
”ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೋ, ನಾನು ಹೊರಡುತ್ತಿದ್ದೇನೆ”: ರಾಖಿ ಹಬ್ಬದ ದಿನವೇ ಸಹೋದರಿಗೆ ಕೊನೆಯ ಸಂದೇಶ ಕಳುಹಿಸಿ Suicide ಗೆ ಶರಣಾದ ಅಪ್ರಾಪ್ತ
ರಕ್ಷಾ ಬಂಧನ ಹಬ್ಬದಂದೇ 17 ವರ್ಷದ ಹದಿಹರೆಯದ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಜಲಗಾಂವ್ನಲ್ಲಿ ನಡೆದಿದೆ. ಮೃತ ಬಾಲಕನನ್ನು ರೋಹಿತ್ ಸಾಹೇಬ್ರಾವ್ ಧಂಗರ್ ಎಂದು ಗುರುತಿಸಲಾಗಿದ್ದು, ಆತ 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.
ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೋ
ರಕ್ಷಾ ಬಂಧನದ ಹಿನ್ನೆಲೆಯಲ್ಲಿ ಶುಕ್ರವಾರ ರೋಹಿತ್ ತನ್ನ ತಂದೆಯೊಂದಿಗೆ ಸಹೋದರಿಯನ್ನು ಭೇಟಿಯಾಗಿದ್ದ. ಈ ವೇಳೆ ಸಹೋದರಿಯಿಂದ ರಾಖಿ ಕಟ್ಟಿಸಿಕೊಂಡು ಬಳಿಕ ಮನೆಗೆ ವಾಪಸ್ಸಾಗಿದ್ದ. ಮನೆಗೆ ಬಂದ ನಂತರ ಸಹೋದರಿಯೊಂದಿಗಿನ ಫೋಟೋವನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದ ಆತ, ಪೋಸ್ಟ್ನಲ್ಲಿ ʼʼಸಹೋದರಿ, ಎಲ್ಲವನ್ನೂ ನಿಭಾಯಿಸು. ಅಮ್ಮ ಮತ್ತು ಅಪ್ಪನನ್ನು ಒಂಟಿಯಾಗಿ ಬಿಡಬೇಡ. ನಾನು ಹೊರಡುತ್ತಿದ್ದೇನೆʼʼ ಎಂದು ಬರೆದುಕೊಂಡಿದ್ದಾನೆ.
READ THIS : ಡೆತ್ ನೋಟ್ ಬರೆದಿಟ್ಟು ಕೆರೆಗೆ ಹಾರಿ ಯುವಕ ಸೂಸೈಡ್!

ನೇಣು ಬಿಗಿದುಕೊಂಡು Suicide !
ಪ್ರಾಥಮಿಕ ಮಾಹಿತಿಯ ಪ್ರಕಾರ, ರೋಹಿತ್ ತನ್ನ ಸ್ನೇಹಿತನಿಗೆ ವಿಡಿಯೊ ಸಂದೇಶ ಕಳುಹಿಸಿದ್ದು, ಆನ್ಲೈನ್ ಗೇಮಿಂಗ್ನಲ್ಲಿ ಹಣ ಕಳೆದುಕೊಂಡಿರುವುದಾಗಿ ಹೇಳಿದ್ದಾನೆ. ಸಂದೇಶದಿಂದ ಗಾಬರಿಗೊಂಡ ಸ್ನೇಹಿತ ಮತ್ತು ಇತರರು ಅವನ ಮನೆಗೆ ಧಾವಿಸಿದಾಗ ರೋಹಿತ್ ನೇಣು ಬಿಗಿದುಕೊಂಡು Suicide ಮಾಡಿಕೊಂಡಿದ್ದ ಎನ್ನಲಾಗಿದೆ.
MUST WATCH : THE GREAT ಕಲಿಯುಗದ ಶಂಭೂಕಾ NAGENDRA – ಬಳ್ಳಾರಿಯಲ್ಲಿ JANARDHANA REDDY ಗರಂ





