
ಚಿನ್ನ ಖರೀದಿಸೋರಿಗೆ ಶಾಕ್ – ಮತ್ತೆ ದಿಢೀರ್ ಏರಿದ Gold Rate ! ಬೆಂಗಳೂರಿನಲ್ಲಿ ಇಂದಿನ ದರ ಎಷ್ಟು?
ಕಳೆದ ಕೆಲವು ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನದ ದರ ಇದೀಗ ಮತ್ತೆ ಏರಿಕೆ ಕಂಡಿದೆ. ಚಿನ್ನದ ಜೊತೆಗೆ ಬೆಳ್ಳಿಯ ಬೆಲೆಯಲ್ಲೂ ಹೆಚ್ಚಳವಾಗಿದ್ದು, ಖರೀದಿಗೆ ಯೋಜನೆ ಹಾಕಿಕೊಂಡಿರುವವರಿಗೆ ಬೆಲೆ ಏರಿಕೆ ಕೊಂಚ ಶಾಕ್ ನೀಡಿದೆ.
ಇಂದು 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹1,51,580ಕ್ಕೆ ತಲುಪಿದ್ದರೆ, 22 ಕ್ಯಾರೆಟ್ ಚಿನ್ನದ ದರ ₹1,38,948ರಷ್ಟಿದೆ. ಇನ್ನು ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ ₹2,34,040ರ ಮಟ್ಟದಲ್ಲಿದೆ.
ಬೆಂಗಳೂರಿನಲ್ಲಿ ಚಿನ್ನದ ದರ ಎಷ್ಟು?
ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹1,51,420 ಇದ್ದರೆ, 22 ಕ್ಯಾರೆಟ್ ಚಿನ್ನದ ದರ ₹1,38,802ರಷ್ಟಿದೆ.
ಇತರ ಪ್ರಮುಖ ನಗರಗಳಲ್ಲಿನ ಚಿನ್ನದ ದರ ಹೀಗಿದೆ:
- ಮುಂಬೈ: 24 ಕ್ಯಾರೆಟ್ ₹1,51,300; 22 ಕ್ಯಾರೆಟ್ ₹1,38,692
- ದೆಹಲಿ: 24 ಕ್ಯಾರೆಟ್ ₹1,51,040; 22 ಕ್ಯಾರೆಟ್ ₹1,38,453
- ಚೆನ್ನೈ: 24 ಕ್ಯಾರೆಟ್ ₹1,51,740; 22 ಕ್ಯಾರೆಟ್ ₹1,39,095
READ THIS : ಬಂಗಾರ ಪ್ರಿಯರಿಗೆ ಗುಡ್ನ್ಯೂಸ್ – ಚಿನ್ನದ ದರದಲ್ಲಿ ಇಳಿಕೆ!

ಪ್ರಮುಖ ನಗರಗಳಲ್ಲಿ ಬೆಳ್ಳಿ ದರ
ಚಿನ್ನದ ಬೆಲೆಯ ಏರಿಕೆಯ ನಡುವೆಯೇ ಬೆಳ್ಳಿಯ ದರದಲ್ಲೂ ಹೆಚ್ಚಳವಾಗಿದೆ.
- ಬೆಂಗಳೂರು: ₹2,33,800 ಪ್ರತಿ ಕೆಜಿ
- ಮುಂಬೈ: ₹2,33,620 ಪ್ರತಿ ಕೆಜಿ
- ದೆಹಲಿ: ₹2,33,220 ಪ್ರತಿ ಕೆಜಿ
- ಚೆನ್ನೈ: ₹2,34,300 ಪ್ರತಿ ಕೆಜಿ
- ಹೈದರಾಬಾದ್: ₹2,33,990 ಪ್ರತಿ ಕೆಜಿ
ಚಿನ್ನ-ಬೆಳ್ಳಿ ದರ ಏರಿಳಿತಕ್ಕೆ ಕಾರಣವೇನು?
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಚಿನ್ನ ಮತ್ತು ಬೆಳ್ಳಿಯ ಬೆಲೆ, ಡಾಲರ್ ಎದುರು ರೂಪಾಯಿ ಮೌಲ್ಯ, ಜಾಗತಿಕ ಆರ್ಥಿಕ ಬೆಳವಣಿಗೆಗಳು, ಮಾರುಕಟ್ಟೆಯ ಬೇಡಿಕೆ-ಪೂರೈಕೆ ಸೇರಿದಂತೆ ಹಲವು ಅಂಶಗಳು ದೇಶೀಯ ಬೆಲೆಗಳ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಪ್ರತಿದಿನ ಬದಲಾವಣೆ ಕಂಡುಬರುವುದು ಸಾಮಾನ್ಯ.

ಆಭರಣ ಖರೀದಿಸುವ ಮುನ್ನ ಇದನ್ನು ಗಮನಿಸಿ
ಮಾರುಕಟ್ಟೆಯಲ್ಲಿ ಪ್ರಕಟವಾಗುವ ಚಿನ್ನದ ದರವೇ ಆಭರಣ ಖರೀದಿಸುವಾಗ ಪಾವತಿಸಬೇಕಾದ ಅಂತಿಮ ಮೊತ್ತವಾಗಿರುವುದಿಲ್ಲ. ಜಿಎಸ್ಟಿ, ಮೇಕಿಂಗ್ ಚಾರ್ಜ್ ಹಾಗೂ ಇತರ ಶುಲ್ಕಗಳು ಹೆಚ್ಚುವರಿಯಾಗಿ ಸೇರುವುದರಿಂದ ಅಂತಿಮ ಬಿಲ್ ಮೊತ್ತ ಬದಲಾಗಬಹುದು.
MUST WATCH : ಗಣಪತಿ ವಿಸರ್ಜನೆಗೆ ಕಟ್ಟಿದ್ದ ಬ್ಯಾನರ್ ತೆರವು-ರಸ್ತೆಯಲ್ಲೇ ಮಲಗಿ ಹಿಂದೂ ಕಾರ್ಯಕರ್ತರ ಪ್ರೊಟೆಸ್ಟ್





