
Ration Card e-KYC : ರಾಜ್ಯದ ಪಡಿತರ ಚೀಟಿದಾರರಿಗೆ ನೆಮ್ಮದಿಯ ಸುದ್ದಿ: ಮತ್ತೆ ಇ-ಕೆವೈಸಿ ಅವಧಿ ವಿಸ್ತರಣೆ
ರಾಜ್ಯದ ಬಿಪಿಎಲ್ ಹಾಗೂ ಎಪಿಎಲ್ ರೇಷನ್ ಕಾರ್ಡ್ದಾರರಿಗೆ ಸರ್ಕಾರ ಬಿಗ್ ರಿಲೀಫ್ ನೀಡಿದೆ. ಪಡಿತರ ಚೀಟಿಯ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ನೀಡಲಾಗಿದ್ದ ಗಡುವನ್ನು ಅಕ್ಟೋಬರ್ 20ರವರೆಗೆ ವಿಸ್ತರಿಸಲಾಗಿದೆ. ಈ ಮೂಲಕ ಸರ್ವರ್ ಸಮಸ್ಯೆಯಿಂದ ಇ-ಕೆವೈಸಿ ಮಾಡಿಸಲು ಪರದಾಡುತ್ತಿದ್ದ ಸಾರ್ವಜನಿಕರಿಗೆ ಹೆಚ್ಚುವರಿ ಕಾಲಾವಕಾಶ ಸಿಕ್ಕಂತಾಗಿದೆ.
ರಾಜ್ಯದ ಪಡಿತರ ಚೀಟಿದಾರರಿಗೆ ನೆಮ್ಮದಿಯ ಸುದ್ದಿ
ಈ ಮೊದಲು ರೇಷನ್ ಕಾರ್ಡ್ ಇ-ಕೆವೈಸಿ ಪೂರ್ಣಗೊಳಿಸಲು ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿತ್ತು. ಹೀಗಾಗಿ ರಾಜ್ಯದ ಹಲವು ನ್ಯಾಯಬೆಲೆ ಅಂಗಡಿಗಳ ಮುಂದೆ ಕಾರ್ಡ್ದಾರರು ಇ-ಕೆವೈಸಿಗಾಗಿ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದರು.
READ THIS : ಇನ್ಮುಂದೆ ವಾಟ್ಸಾಪ್ನಲ್ಲೇ ಆಯುಷ್ಮಾನ್ ಕಾರ್ಡ್ ಪಡೆಯಬಹುದು – ಹೇಗೆ ಗೊತ್ತಾ?

ಇ-ಕೆವೈಸಿ ಅವಧಿ ವಿಸ್ತರಣೆ!
ಆದ್ರೆ ಪದೇ ಪದೇ ಎದುರಾಗುತ್ತಿದ್ದ ಸರ್ವರ್ ಸಮಸ್ಯೆ ಹಾಗೂ ತಾಂತ್ರಿಕ ಅಡಚಣೆಯಿಂದ ಬಯೋಮೆಟ್ರಿಕ್ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗದೆ ಸಾರ್ವಜನಿಕರು ಪರದಾಡುತ್ತಿದ್ದರು. ಈ ಸಮಸ್ಯೆಗಳ ನಡುವೆಯೇ ಇದೀಗ ಗಡುವನ್ನು ಅಕ್ಟೋಬರ್ 20ರವರೆಗೆ ವಿಸ್ತರಿಸಲಾಗಿದೆ.
Ration Card e-KYC ಗೆ ಹೆಚ್ಚುವರಿ ಕಾಲಾವಕಾಶ
ಇ-ಕೆವೈಸಿಗೆ ಹೆಚ್ಚುವರಿ ಕಾಲಾವಕಾಶ ನೀಡುವುದರ ಜೊತೆಗೆ ನ್ಯಾಯಬೆಲೆ ಅಂಗಡಿಗಳ ಕಾರ್ಯನಿರ್ವಹಣಾ ಸಮಯದಲ್ಲೂ ಬದಲಾವಣೆ ಮಾಡಲಾಗಿದೆ. ಅಕ್ಟೋಬರ್ 1ರಿಂದ ಬೆಳಗ್ಗೆ 7ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 8 ಗಂಟೆಯವರೆಗೆ ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸಬೇಕು ಎಂದು ಆದೇಶಿಸಲಾಗಿದೆ.

ಒಟ್ಟಾರೆ ಸರ್ವರ್ ಸಮಸ್ಯೆ ಹಾಗೂ ಜನದಟ್ಟಣೆಯಿಂದ ಇ-ಕೆವೈಸಿ ಮಾಡಿಸಲು ಸಾಧ್ಯವಾಗದೆ ಆತಂಕದಲ್ಲಿದ್ದ ರೇಷನ್ ಕಾರ್ಡ್ದಾರರಿಗೆ ಗಡುವು ವಿಸ್ತರಣೆ ಬಿಗ್ ರಿಲೀಫ್ ನೀಡಿದೆ. ಬಾಕಿ ಇರುವ ಫಲಾನುಭವಿಗಳು ಅಕ್ಟೋಬರ್ 20ರೊಳಗೆ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶ ಸಿಕ್ಕಿದೆ.
MUST WATCH : ಕೊಳಗೇರಿ ನಿವಾಸಿಗಳಿಗೆ ಗುಡ್ನ್ಯೂಸ್ – ಹಕ್ಕುಪತ್ರ ನೀಡಲು ಜಿಲ್ಲಾಡಳಿತ ಸಜ್ಜು




