ನಟ Darshan ಗೆ ಮಾಫಿ ಸಾಕ್ಷಿ ಭೀತಿ : ದೇವರ ಫೋಟೋಗೆ ಕೈ ಮುಗಿದು, ಕಾಫಿ ಕುಡಿದು ಮೌನಕ್ಕೆ ಶರಣು!

ನಟ Darshan ಗೆ ಇದೀಗ ಮಾಫಿ ಸಾಕ್ಷಿ ಭೀತಿ ಎದುರಾಗಿದ್ದು ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಇದೀಗ ಚಿಂತೆಗೆ ಈಡಾಗಿದ್ದಾರೆ. ಇಡೀ ರಾತ್ರಿ ನಿದ್ದೆ ಮಾಡದೆ ದರ್ಶನ್ ಚಿಂತೆಗೀಡಾಗಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಮಾಫಿ ಸಾಕ್ಷಿಯಗಲು ಪ್ರದೋಶ್ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳಿಗೂ ಇದೀಗ ಆತಂಕ ಶುರುವಾಗಿದೆ.
ಮಾನಸಿಕ ಹಾಗೂ ದೈಹಿಕವಾಗಿ ದರ್ಶನ್ ಕುಗ್ಗಿದ್ದಾರೆ
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಆರೋಪಿ ದರ್ಶನ್ ಕಳೆದ ರಾತ್ರಿ ಜೈಲು ಸಿಬ್ಬಂದಿ ನೀಡಿದ ಊಟ ಮಾಡಿಲ್ಲ. ಸಹ ಬಂಧಿಗಳ ಜೊತೆ ಮಾತನಾಡದೆ ದರ್ಶನ್ ಏಕಾಂಗಿಯಾಗಿ ಕುಳಿತಿದ್ದರು ಎನ್ನಲಾಗಿದೆ. ಈಗಾಗಲೇ ಮಾನಸಿಕ ಹಾಗೂ ದೈಹಿಕವಾಗಿ ದರ್ಶನ್ ಕುಗ್ಗಿದ್ದಾರೆ.
ಇದನ್ನು ಓದಿ : ದರ್ಶನ್ಗೆ ಮತ್ತೆ ಶಾಕ್ – ಪ್ರದೋಷ್ ಬಳಿಕ ಮತ್ತಿಬ್ಬರು ಮಾಫಿ ಸಾಕ್ಷಿ ಅರ್ಜಿ

ನಟ ದರ್ಶನ್ ಗೆ ಮಾಫಿ ಸಾಕ್ಷಿ ಭೀತಿ
ದೇವರ ಫೋಟೋಗೆ ಕೈ ಮುಗಿದು ಕಾಫಿ ಕುಡಿದು ಕುಳಿತಿರುವ ದರ್ಶನ್, ಕೇಸ್ ಭವಿಷ್ಯ ಏನಾಗುತ್ತೋ ಎಂಬ ಆತಂಕದಲ್ಲಿ ಇದ್ದಾರೆ. ಬೆಳಿಗ್ಗೆ ವಾಕ್ ಮಾಡಿದ್ದಾರೆ ದಿನಪತ್ರಿಕೆ ನೋಡಿ ಮತ್ತೆ ಮೌನಕ್ಕೆ ಶರಣಾಗಿದ್ದಾರೆ.
ಪ್ರದೋಶ್ ಸಲ್ಲಿಸಿರುವ ಮಾಫಿ ಸಾಕ್ಷಿ ಅರ್ಜಿಯ ಮುಂದಿನ ಕಾನೂನು ಪ್ರಕ್ರಿಯೆ ಹಾಗೂ ನ್ಯಾಯಾಲಯದ ನಿರ್ಧಾರ ಏನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ಇದನ್ನು ನೋಡಿ : ದಲಿತರು ಬೆಳೆಯೋದನ್ನ BJP ಸಹಿಸಲ್ಲ – ಹೀಗ್ಯಾಕಂದ್ರು ನೂತನ ಸಚಿವ NAGENDRA




