2027ರ ಏಕದಿನ ವಿಶ್ವಕಪ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸುತ್ತೇನೆಂದ Virat Kohli !

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 2027ರ ಐಸಿಸಿ ಏಕದಿನ ವಿಶ್ವಕಪ್ ತಮ್ಮ ಪಾಲಿಗೆ ಕೊನೆಯ ವಿಶ್ವಕಪ್ ಟೂರ್ನಿಯಾಗಲಿದೆ ಎಂದು ಕೊಹ್ಲಿ ತಿಳಿಸಿದ್ದಾರೆ.
ಮುಂದಿನ ಐಸಿಸಿ ಏಕದಿನ ವಿಶ್ವಕಪ್ ತಮ್ಮ ಪಾಲಿಗೆ ಕೊನೆಯ ಟೂರ್ನಿ
ಜಿಯೊಸ್ಟಾರ್ ಜೊತೆ ಮಾತನಾಡಿದ ವಿರಾಟ್ ಕೊಹ್ಲಿ, ಮುಂದಿನ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವುದು ತಮ್ಮ ಕೊನೆಯ ವಿಶ್ವಕಪ್ ಅವಕಾಶವಾಗಿರಲಿದೆ ಎಂದು ಹೇಳಿದ್ದಾರೆ. ಈ ಹೇಳಿಕೆ ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಪ್ರಸ್ತುತ ವಿರಾಟ್ ಕೊಹ್ಲಿ ಭಾರತ ತಂಡದೊಂದಿಗೆ ತಿರುವನಂತಪುರಂನಲ್ಲಿದ್ದು, ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಸಜ್ಜಾಗುತ್ತಿದ್ದಾರೆ.

2027ರ ವಿಶ್ವಕಪ್ ಮೇಲೆ ಕೊಹ್ಲಿ ಕಣ್ಣು
ಮುಂದಿನ ಏಕದಿನ ವಿಶ್ವಕಪ್ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ವಿದೇಶಿ ಪರಿಸ್ಥಿತಿಗಳಲ್ಲಿ ನಡೆಯಲಿರುವ ಈ ಟೂರ್ನಿಗೆ ಈಗಿನಿಂದಲೇ ಸಿದ್ಧತೆ ಅಗತ್ಯ ಎಂದು Virat Kohli ಹೇಳಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿನ ತೀವ್ರತೆ ಹಾಗೂ ದೈಹಿಕ ಸವಾಲಿನ ಬಗ್ಗೆಯೂ ಕೊಹ್ಲಿ ಮಾತನಾಡಿದ್ದಾರೆ. 50 ಓವರ್ಗಳ ವಿಶ್ವಕಪ್ನ ಒತ್ತಡ ಮತ್ತು ತೀವ್ರತೆ ಇತರ ಯಾವುದೇ ಟೂರ್ನಿಗಿಂತ ಭಿನ್ನವಾಗಿದೆ ಎಂದು ಅವರು ಹೇಳಿದ್ದಾರೆ. “50 ಓವರ್ಗಳ ವಿಶ್ವಕಪ್ನ ತೀವ್ರತೆ ಬೇರೆ ಯಾವುದೇ ಟೂರ್ನಿಗಿಂತ ಹೆಚ್ಚಾಗಿದೆ. 10 ಪಂದ್ಯಗಳವರೆಗೆ ಇದೇ ರೀತಿಯ ತೀವ್ರತೆಯನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲು.”
READ THIS : IPLಗೆ ಕೊಹ್ಲಿ ನಿವೃತ್ತಿ ಸಾಧ್ಯತೆ – RCB ತಂಡದ ನಿರ್ದೇಶಕ ಹೇಳಿದ್ದೇನು?

2011ರಲ್ಲಿ ಮೊದಲ ವಿಶ್ವಕಪ್ ಗೆದ್ದಿದ್ದ ಕೊಹ್ಲಿ
2008ರಲ್ಲಿ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ವಿರಾಟ್ ಕೊಹ್ಲಿ, 2011ರಲ್ಲಿ ತಮ್ಮ ಮೊದಲ ಏಕದಿನ ವಿಶ್ವಕಪ್ ಆಡಿದ್ದರು.
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಟೂರ್ನಿಗೆ ಭರ್ಜರಿ ಆರಂಭ ನೀಡಿದ್ದರು.
2011ರ ವಿಶ್ವಕಪ್ ಫೈನಲ್ನಲ್ಲಿ ಶ್ರೀಲಂಕಾ ವಿರುದ್ಧ ಕೊಹ್ಲಿ 49 ಎಸೆತಗಳಲ್ಲಿ 35 ರನ್ ಗಳಿಸಿದ್ದರು. ಗೌತಮ್ ಗಂಭೀರ್ ಅವರೊಂದಿಗೆ ಮೂರನೇ ವಿಕೆಟ್ಗೆ 83 ರನ್ಗಳ ಜೊತೆಯಾಟ ನೀಡಿದ್ದರು. ಬಳಿಕ ಭಾರತ ತಂಡ ಶ್ರೀಲಂಕಾವನ್ನು ಮಣಿಸಿ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಟ್ರೋಫಿ ಎತ್ತಿಹಿಡಿದಿತ್ತು.
2019ರಲ್ಲಿ ನಾಯಕನಾಗಿ ವಿಶ್ವಕಪ್ ಗೆಲ್ಲುವ ಅವಕಾಶ ಕೈತಪ್ಪಿತ್ತು
2019ರ ಏಕದಿನ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಆದರೆ ಮಳೆ ಬಾಧಿತ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋಲನುಭವಿಸಿ ಫೈನಲ್ ಪ್ರವೇಶಿಸುವ ಅವಕಾಶ ಕಳೆದುಕೊಂಡಿತ್ತು.

MUST WATCH : ಹಿಂದೂ ಮಹಾ ಗಣಪತಿ ಗಣೇಶೋತ್ಸವ ವಿಸರ್ಜನೆಗೆ ಹರಿದು ಬಂದ ಭಕ್ತಸಾಗರ




