
MYSURU : ಪ್ರದೀಪ್–ಪ್ರಕಾಶ್ ಇಬ್ಬರೂ ಹುಚ್ಚರು: ಮುಂದಿನ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್ʼಗೆ ಟಿಕೆಟ್ ಸಿಗಲ್ಲ ಎಂದ ಪ್ರತಾಪ್ ಸಿಂಹ
ನಟ ಪ್ರಕಾಶ್ ರಾಜ್ ಹಾಗೂ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹೌದು.. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಇಬ್ಬರು ಹುಚ್ಚರು ಎಂದಿದ್ದಾರೆ.
“ಹುಚ್ಚರನ್ನು ಯಾರಾದರೂ ಬಂಧಿಸಿ ಜೈಲಿಗೆ ಹಾಕುತ್ತಾರಾ?”
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಕುರಿತು ಪ್ರಕಾಶ್ ರಾಜ್ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಮೋದಿ ತಮ್ಮನ್ನು 13 ವರ್ಷಗಳಿಂದ ಬಂಧಿಸಿಲ್ಲ ಎಂಬ ಪ್ರಕಾಶ್ ರಾಜ್ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಈ ವೇಳೆ “ಹುಚ್ಚರನ್ನು ಯಾರಾದರೂ ಬಂಧಿಸಿ ಜೈಲಿಗೆ ಹಾಕುತ್ತಾರಾ?” ಎಂದು ಪ್ರಶ್ನಿಸಿದ ಅವರು ಪ್ರಕಾಶ್ ರಾಜ್ ಮತ್ತು ಪ್ರದೀಪ್ ಈಶ್ವರ್ ಇಬ್ಬರ ವಿರುದ್ಧವೂ ಟೀಕೆ ಮಾಡಿದರು.
READ THIS : Pratap Simha vs Pradeep Eshwar : ‘ಮುಳ್ಳಂದಿ ಮುಖದ ಕಾಮಿಡಿ ಪೀಸ್!’ ಎಂದ ಪ್ರತಾಪ್ ಸಿಂಹ

MYSURU – ಅವರನ್ನು ಸಮಾಜವೇ ದೂರ ಇಟ್ಟಿದೆ
ಪ್ರಕಾಶ್ ರಾಜ್ ಹಾಗೂ ಪ್ರದೀಪ್ ಈಶ್ವರ್ ಇಬ್ಬರನ್ನೂ ಸಮಾಜವೇ ದೂರ ಇಟ್ಟಿದೆ ಎಂದು ಪ್ರತಾಪ್ ಸಿಂಹ ಹೇಳಿಕೊಂಡಿದ್ದಾರೆ. ಹೀಗಾಗಿ ಅವರ ಹೇಳಿಕೆಗಳಿಗೆ ಹೆಚ್ಚಿನ ಮಹತ್ವ ನೀಡಬೇಡಿ, ಮಾಧ್ಯಮದವರು ಪದೇ ಪದೇ ಮೈಕ್ ಹಿಡಿದುಕೊಂಡು ಹೋಗಬೇಡಿ ಎಂದು ಹೇಳಿದ್ದಾರೆ.
ಇದೇ ವೇಳೆ ಪ್ರಕಾಶ್ ರಾಜ್ ಅವರು ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದನ್ನು ಉಲ್ಲೇಖಿಸಿದ ಪ್ರತಾಪ್ ಸಿಂಹ, ಮತ್ತೊಂದೆಡೆ ಪ್ರದೀಪ್ ಈಶ್ವರ್ ಅವರನ್ನು ‘ಗ್ಯಾರಂಟಿ ಶಿಶು’ ಎಂದು ಟೀಕಿಸಿದ್ದಾರೆ.
ಇನ್ನು ಪ್ರದೀಪ್ ಈಶ್ವರ್ ಅವರ ರಾಜಕೀಯ ಭವಿಷ್ಯದ ಬಗ್ಗೆಯೂ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್ಗೆ ಕಾಂಗ್ರೆಸ್ ಟಿಕೆಟ್ ನೀಡುವುದಿಲ್ಲ. ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಬೇರೊಬ್ಬರನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ ಎಂದೂ ಪ್ರತಾಪ್ ಸಿಂಹ ಹೇಳಿದ್ದಾರೆ.

MUST WATCH : ಖೇಣಿ ಹೇಳಿಕೆಗೆ ತುಮಕೂರಲ್ಲಿ ಆಕ್ರೋಶ – ಶ್ರೀಗಳ ಸನ್ನಿಧಿಗೆ ಬಂದು ಕ್ಷಮೆ ಕೇಳಲು ಆಗ್ರಹ




