
Bengaluru : 2 ಮಕ್ಕಳ ತಾಯಿ ಹಿಂದೆ ಬಿದ್ದ ನಟ, ಮತ್ತೊಬ್ಬನ ಜೊತೆ ವಿಡಿಯೋ ಕಾಲ್ನಲ್ಲಿದ್ದಾಗಲೇ ಸಿಕ್ಕಿಬಿದ್ದಳು ಕಿಲಾಡಿ
ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರ ವಿರುದ್ಧ ಟ್ಯಾಟೂ ಆರ್ಟಿಸ್ಟ್ ಹಾಗೂ ನಟ ಅರ್ಜುನ್ ಪೊಲೀಸರಿಗೆ ದೂರು ನೀಡಿರುವ ಘಟನೆ ನಗರದ ಬ್ಯಾಡರಹಳ್ಳಿಯಲ್ಲಿ ನಡೆದಿದೆ.
2 ಮಕ್ಕಳ ತಾಯಿ ಹಿಂದೆ ಬಿದ್ದ ನಟ
‘ಟ್ಯಾಟೂ ಘೋಸ್ಟ್’ ಎಂದು ಖ್ಯಾತಿಯಾಗಿರುವ ಅರ್ಜುನ್, ಸುಮಾರು ಎರಡು ವರ್ಷಗಳ ಹಿಂದೆ ಟ್ಯಾಟೂ ಸ್ಟುಡಿಯೋದಲ್ಲಿ ಸಂಪ್ರಿತಾ ಎಂಬ ಮಹಿಳೆಯ ಪರಿಚಯವಾಗಿತ್ತು ಎನ್ನಲಾಗಿದೆ.
ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿದ್ದು, ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು ಎನ್ನಲಾಗಿದೆ.
ಸಂಪ್ರಿತಾಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಪತಿ ಮೃತಪಟ್ಟಿರುವುದಾಗಿ ಅರ್ಜುನ್ಗೆ ಆಕೆ ತಿಳಿಸಿದ್ದಳು ಎನ್ನಲಾಗಿದೆ. ಇದೇ ವೇಳೆ ಅರ್ಜುನ್ಗೂ ವಿಚ್ಛೇದನವಾಗಿತ್ತು. ಬಳಿಕ ಸಂಪ್ರಿತಾ ಮದುವೆಯಾಗುವುದಾಗಿ ಹೇಳಿದ್ದರಿಂದ ಆಕೆಯನ್ನು ನಂಬಿ ಅರ್ಜುನ್ ಹಲವು ಬಾರಿ ಹಣ ನೀಡಿದ್ದರು ಎನ್ನಲಾಗಿದೆ. ಆದರೆ ಕಳೆದ ಒಂದು ವರ್ಷದಿಂದ ಮದುವೆಯನ್ನು ನಾಳೆ, ನಾಡಿದ್ದು ಎಂದು ಮುಂದೂಡುತ್ತಿದ್ದಳು ಎಂದು ಅರ್ಜುನ್ ಆರೋಪಿಸಿದ್ದಾರೆ.
READ THIS : ಕೋಟಿ ಕೋಟಿ ವಂಚನೆ ಆರೋಪ – ಓಂ ಪ್ರಕಾಶ್ ರಾವ್ ವಿರುದ್ಧ ದೂರು

ಪರಪುರುಷನೊಂದಿಗೆ ವೀಡಿಯೋ ಕಾಲ್ ಮಾಡುತ್ತಿದ್ದ ವೇಳೆ ಗಲಾಟೆ
ಸೆ.ರಂದು ಅರ್ಜುನ್ ಸಂಪ್ರಿತಾಗೆ ಕರೆ ಮಾಡಿದ್ದ. ಕರೆ ಸ್ವೀಕರಿಸದ ಹಿನ್ನೆಲೆ ಮನೆ ಬಳಿ ತೆರಳಿದ್ದ. ಈ ವೇಳೆ ಸಂಪ್ರಿತಾ ಪರಪುರುಷನ ಜೊತೆ ಅಶ್ಲೀಲವಾಗಿ ಮಾತನಾಡುತ್ತಿದ್ದಳು. ಪ್ರಶ್ನೆ ಮಾಡಿದಾಗ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಈ ವೇಳೆ ಕಬ್ಬಿಣದ ರಾಡಿನಿಂದ ಅರ್ಜುನ್ಗೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಯಿಂದ ಗಾಯಗೊಂಡಿರುವ ಅರ್ಜುನ್, ಘಟನೆಯ ಬಗ್ಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಅಪಘಾತ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ
ಹಲ್ಲೆ ನಡೆದಿದ್ದರೂ ಮರ್ಯಾದೆಗೆ ಅಂಜಿ ಅರ್ಜುನ್ ಘಟನೆಯನ್ನು ಅಪಘಾತ ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿದ್ದರು ಎನ್ನಲಾಗಿದೆ.
ನಂತರ ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ ಅರ್ಜುನ್ ಅಪಘಾತ ಅಂತ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿದ್ದ. ಮರ್ಯಾದೆಗೆ ಅಂಜಿ ಅಪಘಾತ ಎಂದು ವಿಡಿಯೋ ಮಾಡಿದ್ದ.

MUST WATCH : CONGRESS ದೇಶ ದ್ರೋಹದ ಕೆಲಸ ಮಾಡ್ತಿದೆ – PRAMOD MUTHALIK ಹೊಸ ಬಾಂಬ್..!




