
ಮಿಡ್ ವೀಕ್ ಎಲಿಮಿನೇಷನ್ನಲ್ಲಿ Bigg Boss ಮನೆಯಿಂದ ಹೊರಹೋಗಿದ್ದು ಯಾರು? ಕಣ್ಣೀರು ಹಾಕಿದ ಜಗದೀಶ್
Bigg Boss ಕನ್ನಡ ರಿಯಾಲಿಟಿ ಶೋನಲ್ಲಿ ಇದೀಗ ಮತ್ತೊಂದು ರೋಚಕ ತಿರುವು ಎದುರಾಗಿದೆ. ಯಾವುದೇ ಮುನ್ಸೂಚನೆ ಇಲ್ಲದೆ ಮನೆಯ ಸ್ಪರ್ಧಿಗಳಿಗೆ ‘ಎಮರ್ಜೆನ್ಸಿ ಎಕ್ಸಿಟ್’ ಶಾಕ್ ನೀಡಲಾಗಿದ್ದು, ವಾರದ ಮಧ್ಯದಲ್ಲೇ ಒಬ್ಬ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ.
ಪ್ರತಿಯೊಬ್ಬ ಸ್ಪರ್ಧಿಯನ್ನೂ ನೇರವಾಗಿ ನಾಮಿನೇಟ್
ಈ ವಾರ ಬಿಗ್ ಬಾಸ್ ಮನೆಯಲ್ಲಿರುವ ಪ್ರತಿಯೊಬ್ಬ ಸ್ಪರ್ಧಿಯನ್ನೂ ನೇರವಾಗಿ ನಾಮಿನೇಟ್ ಮಾಡಲಾಗಿತ್ತು. ಬಳಿಕ ವಿವಿಧ ಟಾಸ್ಕ್ಗಳನ್ನು ನೀಡುವ ಮೂಲಕ ಕೆಲವರಿಗೆ ನಾಮಿನೇಷನ್ನಿಂದ ಪಾರಾಗುವ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ಈ ವಾರದ ಎಲಿಮಿನೇಷನ್ ಸಾಕಷ್ಟು ಕುತೂಹಲ ಮೂಡಿಸಿತ್ತು.
READ THIS : ದೊಡ್ಮನೆಯಲ್ಲಿ ನಾಲಿಗೆ ಹರಿಬಿಟ್ಟ ಕಿರಣ್ ಶಾಸ್ತ್ರಿ!

Bigg Boss ಮನೆಯಿಂದ ಹೊರಹೋಗಿದ್ದು ಯಾರು?
ಇದರ ನಡುವೆ, ‘ಈ ವಾರ ಮನೆಯಲ್ಲಿ ಯಾರು ಉಳಿಯುತ್ತಾರೆ ಎಂಬ ಭರವಸೆ ಇಲ್ಲ. ಯಾವಾಗ ಬೇಕಾದರೂ, ಯಾರು ಬೇಕಾದರೂ ಮನೆಯಿಂದ ಹೊರಬೀಳಬಹುದು’ ಎಂದು ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಎಚ್ಚರಿಕೆ ನೀಡಿದ್ದರು. ಅದು ಈಗ ನಿಜವಾಗಿದೆ. ಈ ಹಠಾತ್ ಎಮರ್ಜೆನ್ಸಿ ಎಕ್ಸಿಟ್ ನಿರ್ಧಾರದಿಂದಾಗಿ ಬಿಗ್ ಬಾಸ್ ಮನೆಯಲ್ಲಿ ಆಟದ ವಾತಾವರಣ ಸಂಪೂರ್ಣ ಬದಲಾಗಿದ್ದು, ಈ ವಾರ ಯಾರು ದೊಡ್ಮನೆಯಿಂದ ನಿರ್ಗಮಿಸಿದ್ದಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ.
ಹಾಗಾದರೆ ಈ ವಾರ ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಆ ಸ್ಪರ್ಧಿ ಯಾರು? ‘ಎಮರ್ಜೆನ್ಸಿ ಎಕ್ಸಿಟ್’ ಮೂಲಕ ಯಾರ ಆಟ ಅಂತ್ಯಗೊಂಡಿದೆ ಎಂಬುದು ಇಂದಿನ ಸಂಚಿಕೆಯಲ್ಲಿ ಬಹಿರಂಗವಾಗಲಿದೆ.

MUST WATCH : ಲಾಭಕ್ಕೆ ಹಣ ಹಾಕೋ ಮುನ್ನ ಹುಷಾರ್..! – ಮೋಸ ಆದ್ಮೇಲೆ ದಂಪತಿ ಆತ್ಮಹ* ಯತ್ನ.?




