ಹಾಸನದಲ್ಲಿ ಭೀಕರ Accident – ಯುವಕ ಸಾವು

ಹಾಸನ-ಶೆಟ್ಟಿಹಳ್ಳಿ ರಸ್ತೆಯಲ್ಲಿ ಟ್ರ್ಯಾಕ್ಟರ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ, ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ ಬರೆದು ವಾಪಸ್ ಬರುತ್ತಿದ್ದ 20 ವರ್ಷದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇದನ್ನು ಓದಿ : ಸಾರಿಗೆ ಬಸ್ಗಳ ನಡುವೆ ಡೆಡ್ಲಿ Accident – ಬಸ್ ಚಾಲಕರು ಸಾವು

ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಮೃತ ಯುವಕನನ್ನು ಆಲೂರು ತಾಲೂಕಿನ ಕಾಗನೂರು ಗ್ರಾಮದ ಸಾಗರ್ ಗೌಡ ಎಂದು ಗುರುತಿಸಲಾಗಿದೆ. ಸದ್ಯ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Accident – ಹೆತ್ತವರ ಪಾಲಿಗೆ ಇದೀಗ ಬರಸಿಡಿಲು ಬಡಿದಂತಾಗಿದೆ
ಆದ್ರೆ ಮಗ ಪೊಲೀಸ್ ಆಗಿ ಖಾಕಿ ತೊಡ್ತಾನೆ ಎಂಬ ಕನಸು ಕಂಡಿದ್ದ ಹೆತ್ತವರ ಪಾಲಿಗೆ ಇದೀಗ ಬರಸಿಡಿಲು ಬಡಿದಂತಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನು ನೋಡಿ : ಪಕ್ಷ ನಿಷ್ಠ ಸಾಮಾನ್ಯ ಕಾರ್ಯಕರ್ತನಿಗೆ ಹೈಕಮಾಂಡ್ ಸಚಿವ ಸ್ಥಾನ ಕೊಟ್ಟಿದೆ




