MYSURU : ಅಣ್ಣನನ್ನು ಇಳಿಸುವಾಗ ಕಣ್ಣೆದುರೇ ದುರಂತ – ಸ್ಕೂಲ್ ವ್ಯಾನ್ ಹರಿದು ಕಂದಮ್ಮ ಸಾವು

ಶಾಲಾ ವಾಹನ ಹರಿದು ಒಂದೂವರೆ ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಉದ್ಯೂರು ಗ್ರಾಮದಲ್ಲಿ ನಡೆದಿದೆ. ಬಸವರಾಜು, ಕಾಂಚನಾ ದಂಪತಿಯ ಪುತ್ರಿ ಲತೀಕ್ಷಾ ಮೃತ ದುರ್ದೈವಿ.
READ THIS : ಹೋಂವರ್ಕ್ ಮಾಡಿಲ್ಲ – ಒಂದೇ ತಪ್ಪಿಗೆ ಕಂದಮ್ಮನ ಜೀವ ಬಲಿಯಾಯಿತೇ?

ಅಣ್ಣನನ್ನು ಇಳಿಸುವಾಗ ಕಣ್ಣೆದುರೇ ದುರಂತ
ಇನ್ನು ಶಾಲೆಯಿಂದ ಮನೆಗೆ ಬಂದಿದ್ದ ನಾಲ್ಕು ವರ್ಷದ ಬಾಲಕನನ್ನ, ತಾಯಿ ಶಾಲಾ ವಾಹನದಿಂದ ಇಳಿಸಿಕೊಳ್ಳುತ್ತಿದ್ದರು. ಇದೇ ವೇಳೆ ಪಕ್ಕದಲ್ಲೇ ಇದ್ದ ಲತಿಕ್ಷಾಗೆ ಶಾಲಾ ವಾಹನ ಡಿಕ್ಕಿ ಹೊಡೆದಿದೆ. ಬಳಿಕ ವಾಹನದ ಚಕ್ರ ಬಾಲಕಿಯ ಮೇಲೆ ಹರಿದು, ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಶಾಸ್ತ್ರಿ ಪಬ್ಲಿಕ್ ಸ್ಕೂಲ್ನ ಶಾಲಾ ವಾಹನದಿಂದ ಈ ಅಪಘಾತ ಸಂಭವಿಸಿದೆ. ಇನ್ನು ಅಪಘಾತದ ಬಳಿಕ ಬಾಲಕಿಯ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಚಾಲಕ ವೇಗವಾಗಿ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.
MYSURU – ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು!
ಸದ್ಯ ಈ ಸಂಬಂಧ ಶಾಲಾ ವಾಹನ ಚಾಲಕ ಸಿದ್ದರಾಜು ವಿರುದ್ಧ, ಹುಣಸೂರು ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆ ಕುರಿತು ಮಾಹಿತಿ ಕಲೆಹಾಕಿ ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.

MUST WATCH : ಮಳೆ ಕೈಕೊಟ್ಟು ರೈತರು ಕಂಗಾಲು – ವರುಣದೇವನ ಮೊರೆ ಹೋದ ಅನ್ನದಾತರು




