
ಆಂಟಿ ಖಾಸಗಿ ಫೋಟೋ ಇಟ್ಕೊಂಡು 9 ಲಕ್ಷ ಸುಲಿಗೆ ಆರೋಪ – ಟ್ಯಾಟೂ ಅರ್ಜುನ್ ವಿರುದ್ಧ FIR
ಮದುವೆಯಾಗೋದಾಗಿ ನಂಬಿಸಿ ಮೋಸ ಮಾಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಿ ಹಣ ಪಡೆದಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಟ್ಯಾಟೂ ಆರ್ಟಿಸ್ಟ್, ನಟ ಅರ್ಜುನ್ ವಿರುದ್ಧ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು
ಮಹಿಳೆಯ ಹೇಳಿಕೆಯ ಪ್ರಕಾರ, ಸುಮಾರು ಎರಡು ವರ್ಷಗಳ ಹಿಂದೆ ಟ್ಯಾಟೂ ಹಾಕಿಸಿಕೊಳ್ಳಲು ತೆರಳಿದ್ದ ವೇಳೆ ಅರ್ಜುನ್ ಪರಿಚಯವಾಗಿದ್ದ. ಬಳಿಕ ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು. ಮಹಿಳೆಯ ಪತಿ ಮೃತಪಟ್ಟಿರುವ ವಿಚಾರ ತಿಳಿದಿದ್ದ ಅರ್ಜುನ್, ಆಕೆಗೆ ಜೀವನ ನೀಡುವುದಾಗಿ ಭರವಸೆ ನೀಡಿ ಆತ್ಮೀಯವಾಗಿದ್ದ.
READ THIS : ಆಂಟಿ ಹಿಂದೆ ಬಿದ್ದು ಪೇಚಿಗೆ ಸಿಲುಕಿದ ಟ್ಯಾಟೂ ಘೋಸ್ಟ್!

ಆಂಟಿ ಖಾಸಗಿ ಫೋಟೋ ಇಟ್ಕೊಂಡು 9 ಲಕ್ಷ ಸುಲಿಗೆ?
ಪ್ರೀತಿ ಹೆಸರಿನಲ್ಲಿ ಆಕೆಯ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಿದ್ದಾನೆ. 2024ರ ನವೆಂಬರ್ನಿಂದ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದಾನೆ. ಹಣವಿಲ್ಲವೆಂದಾಗ ಸಂತ್ರಸ್ತೆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಡುವುದಾಗಿ ಬ್ಲ್ಯಾಕ್ಮೇಲ್ ಮಾಡಿದ್ದಾನೆ.
ನಿನಗೆ ಬೇರೆಯವರ ಜೊತೆ ಸಂಬಂಧವಿದೆ
ಹಂತ-ಹಂತವಾಗಿ ಮಹಿಳೆಯಿಂದ 9 ಲಕ್ಷ ಹಣ ಪಡೆದುಕೊಂಡಿದ್ದ ಅರ್ಜುನ್, ಮತ್ತೆ ಹಣಕ್ಕಾಗಿ ಬೇಡಿಕೆ ಇಟ್ಟಾಗ ಸಂತ್ರಸ್ತೆ ಹಣ ಕೊಡಲು ನಿರಾಕರಿಸಿದ್ದಾಳೆ. ಮಹಿಳೆ ಆತನ ಕರೆ ಸ್ವೀಕರಿಸದಿದ್ದಾಗ ಸೆ.2ರಂದು ಆಕೆಯ ಮನೆಗೆ ಬಂದಿದ್ದಾನೆ. ನನ್ನ ಫೋನ್ ಏಕೆ ಸ್ವೀಕರಿಸುತ್ತಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನಿನಗೆ ಬೇರೆಯವರ ಜೊತೆ ಸಂಬಂಧವಿದೆ ಎಂದು ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.

ಕೆಲ ದಿನಗಳ ಹಿಂದಷ್ಟೇ ಇದೇ ಮಹಿಳೆ ವಿರುದ್ಧ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವ ಆರೋಪದಡಿ ಅರ್ಜುನ್ ದೂರು ದಾಖಲಿಸಿದ್ದನು. ಇದೀಗ ಮಹಿಳೆಯೂ ಅರ್ಜುನ್ ವಿರುದ್ಧ ದೂರು ನೀಡಿದ್ದು, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದೆ.
MUST WATCH : KSRTC ಬಸ್ಗೆ ಲಾರಿ ಡಿಕ್ಕಿ – ಸ್ಥಳದಲ್ಲೇ ಓರ್ವ ಸಾ*, ಹಲವರು ಗಂಭೀರ





