
ಯುವಕನ ಬ್ಲ್ಯಾಕ್ ಮೇಲ್ ಆರೋಪ! ಕ್ರಿಮಿನಾಶಕ ಮಾತ್ರೆ ಸೇವಿಸಿ ಗೃಹಿ Suicide
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಲಕ್ಕನಕೊಪ್ಪಲು ಗ್ರಾಮದಲ್ಲಿ 34 ವರ್ಷದ ಗೃಹಿಣಿಯೊಬ್ಬರು ಕ್ರಿಮಿನಾಶಕ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.
ಮಾತ್ರೆ ಸೇವಿಸಿ ಆತ್ಮಹತ್ಯೆ
ಮೃತರನ್ನು ಸಿಂಧೂ ಎಂದು ಗುರುತಿಸಲಾಗಿದೆ. ಅವರು ಶ್ರೀಕಾಂತ್ ಎಂಬುವವರ ಪತ್ನಿಯಾಗಿದ್ದು,ಇಬ್ಬರು ಮಕ್ಕಳಿದ್ದಾರೆ. ಕ್ರಿಮಿನಾಶಕ ಸೇವಿಸಿ ಅಸ್ವಸ್ಥರಾಗಿದ್ದ ಸಿಂಧೂ ಅವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
READ THIS : ಪರಪ್ಪನ ಅಗ್ರಹಾರ ಜೈಲಿನ ವಾರ್ಡರ್ನಿಂದ ಹಲ್ಲೆ – ಡಾಬಾ ಮಾಲೀಕ ಸಾವು

ಯುವಕನ ಬ್ಲ್ಯಾಕ್ ಮೇಲ್ ಆರೋಪ!
Suicide ಗೂ ಮುನ್ನ ಸಿಂಧೂ ಅವರು ನೀಡಿದ ಹೇಳಿಕೆಯಲ್ಲಿ ವಿಕಾಸ್ ಎಂಬಾತನ ಹೆಸರು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ವಿಕಾಸ್ ವಿರುದ್ಧ ತನಿಖೆ ಆರಂಭಿಸಿದ್ದಾರೆ.
ಸಿಂಧೂ ಅವರ ಮೊಬೈಲ್ ಪರಿಶೀಲನೆ ನಡೆಸಿದ ವೇಳೆ ವಿಕಾಸ್ ಜೊತೆ ನಿರಂತರವಾಗಿ ವಾಟ್ಸ್ಆ್ಯಪ್ ಮೆಸೇಜ್ಗಳು ಹಾಗೂ ವಿಡಿಯೋ ಕಾಲ್ಗಳು ಮಾಡಿರುವುದು ಪತ್ತೆಯಾಗಿದೆ. ಅಕ್ರಮ ಸಂಬಂಧದ ವಿಚಾರದಲ್ಲಿ ವಿಕಾಸ್ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಆರೋಪವೂ ಕೇಳಿಬಂದಿದೆ.

ವಿಕಾಸ್ ವಿರುದ್ಧ ಪ್ರಕರಣ ದಾಖಲು!
ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಾಗಿದೆ. ಎಲ್.ಕೆ. ವಿಕಾಸ್, ಆತನ ತಂದೆ ಕುಮಾರ ಹಾಗೂ ತಾಯಿ ವಸಂತ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
MUST WATCH : ಮಲಗಿದ್ದ ವೇಳೆ ಕಚ್ಚಿದ ಹಾವು – ಚಿಕಿತ್ಸೆ ಫಲಿಸದೇ ಬಾಲಕ ಸಾ*




