
BENGALURU | ಮಹಿಳೆಯೊಂದಿಗೆ ರ್ಯಾಪಿಡೋ ಚಾಲಕನ ಅಸಭ್ಯ ವರ್ತನೆ – ಮನೆ ಗೇಟ್ಗೆ ಮೂತ್ರ ವಿಸರ್ಜಿಸಿ ವಿಕೃತಿ!
ಬೆಂಗಳೂರಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ರ್ಯಾಪಿಡೋ ಪಾರ್ಟ್ನರ್ನಿಂದ ಅಸಭ್ಯ ವರ್ತನೆ ಆರೋಪ ಕೇಳಿಬಂದಿದ್ದು, ಸಿಸಿಟಿವಿ ವಿಡಿಯೋ ಸಮೇತ ಮಹಿಳೆ ದೂರು ನೀಡಿರುವ ಘಟನೆ ನಡೆದಿದೆ.
ರ್ಯಾಪಿಡೋ ಚಾಲಕನಿಂದ ಅಸಭ್ಯ ವರ್ತನೆ!
ಮಹಿಳೆಯ ದೂರಿನ ಪ್ರಕಾರ, ಶಿವಾರೆಡ್ಡಿ ಎಂಬ ರ್ಯಾಪಿಡೋ ಪಾರ್ಟ್ನರ್ ತಮ್ಮ ಮನೆಯ ಗೇಟ್ ಬಳಿ ಮೂತ್ರ ವಿಸರ್ಜನೆ ಮಾಡಿ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳು ಸೆರೆಯಾಗಿದ್ದು, ಬಳಿಕ ಮಹಿಳೆಯ ಮೊಬೈಲ್ಗೆ ಆಡಿಯೋ ಸಂದೇಶವನ್ನೂ ಕಳುಹಿಸಲಾಗಿದೆ ಎಂದು ಆರೋಪಿಸಲಾಗಿದೆ.
READ THIS : ಅಪ್ರಾಪ್ತೆ ಜೊತೆ ಅಸಭ್ಯ ವರ್ತನೆ – ಕಾಮುಕನಿಗೆ ಹಿಗ್ಗಾಮುಗ್ಗ ಥಳಿಸಿದ ಮಹಿಳೆಯರು.!

BENGALURU – ನಿನ್ನ ಮನೆ ಹತ್ತಿರ ಚಲಿರುವುದು ನೀರಲ್ಲ ಮೂತ್ರ
ಆಡಿಯೋದಲ್ಲಿ ನಿನ್ನ ಮನೆ ಹತ್ತಿರ ಚಲಿರುವುದು ನೀರಲ್ಲ ಮೂತ್ರ ಎಂದು ಮಹಿಳೆ ಮೊಬೈಲ್ಗೆ ಶಿವಾರೆಡ್ಡಿ, ಆಡಿಯೋ ನೋಟ್ ಕಳಿಸಿದ್ದಾನೆ. ಇದೀಗ ಆಡಿಯೋ ಪೋಸ್ಟ್ ಮಾಡಿ ಮಹಿಳೆ ದೂರು ನೀಡಿದ್ದಾರೆ.
MUST WATCH : SIR ಪ್ರಕ್ರಿಯೆ ಕುರಿತು ಕಾಂಗ್ರೆಸ್ ಅನುಮಾನ – ತುಮಕೂರಲ್ಲಿ ಸೆ.28ಕ್ಕೆ ಬೃಹತ್ ಪ್ರತಿಭಟನೆ





