ಇನ್ಮುಂದೆ Whatsapp ನಲ್ಲೇ `ಆಯುಷ್ಮಾನ್ ಕಾರ್ಡ್’ ಪಡೆಯಬಹುದು : ಇಲ್ಲಿದೆ ಸಂಪೂರ್ಣ ಮಾಹಿತಿ

ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಮತ್ತೊಂದು ಡಿಜಿಟಲ್ ಸೌಲಭ್ಯ ನೀಡಿದೆ. ಇನ್ನು ಮುಂದೆ ಆಯುಷ್ಮಾನ್ ಕಾರ್ಡ್ ಪಡೆಯಲು ಯಾವುದೇ ಕಚೇರಿಗೆ ಹೋಗುವ ಅಗತ್ಯವಿಲ್ಲ. ನಿಮ್ಮ ಮೊಬೈಲ್ನ ವಾಟ್ಸಾಪ್ ಮೂಲಕವೇ ಕೆಲವೇ ನಿಮಿಷಗಳಲ್ಲಿ ಕಾರ್ಡ್ ಪಡೆಯಬಹುದು.
ವಿಶೇಷ ವಾಟ್ಸಾಪ್ ಚಾಟ್ಬಾಟ್
ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ‘ಆಯುಷ್ಮಾನ್ ಸಾರಥಿ’ ಹೆಸರಿನ ವಿಶೇಷ ವಾಟ್ಸಾಪ್ ಚಾಟ್ಬಾಟ್ ಆರಂಭಿಸಿದ್ದು, ಇದರ ಮೂಲಕ 24 ಗಂಟೆಯೂ ಆಯುಷ್ಮಾನ್ ಭಾರತ್ ಯೋಜನೆಯ ವಿವಿಧ ಸೇವೆಗಳನ್ನು ಪಡೆಯಬಹುದು.
ಇದನ್ನು ಓದಿ : `WhatsApp’ ಬಳಕೆದಾರರೇ ಎಚ್ಚರ – ಈ ಮೆಸೇಜ್ ಕ್ಲಿಕ್ ಮಾಡಿದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ !

Whatsapp ನಲ್ಲೇ ಆಯುಷ್ಮಾನ್ ಕಾರ್ಡ್ ಪಡೆಯಲು ಇಲ್ಲಿದೆ ಮಾಹಿತಿ
ಆಯುಷ್ಮಾನ್ ಕಾರ್ಡ್ ಪಡೆಯಲು ಮೊದಲು +91 72908 23838 ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿ ಅಥವಾ ವಾಟ್ಸಾಪ್ನಲ್ಲಿ ಹುಡುಕಿ. ಬಳಿಕ ಆ ಸಂಖ್ಯೆಗೆ ‘Hi’ ಎಂದು ಸಂದೇಶ ಕಳುಹಿಸಬೇಕು.
ಚಾಟ್ಬಾಟ್ನಲ್ಲಿ ಕಾಣಿಸುವ ‘Create Ayushman Card’ ಆಯ್ಕೆಯನ್ನು ಆರಿಸಿ. ನಂತರ ನಿಮ್ಮ ಮೊಬೈಲ್ ಸಂಖ್ಯೆ, ಆಧಾರ್ ವಿವರಗಳನ್ನು ನಮೂದಿಸಿ, ಒಟಿಪಿ ಪರಿಶೀಲನೆ ಹಾಗೂ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರೆ ನಿಮ್ಮ ಆಯುಷ್ಮಾನ್ ಕಾರ್ಡ್ ಸಿದ್ಧವಾಗುತ್ತದೆ. ಬಳಿಕ ಅದನ್ನು ನೇರವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.

ಆಯುಷ್ಮಾನ್ ಸಾರಥಿ ಚಾಟ್ಬಾಟ್ ಮೂಲಕ ಇನ್ನೂ ಹಲವು ಸೇವೆಗಳೂ ಲಭ್ಯ
- ಯೋಜನೆಗೆ ನಿಮ್ಮ ಅರ್ಹತೆ ಪರಿಶೀಲನೆ
- ಆಯುಷ್ಮಾನ್ ಕಾರ್ಡ್ ಡೌನ್ಲೋಡ್
- e-KYC ಹಾಗೂ ಆಧಾರ್ ಲಿಂಕ್
- ಕಾರ್ಡ್ ಲಾಕ್ ಮತ್ತು ಅನ್ಲಾಕ್ ಸೌಲಭ್ಯ
- 70 ವರ್ಷ ಮೇಲ್ಪಟ್ಟ ಹಿರಿಯರಿಗೆ ಆಯುಷ್ಮಾನ್ ವಯ ವಂದನಾ ಕಾರ್ಡ್ ಸೇವೆ
- ಹತ್ತಿರದ ನೋಂದಾಯಿತ ಆಸ್ಪತ್ರೆಗಳ ಮಾಹಿತಿ
- ದೂರು ಹಾಗೂ ಸಮಸ್ಯೆಗಳ ದಾಖಲಾತಿ
ಇದನ್ನು ನೋಡಿ : ಪ್ರಧಾನಿ MODIಯಿಂದ ನವಜೋಡಿಗೆ ಗಿಫ್ಟ್ – ಪೋಸ್ಟ್ ಮೂಲಕ ಬಂತು ವಿಶೇಷ ಲೆಟರ್
ಈ ಡಿಜಿಟಲ್ ಸೇವೆಯಿಂದ ಸಾರ್ವಜನಿಕರು ಮನೆಬಿಟ್ಟು ಹೊರಬರದೆ, ತಮ್ಮ ಮೊಬೈಲ್ನಲ್ಲೇ ಆಯುಷ್ಮಾನ್ ಯೋಜನೆಯ ಎಲ್ಲಾ ಪ್ರಮುಖ ಸೇವೆಗಳನ್ನು ಸುಲಭವಾಗಿ ಪಡೆಯಬಹುದಾಗಿದೆ.




