
ಪಟಾಕಿ ಕೊಡಿಸೋ ನೆಪದಲ್ಲಿ ಬಾಲಕನ ಕಿಡ್ನ್ಯಾಪ್ – ಮಗುವಿನ ಮುಖದ ಮೇಲೆ ಸಿಮೆಂಟ್ ಸ್ಲ್ಯಾಬ್ ಎತ್ತಾಕಿ Murder
ಪಟಾಕಿ ಕೊಡಿಸೋದಾಗಿ ನಂಬಿಸಿ ನೆರೆಮನೆಯ 13 ವರ್ಷದ ಬಾಲಕನನ್ನ ಕಾರಿನಲ್ಲಿ ಕರೆದೊಯ್ದು, ಹಣಕ್ಕಾಗಿ ಅಪಹರಿಸಿ ಕೊಲೆ ಮಾಡಿರುವ ಆರೋಪ ಬೆಂಗಳೂರಿನಲ್ಲಿ ಕೇಳಿಬಂದಿದೆ.
ಯಲಹಂಕದ ವಿನಾಯಕ ನಗರದ 13 ವರ್ಷದ ಪ್ರಜ್ವಲ್ ಮೃತ ಬಾಲಕ. ಪ್ರಕರಣ ಸಂಬಂಧ ಆರೋಪಿ ಭಾಸ್ಕರ್ ರೆಡ್ಡಿ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಪಟಾಕಿ ಕೊಡಿಸೋ ನೆಪದಲ್ಲಿ ಬಾಲಕನ ಕಿಡ್ನ್ಯಾಪ್
ಸಂಜೆ ಸುಮಾರು 7.30ರ ವೇಳೆಗೆ ಪಟಾಕಿ ತರೋಣ ಬಾ ಎಂದು ಹೇಳಿ ಪ್ರಜ್ವಲ್ನನ್ನು ಭಾಸ್ಕರ್ ರೆಡ್ಡಿ ಕಾರಿನಲ್ಲಿ ಕರೆದೊಯ್ದಿದ್ದ ಎನ್ನಲಾಗಿದೆ. ಬಳಿಕ ಬಾಲಕನ ಮೂಲಕ ವಿಡಿಯೋ ಮಾಡಿಸಿ, ಪೋಷಕರಿಂದ ಹಣಕ್ಕೆ ಬೇಡಿಕೆ ಇಡಲು ಯತ್ನಿಸಲಾಗಿದೆ.
ಆ ಬಳಿಕ ಮಗುವಿನಿಂದ ವೀಡಿಯೊ ಮಾಡಿಸಿ ಪೋಷಕರಿಗೆ ಹಣಕ್ಕಾಗಿ ಬೆದರಿಕೆ ಹಾಕಿದ್ದಾನೆ. ಇತ್ತ ಮಗುವನ್ಮ ಎಲ್ಲಾ ಕಡೆ ಹುಡುಕಾಡ್ತಿದ್ದ ಪೋಷಕರು ಆರೋಪಿ ಭಾಸ್ಕರ್ ರೆಡ್ಡಿಯ ತಂದೆಗೆ ವಿಚಾರ ಹೇಳಿದ್ದಾರೆ. ಇಬ್ರೂ ಮಗುವನ್ನ ಕರೆತರುವಂತೆ ಭಾಸ್ಕರ್ ರೆಡ್ಡಿಗೆ ವಾರ್ನ್ ಮಾಡಿದ್ದಾರೆ. ಗೊತ್ತಿರುವವನು ಅಲ್ಲವಾ ಕರ್ಕೊಂಡ್ ಬರ್ತಾನೆ ಅಂತಾ ಪೋಷಕರು ಸಹಜವಾಗಿ ಸುಮ್ಮನಾಗಿದ್ದಾರೆ.
READ THIS : ಹೆತ್ತವರನ್ನ ತೊರೆದು ಬಂದಿದ್ದವಳು ಲಾಡ್ಜ್ನಲ್ಲಿ ಹೆಣವಾಗಿ ಪತ್ತೆ..!

ಮಗುವನ್ನ ಕಾರಿನ ಡಿಕ್ಕಿಯಲ್ಲಿಟ್ಟುಕೊಂಡು ಆಂಧ್ರದ ಕಡೆ ಎಸ್ಕೇಪ್
ಈ ಪ್ರಕರಣದಲ್ಲಿ ಭಾಸ್ಕರ್ ರೆಡ್ಡಿ ಜೊತೆ ಮತ್ತೊಬ್ಬ ವ್ಯಕ್ತಿಯೂ ಇದ್ದ ಎನ್ನಲಾಗಿದ್ದು, ಬಾಲಕನ ಮೇಲೆ ಹಲ್ಲೆ ನಡೆಸಿ Murder ಮಾಡಿರುವ ಆರೋಪ ಕೇಳಿಬಂದಿದೆ. ಬಳಿಕ ಮೃತದೇಹವನ್ನು ಕಾರಿನ ಡಿಕ್ಕಿಯಲ್ಲಿಟ್ಟುಕೊಂಡು ಆಂಧ್ರಪ್ರದೇಶದತ್ತ ತೆರಳಲು ಯತ್ನಿಸಿದ್ದರು.
ಪೊಲೀಸರ ಮುಂದೆ ಆರೋಪಿ ಕಥೆ ಕಟ್ಟಿದ್ದೇ ಬೇರೆ!
ಆದ್ರೆ ಚಿಕ್ಕಜಾಲ ಸರ್ವೀಸ್ ರಸ್ತೆಯಲ್ಲಿ ಕಾರು ಸರಣಿ ಅಪಘಾತಕ್ಕೀಡಾದ ಬಳಿಕ ಇಡೀ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಬಂದ ಚಿಕ್ಕಜಾಲ ಪೊಲೀಸರು ಕಾರನ್ನು ಪರಿಶೀಲಿಸಿದ ವೇಳೆ ಡಿಕ್ಕಿಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಇನ್ನು ಬಾಲಕ ಅಪಘಾತದಿಂದ ಮೃತಪಟ್ಟಿದ್ದಾನೆ ಎಂದು ಬಿಂಬಿಸಲು ಯತ್ನಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದ್ದು, ಪೊಲೀಸರ ತನಿಖೆಯಲ್ಲಿ ಕೊಲೆ ಪ್ರಕರಣದ ಸುಳಿವು ಸಿಕ್ಕಿದೆ.

ಸದ್ಯ ಪ್ರಕರಣ ಸಂಬಂಧ ಭಾಸ್ಕರ್ ರೆಡ್ಡಿಯನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಬ್ಬ ಆರೋಪಿಯ ಪತ್ತೆಗೂ ಬಲೆ ಬೀಸಲಾಗಿದೆ. ಹಣಕ್ಕಾಗಿ ಬಾಲಕನನ್ನು ಅಪಹರಿಸಲಾಗಿತ್ತಾ..? ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರಾ..? ಸಂಪೂರ್ಣ ಘಟನೆಯ ಹಿಂದಿನ ಸಂಚು ಏನು..? ಅನ್ನೋದು ಪೊಲೀಸ್ ತನಿಖೆಯಿಂದ ಮತ್ತಷ್ಟು ಸ್ಪಷ್ಟವಾಗಬೇಕಿದೆ.
MUST WATCH : ತಪ್ಪು ಹೇಳಿಕೆ ಕೊಟ್ರೆ ಜನ ಉಗಿತಾರೆ – ಹೀಗ್ಯಾಕಂದ್ರು ಶಾಸಕ S.R. SRINIVAS.?




