
HASSAN : ಆಸ್ತಿಗಾಗಿ ತಮ್ಮನನ್ನೇ ಚಾಕು ಇರಿದು ಹತ್ಯೆಗೈದ ಅಣ್ಣ
ಸಹೋದರರ ನಡುವೆ ಜಮೀನಿಗಾಗಿ ನಡೆದ ಜಗಳ ತಮ್ಮನ ಕೊಲೆಯಲ್ಲಿ ಅಂತ್ಯವಾಗಿದ ದಾರುಣ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಸೋಂಪುರ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಗ್ರಾಮದ ರಘು (44) ಎಂದು ಗುರುತಿಸಲಾಗಿದ್ದು, ಅವರ ಅಣ್ಣ ದೇವರಾಜ್ (46) ಕೊಲೆ ಆರೋಪಿಯಾಗಿದ್ದಾನೆ.
ಚಾಕುವಿನಿಂದ ಇರಿದು ಹತ್ಯೆ!
ಸೆಪ್ಟೆಂಬರ್ 24ರಂದು ಜಮೀನು ವಿವಾದದ ಜೊತೆಗೆ ನ್ಯಾಯಬೆಲೆ ಅಂಗಡಿಯಿಂದ ಪಡಿತರ ತಂದ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಸಹೋದರರ ನಡುವೆ ಜಗಳ ನಡೆದಿತ್ತು. ಈ ವೇಳೆ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ್ದು, ದೇವರಾಜ್ ಚಾಕುವಿನಿಂದ ರಘುಗೆ ಇರಿದಿದ್ದಾನೆ.
READ THIS : ಕ್ಷುಲ್ಲಕ ಕಾರಣಕ್ಕೆ ಗ್ಯಾಂಗ್ನಿಂದ ಅಟ್ಯಾಕ್ – ರೌಡಿಶೀಟರ್ ಬರ್ಬರ MURDER

ಇನ್ನು ತೀವ್ರವಾಗಿ ಗಾಯಗೊಂಡಿದ್ದ ರಘು ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
HASSAN – ಪ್ರಕರಣ ದಾಖಲು
ಈ ದುರಂತ ಘಟನೆ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.
MUST WATCH : SIR ನಿಂದ ಅಲ್ಪಸಂಖ್ಯಾತರ ಮತಗಳಿಗೆ ಕನ್ನ- ಚುನಾವಣಾ ಆಯೋಗದ ವಿರುದ್ದ ಪ್ರತಿಭಟನೆ





