
ARASIKERE : ಫಿಲ್ಮಿ ಸ್ಟೈಲ್ನಲ್ಲಿ ವ್ಹೀಲಿಂಗ್ – ಬೈಕ್ ಸಮೇತ ಬಿದ್ದ ಯುವಕ!
ARASIKERE ನಗರದಲ್ಲಿ ಯುವಕರ ವೀಲಿಂಗ್ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ನಗರದ ಮುಖ್ಯರಸ್ತೆಯಲ್ಲೇ ಮಧ್ಯಾಹ್ನದ ವೇಳೆ ಯುವಕರು ಯಾರ ಭಯವೂ ಇಲ್ಲದೆ, ಫಿಲ್ಮಿ ಸ್ಟೈಲ್ನಲ್ಲಿ ಬೈಕ್ ವೀಲಿಂಗ್ ಮಾಡುತ್ತಿದ್ದ ವೇಳೆ, ಚಾಲಕನ ನಿಯಂತ್ರಣ ತಪ್ಪಿದೆ.
READ THIS : ಬೈಕ್ ವ್ಹೀಲಿಂಗ್ ಪುಂಡರ ಹಾವಳಿಗೆ ರೋಸಿ ಹೋದ Tiptur ಜನ

ಸಾರ್ವಜನಿಕರ ಜೀವಕ್ಕೂ ಅಪಾಯ!
ಪರಿಣಾಮ ವೀಲಿಂಗ್ ಮಾಡುತ್ತಿದ್ದ ಯುವಕ ಬೈಕ್ ಸಮೇತ ರಸ್ತೆಗೆ ಬಿದ್ದಿದ್ದಾನೆ. ಕೆಲವೇ ಕ್ಷಣಗಳಲ್ಲಿ ಎದ್ದು ನಿಂತ ಯುವಕ, ಗಂಭೀರ ಗಾಯವಾಗದ ಹಿನ್ನೆಲೆಯಲ್ಲಿ ಬೈಕ್ ತೆಗೆದುಕೊಂಡು ಅಲ್ಲಿಂದ ತೆರಳಿದ್ದಾನೆ ಎನ್ನಲಾಗಿದೆ. ಇನ್ನು ಈ ಸಂಪೂರ್ಣ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೀಲಿಂಗ್ ವೇಳೆ ಬೈಕ್ ನಿಯಂತ್ರಣ ತಪ್ಪಿದ್ರೆ ಸವಾರನ ಜೀವಕ್ಕಷ್ಟೇ ಅಲ್ಲ, ರಸ್ತೆಯಲ್ಲಿ ಸಂಚರಿಸುವ ಅಮಾಯಕ ಸಾರ್ವಜನಿಕರ ಜೀವಕ್ಕೂ ಅಪಾಯ ಎದುರಾಗಬಹುದು.
ARASIKERE – ವೇಗದ ಬೈಕ್ ಚಾಲನೆಗೆ ಕಡಿವಾಣ ಹಾಕಬೇಕೆಂದು ಆಗ್ರಹ
ಹೀಗಾಗಿ ನಗರದಲ್ಲಿ ವೀಲಿಂಗ್ ಹಾಗೂ ಅತಿವೇಗದ ಬೈಕ್ ಚಾಲನೆಗೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

MUST WATCH : ತುಮಕೂರಲ್ಲಿ ವಾಟರ್ಮ್ಯಾನ್ಸ್ ಮುಷ್ಕರ – ಕುಡಿಯುವ ನೀರಿಗಾಗಿ ಹಲವೆಡೆ ಪರದಾಟ




