
ನಾಳೆ DARSHAN ಗೆ ಬಿಗ್ ಡೇ : ಮಾಫಿ ಸಾಕ್ಷಿ ಪ್ರದೋಷ್ ನಿಂದ ಹೇಳಿಕೆ ದಾಖಲು : ಡಿ ಬಾಸ್ ಗೆ ಹೆಚ್ಚಿದ ಸಂಕಷ್ಟ!
ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಾಳೆ ಅತ್ಯಂತ ಮಹತ್ವದ ಕಾನೂನು ಪ್ರಕ್ರಿಯೆ ನ್ಯಾಯಾಲಯದಲ್ಲಿ ನಡೆಯಲಿದೆ.
ಪ್ರಕರಣದಲ್ಲಿ ಮಾಫಿ ಸಾಕ್ಷಿ (ಅಪ್ರೂವರ್/ಪ್ರಾಸಿಕ್ಯೂಷನ್ ವಿಟ್ನೆಸ್) ಆಗಲು ಒಪ್ಪಿರುವ ಪ್ರದೋಷ್ ಅವರ ಹೇಳಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸುವ ಪ್ರಕ್ರಿಯೆ ನಡೆಯಲಿದೆ.
ಆರೋಪಿಗಳ ಸಂಖ್ಯೆ 16ಕ್ಕೆ ಇಳಿಕೆ!
ಈ ಬೆಳವಣಿಗೆಯೊಂದಿಗೆ ಪ್ರಕರಣದಲ್ಲಿ ಆರೋಪಿಗಳ ಸಂಖ್ಯೆ 16ಕ್ಕೆ ಇಳಿದಿದೆ. ಪ್ರದೋಷ್ ಅವರನ್ನು ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ಪರಿಗಣಿಸಲಾಗಿದ್ದು,
ನ್ಯಾಯಾಧೀಶರ ಸಮ್ಮುಖದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕ (SPP) ಪ್ರಸನ್ನ ಕುಮಾರ್ ಅವರು ಅವರ ಮುಖ್ಯ ವಿಚಾರಣೆ ನಡೆಸಲಿದ್ದಾರೆ.
ಈಗಾಗಲೇ ಲಿಖಿತ ರೂಪದಲ್ಲಿ ತನ್ನ ಹೇಳಿಕೆಯನ್ನು ನೀಡಿರುವ ಪ್ರದೋಷ್, ನಾಳಿನ ವಿಚಾರಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ತಿಳಿದಿರುವ ವಿಚಾರಗಳನ್ನು ನ್ಯಾಯಾಲಯದ ಮುಂದೆ ದಾಖಲಿಸಲಿದ್ದಾರೆ ಎಂದು ತಿಳಿದುಬಂದಿದೆ.
READ THIS : ಆರೋಪಿ Darshan ಗೆ ಎದುರಾಯ್ತು ಮಾಫಿ ಸಾಕ್ಷಿ ಭೀತಿ!

16 ಆರೋಪಿಗಳಿಂದ ಕ್ರಾಸ್ ಎಕ್ಸಾಮಿನೇಷನ್
ಪ್ರಾಸಿಕ್ಯೂಷನ್ ಪರ ಮುಖ್ಯ ವಿಚಾರಣೆ ಪೂರ್ಣಗೊಂಡ ಬಳಿಕ, ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಪ್ರಕರಣದ 16 ಆರೋಪಿಗಳ ಪರ ವಕೀಲರು ಪ್ರದೋಷ್ ಅವರನ್ನು ಕ್ರಾಸ್ ಎಕ್ಸಾಮಿನೇಷನ್ಗೆ ಒಳಪಡಿಸುವ ಸಾಧ್ಯತೆ ಇದೆ.
ಅಪ್ರೂವರ್ ಸಾಕ್ಷಿಯ ಹೇಳಿಕೆಯನ್ನು ಆರೋಪಿಗಳ ಪರ ವಕೀಲರು ಪ್ರಶ್ನಿಸುವುದು ವಿಚಾರಣೆಯ ಪ್ರಮುಖ ಹಂತವಾಗಲಿದೆ. ಪ್ರದೋಷ್ ನೀಡುವ ಹೇಳಿಕೆಗಳಲ್ಲಿ ಯಾವುದೇ ವ್ಯತ್ಯಾಸಗಳಿವೆಯೇ, ಹಿಂದಿನ ಹೇಳಿಕೆಗಳಿಗೆ ಹೊಂದಿಕೆಯಾಗುತ್ತದೆಯೇ ಹಾಗೂ ಅವರ ಸಾಕ್ಷ್ಯದ ವಿಶ್ವಾಸಾರ್ಹತೆ ಹೇಗಿದೆ ಎಂಬುದನ್ನು ಕ್ರಾಸ್ ಎಕ್ಸಾಮಿನೇಷನ್ ವೇಳೆ ಪರಿಶೀಲಿಸಲಾಗುತ್ತದೆ.
ಪ್ರಕರಣದಲ್ಲಿ ಪ್ರತಿಯೊಬ್ಬ ಆರೋಪಿಯ ಪಾತ್ರದ ಕುರಿತು ಪ್ರದೋಷ್ ನೀಡುವ ಸಾಕ್ಷ್ಯವೂ ವಿಚಾರಣೆಯಲ್ಲಿ ಪ್ರಮುಖವಾಗಲಿದೆ.
ಹೀಗಾಗಿ ನಾಳಿನ ಸಾಕ್ಷ್ಯ ವಿಚಾರಣೆ ಪ್ರಕರಣದ ಮುಂದಿನ ಕಾನೂನು ಪ್ರಕ್ರಿಯೆಯಲ್ಲಿ ಮಹತ್ವದ ಹಂತವಾಗುವ ಸಾಧ್ಯತೆಯಿದೆ.

ದರ್ಶನ್ ಅರ್ಜಿ ವಜಾ
ಮಾಫಿ ಸಾಕ್ಷಿ ಪ್ರದೋಷ್ ಅವರ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಮುಂದೂಡಬೇಕು ಹಾಗೂ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಸಮಯ ನೀಡಬೇಕು ಎಂದು ನಟ ದರ್ಶನ್ ಪರ ಸಲ್ಲಿಸಲಾಗಿದ್ದ ಮನವಿಯನ್ನು ನ್ಯಾಯಾಲಯ ವಜಾಗೊಳಿಸಿದೆ ಎಂದು ತಿಳಿದುಬಂದಿದೆ.
MUST WATCH : ತುಮಕೂರು ಗ್ರಾ.ದಲ್ಲಿ ಸಮಸ್ಯೆಗಳ ಸರಮಾಲೆ – ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ





