೆ.

MUST WATCH : ನೀರಿಗಾಗಿ ಬೀದಿಗಿಳಿದ ಮಹಿಳೆಯರು – ಖಾಲಿ ಬಿಂದಿಗೆ ಹಿಡಿದು ಬೃಹತ್ ಪ್ರೊಟೆಸ್ಟ್




