
KSWAN ನಲ್ಲಿ 444 ಕೋಟಿ ರೂ.ಭಾರಿ ಗೋಲ್ಮಾಲ್ – ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು!
ಕರ್ನಾಟಕ ಸ್ಟೇಟ್ ವೈಡ್ ಏರಿಯಾ ನೆಟ್ವರ್ಕ್ ಟೆಂಡರ್ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಬಿಜೆಪಿ ನಾಯಕ ಎನ್.ಆರ್. ರಮೇಶ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಸುಮಾರು ₹444 ಕೋಟಿ ಮೊತ್ತದ ಹಗರಣ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದ್ದು, ಸಚಿವ ಯತೀಂದ್ರ ಸಿದ್ದರಾಮಯ್ಯ ಹಾಗೂ ಐಎಎಸ್ ಅಧಿಕಾರಿ ಭೂಬಾಲನ್ ಸೇರಿದಂತೆ ಹಲವು ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸಲಾಗಿದೆ.
KSWAN ನಲ್ಲಿ 444 ಕೋಟಿ ರೂ.ಭಾರಿ ಗೋಲ್ಮಾಲ್
2005ರಲ್ಲಿ ಕರೆಯಲಾಗಿದ್ದ KSWAN ಟೆಂಡರ್ನಲ್ಲಿ ನಿಯಮಗಳನ್ನು ಉಲ್ಲಂಘಿಸಿ ಅರ್ಹತೆ ಇಲ್ಲದ ಕಂಪನಿಗೆ ಟೆಂಡರ್ ನೀಡಲಾಗಿದೆ ಎಂಬುದು ಎನ್.ಆರ್. ರಮೇಶ್ ಅವರ ಆರೋಪವಾಗಿದೆ. ಹೈದರಾಬಾದ್ ಮೂಲದ ಕಂಪನಿಗೆ ಟೆಂಡರ್ ನೀಡಲಾಗಿದ್ದು, ಟೆಂಡರ್ ಪ್ರಕ್ರಿಯೆಯ ಅಂತಿಮ ದಿನದವರೆಗೂ ಕಾಯದೆ ತರಾತುರಿಯಲ್ಲಿ ಗುತ್ತಿಗೆ ನೀಡಲಾಗಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
READ THIS : ಕಾಂಗ್ರೆಸ್ ಕುರ್ಚಿ ಕಿಚ್ಚಿಗೆ ಮತ್ತೆ ತುಪ್ಪ ಸುರಿದ CM ಪುತ್ರ ಯತೀಂದ್ರ..!

ಸಿಎಂ ಆಗದ ಸಿದ್ದರಾಮಯ್ಯ ಬಳಿಗೆ ಡಿಪಿಎಆರ್ ಇಲಾಖೆ ಇತ್ತು, ಅಣತಿ ಮೇರೆಗೆ ಟೆಂಡರ್ ನೀಡಲಾಗಿದೆ. ಭೂ ಬಾಲನ್ ಸೇರಿದಂತೆ ಮೂವರು ಅಧಿಕಾರಿಗಳ ವಿರುದ್ಧವು ಎನ್ ಆರ್ ರಮೇಶ್ ದೂರು ನೀಡಿದ್ದಾರೆ.
ತನಿಖೆಗೆ ಆಗ್ರಹ!
ಈ ಗವರ್ನೆನ್ಸ್ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೂಬಾಲನ್, ಸಚಿವ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಅಧಿಕಾರಿಗಳ ವಿರುದ್ಧ ಈಗ ತನಿಖೆಗೆ ಆಗ್ರಹಿಸಲಾಗಿದೆ.

MUST WATCH : ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಯಾರಾದ್ರು ಸಂತೋಷ – ಎಸ್.ಪಿ.ಮುದ್ದಹನುಮೇಗೌಡರ ಅಚ್ಚರಿ ಹೇಳಿಕೆ




