Chamarajanagar ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಲಿಗೌಡನಹಳ್ಳಿಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಮನೆಯಲ್ಲಿ ಆಟವಾಡುತ್ತಿದ್ದ 4 ವರ್ಷದ ಬಾಲಕಿ ಗ್ರೈಂಡರ್ ಮುಟ್ಟಿದ ವೇಳೆ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾಳೆ.

Chamarajanagar : ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಲಿಗೌಡನಹಳ್ಳಿಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಮನೆಯಲ್ಲಿ ಆಟವಾಡುತ್ತಿದ್ದ ನಾಲ್ಕು ವರ್ಷದ ಅದ್ವಿತಾ, ನೀರು ಕುಡಿಯಲು ಅಡುಗೆ ಮನೆಗೆ ತೆರಳಿದ ವೇಳೆ ಆನ್ ಆಗಿದ್ದ ಗ್ರೈಂಡರ್ ಮುಟ್ಟಿದ್ದಾಳೆ.
MUST READ : ಲಿವ್ ಇನ್ ಗೆಳತಿಯ ಕತ್ತು ಹಿಸುಕಿ ಕೊಂದ ಪ್ರಿಯಕರ!
ಇದರಿಂದ ವಿದ್ಯುತ್ ಪ್ರವಹಿಸಿ ಬಾಲಕಿ ಸ್ಥಳದಲ್ಲೇ ಗಂಭೀರವಾಗಿ ಗಾಯಗೊಂಡಿದ್ದಾಳೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಪುಟ್ಟಮ್ಮ ಮತ್ತು ಆನಂದ್ ದಂಪತಿಯ ಪುತ್ರಿಯಾಗಿದ್ದ ಅದ್ವಿತಾ ಸಾವಿನಿಂದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
MUST WATCH : ನಿರ್ಮಾಣ ಹಂತದ ಕ್ರೀಡಾಂಗಣದಲ್ಲಿ ದುರಂತ ಲಿಫ್ಟ್ ನ ಗುಂಡಿಗೆ ಬಿದ್ದು ಪುಟ್ಟ ಕಂದಮ್ಮ ಸಾ**




