Gruhalakshmi ಯೋಜನೆಗೆ ಹೊಸ ನಿಯಮ: ಅರ್ಜಿಯಲ್ಲಿ 4 ಹೆಚ್ಚುವರಿ ಪ್ರಶ್ನೆ ಸೇರ್ಪಡೆ!

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಗೆ ಹೊಸ ಅರ್ಜಿ ಪ್ರಕ್ರಿಯೆ ಜಾರಿಯಾಗುವ ಸಾಧ್ಯತೆ ಕಂಡುಬಂದಿದ್ದು, ಅರ್ಜಿಯಲ್ಲಿ ನಾಲ್ಕು ಹೊಸ ಪ್ರಶ್ನೆಗಳನ್ನು ಸೇರಿಸಲಾಗಿದೆ. ಈ ಮೂಲಕ ಯೋಜನೆಯ ಫಲಾನುಭವಿಗಳ ಅರ್ಹತೆ ಪರಿಶೀಲನೆಯನ್ನು ಮತ್ತಷ್ಟು ಕಟ್ಟುನಿಟ್ಟಾಗಿಸಲು ಸರ್ಕಾರ ಮುಂದಾಗಿದೆ.
Gruhalakshmi ಯೋಜನೆಗೆ ಹೊಸ ನಿಯಮ:
ಮುಖ್ಯಮಂತ್ರಿಗಳ ಸೂಚನೆಯಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೊಸ ಅರ್ಜಿ ನಮೂನೆಯನ್ನು ಸಿದ್ಧಪಡಿಸಿದ್ದು, ಅರ್ಜಿ ಸಲ್ಲಿಸುವ ವೇಳೆ ಬಯೋಮೆಟ್ರಿಕ್ ಪರಿಶೀಲನೆಯ ಜೊತೆಗೆ ಒಟ್ಟು 12 ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಈ ಹಿಂದೆ ಕೇವಲ 6 ರಿಂದ 8 ಪ್ರಶ್ನೆಗಳಷ್ಟೇ ಇದ್ದ ಅರ್ಜಿಯಲ್ಲಿ ಈಗ ನಾಲ್ಕು ಹೊಸ ಪ್ರಶ್ನೆಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಹೊಸದಾಗಿ ಸೇರಿರುವ 4 ಪ್ರಶ್ನೆಗಳು
- ನಿಮ್ಮ ಕುಟುಂಬದಲ್ಲಿ ಸರ್ಕಾರಿ ನೌಕರರು ಇದ್ದಾರಾ?
- ವೋಟ್ ಲಿಸ್ಟ್ನಲ್ಲಿ ನಿಮ್ಮ ಹೆಸರು ಇದೆಯಾ?
- ವೋಟರ್ ಐಡಿ ಇದೆಯಾ? ಇದ್ದರೆ ತೋರಿಸಿ?
- ಆಧಾರ್ಗೆ ಬ್ಯಾಂಕ್ ಖಾತೆ ಲಿಂಕ್ ಆಗಿದೆಯಾ?
ಇದನ್ನು ಓದಿ : Gruhalakshmi ಯೋಜನೆಗೆ ಮರು ಅರ್ಜಿ ಸಲ್ಲಿಕೆಗೆ ಫಲಾನುಭವಿಗಳ ಆಕ್ರೋಶ..!!
ಸರ್ಕಾರಿ ನೌಕರರ ಕುಟುಂಬಕ್ಕೆ ಗೃಹಲಕ್ಷ್ಮಿ ಕಟ್?
ವಿಶೇಷವಾಗಿ ಕುಟುಂಬದಲ್ಲಿ ಸರ್ಕಾರಿ ನೌಕರರಿದ್ದಾರೆಯೇ ಎಂಬ ಪ್ರಶ್ನೆ ಸೇರ್ಪಡೆಯಾಗಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸರ್ಕಾರಿ ನೌಕರರ ಕುಟುಂಬಗಳನ್ನು ಯೋಜನೆಯ ವ್ಯಾಪ್ತಿಯಿಂದ ಹೊರಗಿಡುವ ಉದ್ದೇಶ ಇದೆಯೇ ಎಂಬ ಚರ್ಚೆಯೂ ಆರಂಭವಾಗಿದೆ.
ಅದೇ ರೀತಿ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆಯೇ ಎಂಬ ಮಾಹಿತಿಯನ್ನೂ ಕಡ್ಡಾಯವಾಗಿ ಕೇಳಲಾಗುತ್ತಿದೆ. ಯೋಜನೆಯ ಹಣ ನೇರವಾಗಿ ಖಾತೆಗೆ ಜಮೆಯಾಗುವ ಹಿನ್ನೆಲೆಯಲ್ಲಿ ಈ ಮಾಹಿತಿ ಮಹತ್ವ ಪಡೆದಿದೆ.

ಈ ಹಿಂದಿನ ಅರ್ಜಿಯಲ್ಲಿದ್ದ ಪ್ರಶ್ನೆಗಳು
- ಮನೆಯ ಯಜಮಾನಿಯ ಹೆಸರು ಮತ್ತು ವಿಳಾಸ
- ಯಜಮಾನಿಯ ಆಧಾರ್ ಸಂಖ್ಯೆ
- ಯಜಮಾನಿಯ ಬ್ಯಾಂಕ್ ಖಾತೆ ವಿವರ
- ಪತಿಯ ಹೆಸರು
- ಪತಿಯ ಆಧಾರ್ ಸಂಖ್ಯೆ
- ಜಾತಿ ವಿವರ
- ಸಂಪರ್ಕ ಮೊಬೈಲ್ ಸಂಖ್ಯೆ
- ಐಟಿ ಮತ್ತು ಜಿಎಸ್ಟಿ ಪಾವತಿದಾರರೇ?
ಆಧಾರ್ಗೆ ಅಕೌಂಟ್ ಲಿಂಕ್ ಆಗಿಲ್ಲ ಅಂದರೆ ಯೋಜನೆ ಅರ್ಜಿ ಸಲ್ಲಿಕೆ ಆಗಲ್ವ?
ಹೊಸ ಅರ್ಜಿ ಮೂಲಕ ಫಲಾನುಭವಿಗಳ ಮಾಹಿತಿಯನ್ನು ಮತ್ತಷ್ಟು ನಿಖರವಾಗಿ ಸಂಗ್ರಹಿಸಿ, ಅರ್ಹರಿಗೆ ಮಾತ್ರ ಯೋಜನೆಯ ಲಾಭ ತಲುಪಿಸುವ ಉದ್ದೇಶ ಸರ್ಕಾರದ್ದಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಹೊಸ ಪ್ರಶ್ನೆಗಳ ಆಧಾರದಲ್ಲಿ ಯಾವ ಮಾನದಂಡಗಳನ್ನು ಅನುಸರಿಸಿ ಅರ್ಜಿ ಅನುಮೋದನೆ ನೀಡಲಾಗುತ್ತದೆ ಎಂಬ ಬಗ್ಗೆ ಸರ್ಕಾರದಿಂದ ಇನ್ನೂ ಅಧಿಕೃತ ಸ್ಪಷ್ಟನೆ ಹೊರಬಂದಿಲ್ಲ.

ಇದನ್ನು ನೋಡಿ : ತುಮಕೂರಲ್ಲಿ ಪೌತಿ ಖಾತಾ ಅಭಿಯಾನ 2.0 – ಹಳ್ಳಿಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ DC




