ʼನನ್ನ ಸಾವಿಗೆ ಅವರೇ ಕಾರಣʼ ಎಂದು ಡೆಟ್ನೋಟ್ ಬರೆದಿಟ್ಟು ಯುವಕ Suicide

ಯುವಕನೊಬ್ಬ ಡೆತ್ನೋಟ್ ಬರೆದಿಟ್ಟು ಕೆರೆಗೆ ಹಾರಿ Suicide ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಬೆಂಡರವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಗುರುಮೂರ್ತಿ ಎಂಬಾತ ಮೃತ ಯುವಕ.
READ THIS : 4 ವರ್ಷದ ಮಗನನ್ನೇ ಜಲಾಶಯಕ್ಕೆ ಬಿಸಾಡಿ ಕೊಂದ ಪಾಪಿ ತಂದೆ!
ʼನನ್ನ ಸಾವಿಗೆ ಅವರೇ ಕಾರಣʼ
ಇನ್ನು ಸಾವಿಗೂ ಮುನ್ನ ಬರೆದಿದ್ದ ಡೆತ್ನೋಟ್ನಲ್ಲಿ ನಾಲ್ವರು ಬಂದು ಗಲಾಟೆ ನಡೆಸಿ ಅವಮಾನಿಸಿದ್ದೇ ತನ್ನ ಸಾವಿಗೆ ಕಾರಣ ಎಂದು ಉಲ್ಲೇಖಿಸಿದ್ದಾನೆ. ಇನ್ನು ಗುರುಮೂರ್ತಿ ಕೆರೆಗೆ ಹಾರಿರುವ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಶೋಧ ಕಾರ್ಯ ನಡೆಸಿದ್ದಾರೆ.

ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು
ಸತತ ಕಾರ್ಯಾಚರಣೆ ಬಳಿಕ ಕೆರೆಯಿಂದ ಯುವಕನ ಮೃತದೇಹವನ್ನು ಹೊರತೆಗೆಯಲಾಗಿದೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಯುವಕನ ಸಾವಿಗೆ ಸಂಬಂಧಿಸಿದಂತೆ ಕುಟುಂಬಸ್ಥರು ಶ್ರವಣ ಹಾಗೂ ಅಭಿ ಸೇರಿದಂತೆ ಕೆಲವರ ವಿರುದ್ಧ ಆರೋಪ ಮಾಡಿದ್ದು, ಈ ಸಂಬಂಧ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
MUST WATCH : ಜಲಪ್ರಳಯದಲ್ಲಿ ಸಿಲುಕಿದ ಕನ್ನಡಿಗರು – ವಿಡಿಯೋ ಮೂಲಕ ನಾವು ಸೇಫ್ ಅಂದ್ರು.!





