Murder : ರೌಡಿಶೀಟರ್ ಮೇಲೆ ಅಟ್ಟಹಾಸ ಮೆರೆದ ದುಷ್ಕರ್ಮಿಗಳು.

ಒಮ್ಮೆ ರೌಡಿ ಅಂತಾ ಗುರುತಿಸಿಕೊಂಡರೇ ಸಾಕು ಅವನ ಮೇಲೆ ಪೊಲೀಸರು ಮಾತ್ರ ಕಣ್ಣಿಟ್ಟಿರೋದು ಮಾತ್ರವಲ್ಲದೇ, ಕೆಲವರು ಹಳೆ ದ್ವೇಷವನ್ನು ಇಟ್ಟುಕೊಂಡಿರ್ತಾರೆ. ಹಳೆ ದ್ವೇಷದಿಂದಲೇ ಕೆಲ ದುಷ್ಕರ್ಮಿಗಳು ಹೊಂಚು ಹಾಕಿಕಲು ಟೈಂ ಕಾಯ್ತಾ ಇರ್ತಾರೆ. ಅದ್ರಂತೆ ಇದೀಗ ರೌಡಿಶೀಟರ್ ಒಬ್ಬನನ್ನು ದುಷ್ಕರ್ಮಿಗಳು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಭಯಾನಕವಾಗಿ ಕೊಂದಿರುವ ಘಟನೆ ಹಾಸನ ನಗರದ ಜಿಲ್ಲಾ ನ್ಯಾಯಾಲಯದ ಮುಂಭಾಗ ನಡೆದಿದೆ.

ಇದನ್ನು ಓದಿ : ಬೆಳ್ಳಂಬೆಳಗ್ಗೆ ಬೆಂಗಳೂರಲ್ಲಿ ಹರಿದ ನೆತ್ತರು – ಯುವಕನನ್ನು ಕೊಚ್ಚಿ Murder!
ಮಾರಕಾಸ್ತ್ರಗಳಿಂದ ಕೊಚ್ಚಿ ಕೊಚ್ಚಿ ಕೊಲೆ
ಹಾಸನ ಮೂಲದವರಾದ 43 ವರ್ಷದ ಮಂಜೇಶ್ ಎಂಬ ಕುಟುಂಬದೊಂದಿಗೆ ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ರು. ಅಲ್ಲಿನ ಪೊಲೀಸ್ ಠಾಣೆಯೊಂದರಲ್ಲಿ ಮಂಜೇಶ್ ರೌಡಿಶೀಟರ್ ಎಂದು ಗುರುತಿಸಿಕೊಂಡಿದ್ದ. ಕೆಲಸದ ನಿಮಿತ್ತ ಹಾಸನಕ್ಕೆ ಬಂದಿದ್ದ ಮಂಜೇಶ್ನನ್ನು ಹೊಂಚು ಹಾಕಿ ಹಿಂಬಾಲಿಸಿದ ಹಂತಕರು, ಜಿಲ್ಲಾ ನ್ಯಾಯಾಲಯದ ಮುಂಭಾಗ ಒಂಟಿಯಾಗಿ ಇದದ್ದನ್ನ ಗಮನಿಸಿದ ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ಹಿಡಿದು ಅಟ್ಟಾಡಿಸಿ, ಅಟ್ಯಾಕ್ ಮಾಡಿದ್ರು. ಮುಖ ಮೂತಿ ಅಂತಾನೂ ನೋಡದೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಚ್ಚಿ Murder ಮಾಡಿ ಸ್ಥಳದಿಂದ ಎಸ್ಕೇಪ್ ಆಗಿದ್ರು.
ಭೀಕರ ಘಟನೆ ಕಂಡು ಬೆಚ್ಚಿಬಿದ್ದ ಸಾರ್ವಜನಿಕರು
ಇನ್ನು ಹಾಸನ ನಗರದಲ್ಲಿ ರಾಜಾರೋಷವಾಗಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು, ಸದಾ ಜನರಿಂದ ಓಡಾಡುವ ಜಾಗದಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದು, ಸಾರ್ವಜನಿಕರು ಈ ಭೀಕರ ಘಟನೆ ಕಂಡು ಬೆಚ್ಚಿಬಿದ್ದಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಹಾಸನ ನಗರ ಠಾಣೆಯ ಪೊಲೀಸರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಶವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಹ*ತಕರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಯಾವ ಕಾರಣಕ್ಕೆ Murder ಮಾಡಿದ್ದಾರೆ?
ಸದ್ಯ ಈ ಸಂಬಂಧ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ. ರೌಡಿಶೀಟರ್ನನ್ನು ಕೊಂದಿರುವ ದುಷ್ಕರ್ಮಿಗಳು ಯಾರು..? ಯಾವ ಕಾರಣಕ್ಕೆ ಕೊಲೆ ಮಾಡಿದ್ದಾರೆ ಅನ್ನೋದನ್ನ ತನಿಖೆ ಬಳಿಕ ತಿಳಿದುಬರಲಿದೆ.
ಇದನ್ನು ನೋಡಿ : ತಿಪಟೂರಲ್ಲಿ SIR ಪ್ರಕ್ರಿಯೆ ಶುರು – ಆತಂಕ ಪಡಬೇಡಿ ಎಂದ ಆಯುಕ್ತರು




