ಆಷಾಢದ ಕೊನೆಯ ಶುಕ್ರವಾರ – Lakshmi ಅಲಂಕಾರದಲ್ಲಿ ಕಂಗೊಳಿಸಿದ ತಾಯಿ ಚಾಮುಂಡೇಶ್ವರಿ

ಆಷಾಢ ಮಾಸದ ಕಡೆಯ ಶುಕ್ರವಾರದ ಅಂಗವಾಗಿ ಮೈಸೂರಿನ ನಾಡದೇವತೆ ತಾಯಿ ಚಾಮುಂಡೇಶ್ವರಿ ಇಂದು ವಿಶೇಷ Lakshmi ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ. ಈ ವಿಶೇಷ ದಿನದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಬೆಳಗ್ಗಿನಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ತಾಯಿಯ ಆಶೀರ್ವಾದ ಪಡೆಯುತ್ತಿದ್ದಾರೆ.

ವಿಶೇಷ ಪೂಜೆ
ಬ್ರಾಹ್ಮಿ ಮುಹೂರ್ತದಿಂದಲೇ ಭಕ್ತರು ರಸ್ತೆ ಹಾಗೂ ಮೆಟ್ಟಿಲುಗಳ ಮಾರ್ಗವಾಗಿ ಚಾಮುಂಡಿ ಬೆಟ್ಟ ತಲುಪಿ, ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಕಡೆಯ ಆಷಾಢ ಶುಕ್ರವಾರದ ವಿಶೇಷ ಪೂಜೆ ಮತ್ತು ಅಲಂಕಾರವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು.
ಇದನ್ನು ಓದಿ : ಆಷಾಢ ಶುಕ್ರವಾರ | ಚಾಮುಂಡಿ ತಾಯಿ ದರ್ಶನ ಪಡೆದ ದರ್ಶನ್ ಪತ್ನಿ

Lakshmi ಅಲಂಕಾರದಲ್ಲಿ ಕಂಗೊಳಿಸಿದ ತಾಯಿ ಚಾಮುಂಡೇಶ್ವರಿ
ಇನ್ನು ತಾಯಿ ಚಾಮುಂಡೇಶ್ವರಿಗೆ ಲಕ್ಷ್ಮೀ ದೇವಿಯ ಅಲಂಕಾರ ಮಾಡಲಾಗಿದ್ದು, ದೇವಸ್ಥಾನದ ಒಳಾಂಗಣವನ್ನು ಚೆಂಡು ಹೂ, ವಿವಿಧ ಬಣ್ಣಗಳ ಗುಲಾಬಿ ಸೇರಿದಂತೆ ನಾನಾ ಬಗೆಯ ಹೂಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿತ್ತು. ಕರ್ಪೂರ, ಗಂಧ ಮತ್ತು ಧೂಪದ ಪರಿಮಳದಿಂದ ದೇವಸ್ಥಾನದ ವಾತಾವರಣ ಭಕ್ತಿಮಯವಾಗಿ ಮಾರ್ಪಟ್ಟಿತ್ತು.

ಚಾಮುಂಡಿಯ ದರ್ಶನ ಪಡೆದ ಶೋಭಾ ಕರಂದ್ಲಾಜೆ:
ಇನ್ನೂ ಚಾಮುಂಡಿ ಬೆಟ್ಟಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಭೇಟಿ ನೀಡಿದ್ದು, ತಾಯಿಯ ದರ್ಶನ ಪಡೆದುಕೊಂಡಿದ್ದಾರೆ.
ಇದನ್ನು ನೋಡಿ : ದಲಿತರು ಬೆಳೆಯೋದನ್ನ BJP ಸಹಿಸಲ್ಲ – ಹೀಗ್ಯಾಕಂದ್ರು ನೂತನ ಸಚಿವ NAGENDRA





