
14,000 ರೂ ಒಳಗೆ ಇಳಿದ Gold Rate ಇಲ್ಲಿದೆ ದರಪಟ್ಟಿ
ಚಿನ್ನ ಖರೀದಿಸುವವರಿಗೆ ಇಂದು ಗುಡ್ನ್ಯೂಸ್ಸೊಂಸು ಸಿಕ್ಕಿದೆ. ಹೌದು.. ದೇಶದಲ್ಲಿ Gold Rate ನಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದ್ದು, 22 ಕ್ಯಾರಟ್ ಆಭರಣ ಚಿನ್ನದ ದರ ಗ್ರಾಮ್ಗೆ ₹140ರಷ್ಟು ಕಡಿಮೆಯಾಗಿದೆ. ಇದರೊಂದಿಗೆ 22 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್ಗೆ ₹14,000ರ ಗಡಿಯೊಳಗೆ ಬಂದಿದೆ. ಬೆಳ್ಳಿ ಬೆಲೆಯಲ್ಲೂ ಇಳಿಕೆಯಾಗಿದ್ದು, ಗ್ರಾಮ್ಗೆ ಸುಮಾರು ₹5 ಕಡಿಮೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ ದಾಖಲಾಗಿದೆ. ಜಾಗತಿಕ ಸ್ಪಾಟ್ ಗೋಲ್ಡ್ ದರ ಗ್ರಾಮ್ಗೆ ಸುಮಾರು 137.9 ಡಾಲರ್ ಇದ್ದರೆ, ಸ್ಪಾಟ್ ಸಿಲ್ವರ್ ದರ ಗ್ರಾಮ್ಗೆ 2.063 ಡಾಲರ್ನಷ್ಟಿದೆ.
ಭಾರತದಲ್ಲಿ ಚಿನ್ನ, ಬೆಳ್ಳಿ ಬೆಲೆ
ಸೆಪ್ಟೆಂಬರ್ 24ರ ದರದ ಪ್ರಕಾರ, ಭಾರತದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್ಗೆ ₹15,268 ಇದ್ದರೆ, 22 ಕ್ಯಾರಟ್ ಚಿನ್ನದ ದರ ₹13,995 ಇದೆ. 18 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್ಗೆ ₹11,451ರಷ್ಟಿದೆ. ಬೆಳ್ಳಿಯ ದರ ಗ್ರಾಮ್ಗೆ ₹245 ಇದ್ದು, 100 ಗ್ರಾಮ್ ಬೆಳ್ಳಿಯ ಬೆಲೆ ₹24,500ರಷ್ಟಿದೆ.

ಬೆಂಗಳೂರಿನಲ್ಲಿ ಚಿನ್ನದ ದರ
ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್ಗೆ ₹13,995 ಇದ್ದು, 10 ಗ್ರಾಮ್ಗೆ ₹1,39,950ರಷ್ಟಿದೆ. 24 ಕ್ಯಾರಟ್ ಚಿನ್ನದ 10 ಗ್ರಾಮ್ ಬೆಲೆ ₹1,52,680 ಇದೆ. ಬೆಂಗಳೂರಿನಲ್ಲಿ ಬೆಳ್ಳಿ ಗ್ರಾಮ್ಗೆ ₹245 ಇದ್ದು, 100 ಗ್ರಾಮ್ಗೆ ₹24,500ರಷ್ಟಿದೆ.
ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ
- ಬೆಂಗಳೂರು: ₹13,995/ಗ್ರಾಮ್
- ಚೆನ್ನೈ: ₹13,995/ಗ್ರಾಮ್
- ಮುಂಬೈ: ₹13,995/ಗ್ರಾಮ್
- ದೆಹಲಿ: ₹14,010/ಗ್ರಾಮ್
- ಕೋಲ್ಕತಾ: ₹13,995/ಗ್ರಾಮ್
- ಕೇರಳ: ₹13,995/ಗ್ರಾಮ್
- ಅಹ್ಮದಾಬಾದ್: ₹14,000/ಗ್ರಾಮ್
- ಜೈಪುರ: ₹14,010/ಗ್ರಾಮ್
- ಲಕ್ನೋ: ₹14,010/ಗ್ರಾಮ್
- ಭುವನೇಶ್ವರ್: ₹13,995/ಗ್ರಾಮ್
READ THIS : ಚಿನ್ನದ ಬೆಲೆಯಲ್ಲಿಂದು ಏರಿಕೆ – ಇಲ್ಲಿದೆ ಬೆಲೆ ವಿವರ

