
ಯಶ್ ಸಿನಿಮಾ ಕಾಪಿ ಮಾಡಲು ಹೋಗಿ ಸೋತ PARADISE ಸಿನಿಮಾ
ನಾನಿ ಅಭಿನಯದ ಬಹುನಿರೀಕ್ಷಿತ ‘ಪ್ಯಾರಡೈಸ್’ ಸಿನಿಮಾ ಸೆಪ್ಟೆಂಬರ್ 24ರಂದು ತೆರೆ ಕಂಡಿದ್ದು, ಮೊದಲ ದಿನವೇ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದ್ರೂ, ಕೆಲ ಪ್ರೇಕ್ಷಕರು ಸಿನಿಮಾದ ಕಥೆ, ದ್ವಿತೀಯಾರ್ಧ ಹಾಗೂ ಅತಿಯಾದ ಹಿಂಸಾತ್ಮಕ ದೃಶ್ಯಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೊದಲ ದಿನವೇ ಬಾಕ್ಸ್ ಆಫೀಸ್ ಗಳಿಕೆ
ಮೊದಲ ದಿನದ ಬಾಕ್ಸ್ ಆಫೀಸ್ ಗಳಿಕೆ ಗಮನ ಸೆಳೆದಿದೆ ಎನ್ನಲಾಗುತ್ತಿದ್ದರೂ, ಮುಂದಿನ ದಿನಗಳಲ್ಲಿ ಚಿತ್ರ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಕಾದು ನೋಡಬೇಕಿದೆ.
READ THIS : ಪುಷ್ಪ 2 ದಾಖಲೆ ಮುರಿದ ರಾಮಾಯಣ? ದೊಡ್ಡ ಮೊತ್ತಕ್ಕೆ ಮ್ಯೂಸಿಕ್ ಹಕ್ಕು ಮಾರಾಟ

ಕೆಜಿಎಫ್ ಕಾಪಿ ಆರೋಪ
ಈ ನಡುವೆ PARADISE ಚಿತ್ರದ ಕೆಲವು ದೃಶ್ಯಗಳು ಯಶ್ ಅಭಿನಯದ ‘ಕೆಜಿಎಫ್’ ಹಾಗೂ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾಗಳನ್ನು ಹೋಲುತ್ತವೆ ಎಂಬ ಚರ್ಚೆ ಸೋಶಿಯಲ್ ಮಿಡಿಯಾದಲ್ಲಿ ಆರಂಭವಾಗಿದೆ. ವಿಶೇಷವಾಗಿ ಚಿತ್ರದ ಇಂಟರ್ವಲ್ ಬ್ಲಾಕ್ನಲ್ಲಿ ಬರುವ ತಲೆ ಕತ್ತರಿಸುವ ದೃಶ್ಯವು ‘ಕೆಜಿಎಫ್’ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಗರುಡನನ್ನು ರಾಕಿ ಕೊಲ್ಲುವ ದೃಶ್ಯವನ್ನು ಹೋಲುತ್ತದೆ ಎಂದು ಕೆಲ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೋಲಿನ ಸುಳಿಯಲ್ಲಿ PARADISE ?
ಅಷ್ಟೇ ಅಲ್ಲದೆ, ‘ಪ್ಯಾರಡೈಸ್’ನ ಸೆಟ್ಗಳು, ಮನೆಗಳ ವಿನ್ಯಾಸ, ಕಲರಿಂಗ್ ಹಾಗೂ ಮೇಕಿಂಗ್ನಲ್ಲೂ ‘ಕೆಜಿಎಫ್’ ಸಿನಿಮಾದ ಛಾಯೆ ಕಾಣಿಸುತ್ತದೆ ಎಂದು ಕೆಲವರು ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಇವು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಪ್ರೇಕ್ಷಕರ ಅಭಿಪ್ರಾಯಗಳಾಗಿದ್ದು, ಚಿತ್ರತಂಡದಿಂದ ಈ ಆರೋಪಗಳ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ.
‘ಪ್ಯಾರಡೈಸ್’ ಚಿತ್ರಕ್ಕೆ ಶ್ರೀಕಾಂತ್ ಒಡೆಲಾ ನಿರ್ದೇಶನ ಮಾಡಿದ್ದು, ನಾನಿ ನಾಯಕನಾಗಿ ನಟಿಸಿದ್ದಾರೆ. ಈ ಹಿಂದೆ ಇದೇ ಜೋಡಿಯ ‘ದಸರಾ’ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿತ್ತು. ಇದೀಗ ‘ಪ್ಯಾರಡೈಸ್’ ಮೂಲಕ ಮತ್ತೊಮ್ಮೆ ಒಂದಾಗಿರುವ ಈ ಜೋಡಿಯ ಹೊಸ ಪ್ರಯತ್ನಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.

MUST WATCH : ಬರದ ಹೊಡೆತಕ್ಕೆ ಹೆಚ್ಚಿದ ತಾಲೂಕುಗಳು – ಸಾಲಮನ್ನಾಗೆ DCM PARAM ಮನವಿ




