Bengaluru : ಇನ್ಸ್ಸ್ಟಾಗ್ರಾಮ್ ಪರಿಚಯ, ಲಿವ್-ಇನ್-ರಿಲೇಷನ್ನಲ್ಲಿ ವಾಸ – ಕೊನೆಗೆ ಯುವತಿ ಕತ್ತು ಹಿಸುಕಿ ಕೊಂದ ಜೊತೆಗಾರ!

Bengaluru ನಗರದಲ್ಲಿ ಲಿವ್ ಇನ್ ರಿಲೇಶನ್ಶಿಪ್ ಹೊಸದೇನಲ್ಲ. ಇದೇ ವೇಳೆ ಲೀವ್ ಇನ್ ರಿಲೇಶನ್ಶಿಪ್ನಲ್ಲಿ ನಡೆಯುತ್ತಿರುವ ಹತ್ಯೆ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈಗ ಅಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹೌದು.. ತನ್ನ ಲಿವ್ ಇನ್ ಗೆಳತಿಯನ್ನ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಶನಿವಾರ ರಾತ್ರಿ ಬೆಂಗಳೂರಿನ ಮಲ್ಲೇಶ್ವರದ ಮನೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ನಡೆದಿದ್ದೇನು?
20 ವರ್ಷದ ಅನುಷಾ ಕೊಲೆಯಾದ ಯುವತಿಯಾಗಿದ್ದು, 25 ವರ್ಷದ ಶರತ್ ಬಂಧಿತ ಆರೋಪಿಯಾಗಿದ್ದಾನೆ. ಇಬ್ಬರೂ ಹಾಸನ ಮೂಲದವರಾಗಿದ್ದು, ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿ ಬಳಿಕ ಪರಸ್ಪರ ಪ್ರೀತಿಸಿ ಕಳೆದ ಆರು ತಿಂಗಳಿಂದ ಮಲ್ಲೇಶ್ವರದಲ್ಲಿ ಲಿವ್ ಇನ್ ಸಂಬಂಧದಲ್ಲಿ ವಾಸವಾಗಿದ್ದರು. ಆದರೆ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳ ನಡೆದು ಕೊಲೆಉಆಗಿದೆ.
ಇದನ್ನು ಓದಿ : ಮಾರಕಾಸ್ತ್ರಗಳಿಂದ ಸಿಕ್ಕ ಸಿಕ್ಕ ಕಡೆ ಕೊಚ್ಚಿ ರೌಡಿಶೀಟರ್ನ ಕೊಲೆ

ಪೊಲೀಸರಿಂದ ಆರೋಪಿ ಶರತ್ ಅರೆಸ್ಟ್
ಘಟನೆ ನಡೆದ ಬಳಿಕ ಆರೋಪಿಯೇ ತನ್ನ ವಕೀಲರಿಗೆ ವಿಷಯ ತಿಳಿಸಿದ್ದಾನೆ. ವಕೀಲರು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಶೇಷಾದ್ರಿಪುರಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಶರತ್ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಮೃತ ಅನುಷಾಳ ಶವವನ್ನು ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಇದನ್ನು ನೋಡಿ : K.H.MUNIYAPPAಗೆ DCM ಪಟ್ಟ ಕೊಡಿ – ತುಮಕೂರಿನಲ್ಲಿ ಮಾದಿಗ ಸಮುದಾಯದ ಆಗ್ರಹ




