
MYSURU : ಸಿದ್ದರಾಮಯ್ಯ ಆರ್ಮಿ ಛಿದ್ರವಾಗಿಲ್ಲ, ಈಗಲೂ ಅವ್ರೇ ನಮ್ಮ ಕ್ಯಾಪ್ಟನ್: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಅವರ ಆರ್ಮಿ ಛಿದ್ರವಾಗಿಲ್ಲ, ಈಗಲೂ ಅವರೇ ನಮಗೆ ಆರ್ಮಿ ಕ್ಯಾಪ್ಟನ್, ನಾನು ವೈಸ್ ಕ್ಯಾಪ್ಟನ್ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ಆರ್ಮಿ ಛಿದ್ರವಾಗಿಲ್ಲ
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದರು. “ಸಿದ್ದರಾಮಯ್ಯ ಅವರ ಆರ್ಮಿ ಛಿದ್ರವಾಗಿಲ್ಲ. ಈಗಲೂ ಅವರೇ ನಮ್ಮ ಕ್ಯಾಪ್ಟನ್. ಈ ಬಗ್ಗೆ ಯಾರಿಗೂ ಅನುಮಾನ ಬೇಡ. ನಾನು ಮತ್ತು ಸಿದ್ದರಾಮಯ್ಯ ಚೆನ್ನಾಗಿಯೇ ಇದ್ದೇವೆ. ನಾವು ಹಿಂದೆಯೂ ಪ್ರತಿಬಾರಿಯೂ ಭೇಟಿಯಾಗುತ್ತಿರಲಿಲ್ಲ, ಪದೇಪದೇ ಜೊತೆಯಲ್ಲಿ ಇರುತ್ತಿರಲಿಲ್ಲ. ಅವಶ್ಯಕತೆ ಇದ್ದಾಗ ಭೇಟಿಯಾಗುತ್ತೇವೆ. ಈಗಲೂ ಅಷ್ಟೇ,” ಎಂದು ಹೇಳಿದರು.
READ THIS : DK ಶಿವಕುಮಾರ್ ಜತೆಗಿನ ಮಾತುಕತೆ ರಹಸ್ಯ ಬಿಚ್ಚಿಟ್ಟ ಸತೀಶ್ ಜಾರಕಿಹೊಳಿ

ಮನೆಯಲ್ಲಿ ಒಬ್ಬರು ಸಾಂತ್ವನ ಹೇಳಿದರೆ ಸಾಕು
ಇಡಿ ದಾಳಿ ಬಳಿಕ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ತಮ್ಮನ್ನು ಭೇಟಿಯಾಗಿದ್ದರು ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು. “ಮನೆಯಲ್ಲಿ ಒಬ್ಬರು ಸಾಂತ್ವನ ಹೇಳಿದರೆ ಸಾಕು. ಮನೆಯಲ್ಲಿ ಎಲ್ಲರೂ ಬಂದು ನಮಗೆ ಸಾಂತ್ವನ ಹೇಳಬೇಕು ಎಂದು ಬಯಸಬಾರದು. ಯಾರದ್ದಾದರೂ ಮದುವೆ ಅಥವಾ ಗೃಹಪ್ರವೇಶಕ್ಕೆ ಮನೆಯಿಂದ ಒಬ್ಬರು ಹೋಗುತ್ತಾರೆ. ಎಲ್ಲರೂ ಬರಬೇಕು ಎಂದು ನಿರೀಕ್ಷಿಸಿದರೆ ಹೇಗೆ?” ಎಂದು ಪ್ರಶ್ನಿಸಿದರು.
MYSURU – ‘ಅದು ಅಹಿಂದ ಸಮಾವೇಶವಲ್ಲ’
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾವೇಶದ ಕುರಿತು ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಅದು ಅಹಿಂದ ಸಮಾವೇಶವಲ್ಲ. ಕೇವಲ ಹಿಂದುಳಿದವರ ಸಮಾವೇಶ ಎಂದು ಹೇಳಿದರು. ಸಮಾವೇಶ ಆಯೋಜನೆ ಮಾಡಿದವರು ನನ್ನನ್ನ ಕರೆದಿಲ್ಲ. ಯಾಕೆ ನನ್ನನ್ನು ಕರೆದಿಲ್ಲ ಎಂದು ಕೇಳಲು ಆಗುತ್ತಾ? ಆಹಿಂದ ಸಂಘಟನೆ ಭದ್ರವಾಗಿದೆ ಎಂದು ಸ್ಪಷ್ಟಪಡಿಸಿದರು.

MUST WATCH : ಜನರ ನಿದ್ದೆ ಗೆಡಿಸಿದ್ದ ಚಿರತೆ ಸೆರೆ – ಚಿರತೆ ನೋಡಲು ಮುಗಿಬಿದ್ದ ಜನ್ರು.!