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ
- ಬೆಂಗಳೂರು: ₹245/ಗ್ರಾಮ್
- ಚೆನ್ನೈ: ₹250/ಗ್ರಾಮ್
- ಮುಂಬೈ: ₹245/ಗ್ರಾಮ್
- ದೆಹಲಿ: ₹245/ಗ್ರಾಮ್
- ಕೋಲ್ಕತಾ: ₹245/ಗ್ರಾಮ್
- ಕೇರಳ: ₹250/ಗ್ರಾಮ್
- ಅಹ್ಮದಾಬಾದ್: ₹245/ಗ್ರಾಮ್
- ಜೈಪುರ: ₹245/ಗ್ರಾಮ್
- ಲಕ್ನೋ: ₹245/ಗ್ರಾಮ್
- ಭುವನೇಶ್ವರ್: ₹250/ಗ್ರಾಮ್
- ಪುಣೆ: ₹245/ಗ್ರಾಮ್
ಅಂತಾರಾಷ್ಟ್ರೀಯ ಮಾರುಕಟ್ಟೆಯ ದರ
ಸ್ಪಾಟ್ ಗೋಲ್ಡ್ ಗ್ರಾಮ್ಗೆ 137.9 ಡಾಲರ್ (ಸುಮಾರು ₹13,222) ಮತ್ತು ಸ್ಪಾಟ್ ಸಿಲ್ವರ್ ಗ್ರಾಮ್ಗೆ 2.063 ಡಾಲರ್ (ಸುಮಾರು ₹197) ಇದೆ.
ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಗ್ರಾಮ್ ದರ ಹೀಗಿದೆ:
- ಭಾರತ: ₹15,268
- ಮಲೇಷ್ಯಾ: ₹13,592
- ದುಬೈ: ₹13,471
- ಅಮೆರಿಕ: ₹13,582
- ಸಿಂಗಾಪುರ: ₹14,129
- ಕತಾರ್: ₹13,594
- ಸೌದಿ ಅರೇಬಿಯಾ: ₹13,579
- ಓಮನ್: ₹13,642
- ಕುವೈತ್: ₹13,455

ಗಮನಿಸಿ: ಇಲ್ಲಿ ನೀಡಿರುವ ಚಿನ್ನ ಮತ್ತು ಬೆಳ್ಳಿ ದರಗಳು ಪ್ರಮುಖ ಆಭರಣ ಮಳಿಗೆಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿವೆ. ಸ್ಥಳೀಯ ಮಾರುಕಟ್ಟೆ, ಆಭರಣದಂಗಡಿ ಹಾಗೂ ಸಮಯಕ್ಕೆ ಅನುಗುಣವಾಗಿ ದರಗಳಲ್ಲಿ ವ್ಯತ್ಯಾಸವಾಗಬಹುದು. ಇದರ ಜೊತೆಗೆ ಜಿಎಸ್ಟಿ, ಮೇಕಿಂಗ್ ಚಾರ್ಜ್ ಸೇರಿದಂತೆ ಇತರ ಶುಲ್ಕಗಳು ಅನ್ವಯಿಸಬಹುದು.
MUST WATCH : ಗುಬ್ಬಿಯಲ್ಲಿ ಅಕ್ರಮ ಮದ್ಯ ಮಾರಾಟ.! ಕಡಿವಾಣ ಹಾಕಲು ದಲಿತ ಮುಖಂಡರ ಪಟ್ಟು




