ಭ್ರಷ್ಟಾಚಾರ ವಿರೋಧಿ ಸಂಹಿತೆ ಉಲ್ಲಂಘನೆ – ಅಖಿಲೇಶ್ ರೆಡ್ಡಿಗೆ 8 ವರ್ಷಗಳ ನಿಷೇಧ

ಐಸಿಸಿ ಭ್ರಷ್ಟಾಚಾರ ನಿಗ್ರಹ ಸಂಹಿತೆಯ (Anti-Corruption Code) ಮೂರು ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಅಮೆರಿಕದ ಕ್ರಿಕೆಟಿಗ ಬೊಡುಗುಂ ಅಖಿಲೇಶ್ ರೆಡ್ಡಿ ಅವರಿಗೆ ಎಲ್ಲಾ ಮಾದರಿಯ ಕ್ರಿಕೆಟ್ನಿಂದ 8 ವರ್ಷಗಳ ನಿಷೇಧ ವಿಧಿಸಲಾಗಿದೆ. ಐಸಿಸಿ ನೀಡಿರುವ ಮಾಹಿತಿಯ ಪ್ರಕಾರ, 2025ರ ನವೆಂಬರ್ 21ರಂದು ಜಾರಿಗೊಳಿಸಿದ್ದ ತಾತ್ಕಾಲಿಕ ಅಮಾನತು ದಿನಾಂಕದಿಂದಲೇ ಈ ಶಿಕ್ಷೆ ಅನ್ವಯವಾಗಲಿದ್ದು, 2033ರ ನವೆಂಬರ್ವರೆಗೆ ನಿಷೇಧ ಜಾರಿಯಲ್ಲಿರಲಿದೆ.

ಭ್ರಷ್ಟಾಚಾರ ವಿರೋಧಿ ಸಂಹಿತೆ ಉಲ್ಲಂಘನೆ
ಈ ಪ್ರಕರಣವು 2025ರ ಅಬುಧಾಬಿ ಟಿ10 ಲೀಗ್ ವೇಳೆ ನಡೆದ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದೆ. ಆ ಟೂರ್ನಿಯಲ್ಲಿ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಪರವಾಗಿ ಐಸಿಸಿ ನೇಮಿಸಿದ್ದ ಭ್ರಷ್ಟಾಚಾರ ವಿರೋಧಿ ಅಧಿಕಾರಿ (DACO) ತನಿಖೆ ನಡೆಸಿದ್ದರು.
ಇದನ್ನು ಓದಿ : GOVT ಬಸ್ಗಳಲ್ಲಿ ಇನ್ಮುಂದೆ ಜಾಹೀರಾತಿಗೆ ಸಂಪೂರ್ಣ ನಿಷೇಧ.!
ತನಿಖೆಯಲ್ಲಿ, ಪಂದ್ಯಗಳ ಫಲಿತಾಂಶ, ಪ್ರಗತಿ ಅಥವಾ ಇತರ ಅಂಶಗಳ ಮೇಲೆ ಅಕ್ರಮವಾಗಿ ಪ್ರಭಾವ ಬೀರುವ ಪ್ರಯತ್ನ ನಡೆಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಐಸಿಸಿ ಭ್ರಷ್ಟಾಚಾರ ನಿಗ್ರಹ ಸಂಹಿತೆಯ ಆರ್ಟಿಕಲ್ 2.1.1 ಅನ್ನು ಅಖಿಲೇಶ್ ರೆಡ್ಡಿ ಉಲ್ಲಂಘಿಸಿರುವುದು ದೃಢಪಟ್ಟಿದೆ.

ಇದಲ್ಲದೆ, ಮತ್ತೊಬ್ಬ ಆಟಗಾರನನ್ನು ಭ್ರಷ್ಟ ಚಟುವಟಿಕೆಯಲ್ಲಿ ಭಾಗಿಯಾಗಲು ಪ್ರೇರೇಪಿಸುವುದು, ಮನವೊಲಿಸುವುದು ಅಥವಾ ಉದ್ದೇಶಪೂರ್ವಕವಾಗಿ ಉತ್ತೇಜಿಸಿದ್ದಕ್ಕಾಗಿ ಆರ್ಟಿಕಲ್ 2.1.4 ಉಲ್ಲಂಘನೆಯೂ ಸಾಬೀತಾಗಿದೆ.
ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ ಎರಡನೇ ಆಟಗಾರ
ಅಖಿಲೇಶ್ ನಾಲ್ಕು T20I ಪಂದ್ಯಗಳಲ್ಲಿ USA ತಂಡವನ್ನು ಪ್ರತಿನಿಧಿಸಿದ್ದರು, ಎಲ್ಲವೂ ಏಪ್ರಿಲ್ 2025 ರಲ್ಲಿ ನಡೆದವು. ಈ ವರ್ಷ ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ ಎರಡನೇ USA ಅಂತಾರಾಷ್ಟ್ರೀಯ ಆಟಗಾರ.

ಇದನ್ನು ನೋಡಿ : GUARANTEE SCHEMEಗಳನ್ನು ಕೂಡಲೇ ನಿಲ್ಲಿಸಿ – ಕೂಡಲೇ ಬರ ಪರಿಹಾರ ನೀಡಲು ಆಗ್ರಹ




