
ರಷ್ಯಾದ ಇತಿಹಾಸದಲ್ಲೇ ಅತಿದೊಡ್ಡ ಅಟ್ಯಾಕ್; ಮಾಸ್ಕೋ ಮೇಲೆ ಉಕ್ರೇನ್ನಿಂದ 1,000ಕ್ಕೂ ಹೆಚ್ಚು Drone ಗಳ ದಾಳಿ
ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮತ್ತೊಂದು ಭಾರೀ ಡ್ರೋನ್ ದಾಳಿ ನಡೆದಿದೆ. ರಷ್ಯಾದ ಮೂರು ದಿನಗಳ ಸಂಸತ್ ಚುನಾವಣೆ ಅಂತಿಮ ಹಂತ ತಲುಪಿದ್ದ ಸಂದರ್ಭದಲ್ಲೇ ಉಕ್ರೇನ್ ಪಡೆಗಳು ರಷ್ಯಾದತ್ತ ಸಾವಿರಕ್ಕೂ ಹೆಚ್ಚು ಡ್ರೋನ್ಗಳನ್ನು ಹಾರಿಸಿವೆ. ಇದರಲ್ಲಿ ನೂರಾರು ಡ್ರೋನ್ಗಳು ರಾಜಧಾನಿ ಮಾಸ್ಕೋವನ್ನು ಗುರಿಯಾಗಿಸಿಕೊಂಡಿದ್ದವು ಎಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ.
ಅತಿ ದೊಡ್ಡ ಡ್ರೋನ್ ದಾಳಿ
ಮಾಸ್ಕೋದ ಮೇಯರ್ ಸೆರ್ಗೆಯ್ ಸೊಬ್ಯಾನಿನ್ ಮಾತನಾಡಿ, “ಇದು ಮಾಸ್ಕೋ ನಗರದ ಮೇಲೆ ಇದುವರೆಗೆ ನಡೆದ ಅತಿ ದೊಡ್ಡ Drone ದಾಳಿಯಾಗಿದೆ. ದಾಳಿಯಿಂದಾಗಿ ತೈಲ ಶುದ್ಧೀಕರಣ ಘಟಕ ಹಾಗೂ ವಸತಿ ಕಟ್ಟಡವೊಂದಕ್ಕೆ ಹಾನಿಯಾಗಿದೆ” ಎಂದು ತಿಳಿಸಿದ್ದಾರೆ.
ಇಬ್ಬರು ಸಾವು, 20 ಮಂದಿಗೂ ಹೆಚ್ಚು ಮಂದಿಗೆ ಗಾಯ
ಮಾಸ್ಕೋ ಪ್ರದೇಶದ ಗವರ್ನರ್ ಆಂಡ್ರೇ ವೊರೊಬ್ಯೋವ್ ಪ್ರಕಾರ, ದಾಳಿಯಲ್ಲಿ 74 ವರ್ಷದ ವ್ಯಕ್ತಿ ಹಾಗೂ 44 ವರ್ಷದ ಮಹಿಳೆ ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ.
READ THIS : ಮದುವೆಯಲ್ಲಿ ವರನಿಗೆ ಚಾಕು ಇರಿದ ವ್ಯಕ್ತಿ – ಕೊಲೆಗಾರನನ್ನು ಚೇಸ್ ಮಾಡಿದ Drone

ಉಕ್ರೇನ್ ದಾಳಿ ನಡೆಸಿದ್ದೇಕೆ..?
ರಷ್ಯಾದ ರಕ್ಷಣಾ ಸಚಿವಾಲಯದ ಪ್ರಕಾರ, ರಷ್ಯಾ ಆಕ್ರಮಿಸಿಕೊಂಡಿರುವ ಕ್ರೈಮಿಯಾ ಹಾಗೂ ಕಪ್ಪು ಸಮುದ್ರದ ಮೇಲೆ ಒಟ್ಟು 1,110 ಉಕ್ರೇನಿಯನ್ ಡ್ರೋನ್ಗಳನ್ನು ವಾಯು ರಕ್ಷಣಾ ಪಡೆಗಳು ಹೊಡೆದುರುಳಿಸಿವೆ. ಇದರಲ್ಲಿ ಮಾಸ್ಕೋ ನಗರದತ್ತ ಬರುತ್ತಿದ್ದ 450 ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ ಎಂದು ಮಾಸ್ಕೋ ಮೇಯರ್ ಹೇಳಿದ್ದಾರೆ.
ರಷ್ಯಾದ ಸಂಸತ್ ಚುನಾವಣೆಯನ್ನು ಬುಡಮೇಲು ಮಾಡುವ ಉದ್ದೇಶದಿಂದ ಉಕ್ರೇನ್ ಈ ದಾಳಿ ನಡೆಸಿದೆ ಎಂದು ರಷ್ಯಾ ಆರೋಪಿಸಿದೆ. ಆದರೆ ಈ ಯತ್ನ ವಿಫಲವಾಗಿದೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬೃಹತ್ ದಾಳಿಯ ಕುರಿತು ಉಕ್ರೇನ್ ಕಡೆಯಿಂದ ತಕ್ಷಣದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ರಷ್ಯಾ-ಉಕ್ರೇನ್ ಸಮರ ಶುರುವಾದ ಬಳಿಕ ರಷ್ಯಾದಲ್ಲಿ ನಡೆದ ಮೊದಲ ಸಂಸತ್ ಚುನಾವಣೆ ಇದಾಗಿದೆ.

MUST WATCH : ತುಮಕೂರಲ್ಲಿ ಶಾಲೆ ಪಕ್ಕವೇ ಕಸದ ರಾಶಿ – ಮೂಗು ಮುಚ್ಚಿಕೊಂಡು ಓಡಾಡೊ ಪರಿಸ್ಥಿತಿ




