
ಇಂದಿನಿಂದ 3 ದಿನ ಕರೆ ನೀಡಿದ್ದ BANK ಮುಷ್ಕರ ಮುಂದೂಡಿಕೆ
ದೇಶಾದ್ಯಂತ ಬ್ಯಾಂಕ್ ಗ್ರಾಹಕರಿಗೆ ನೆಮ್ಮದಿ ನೀಡುವ ಬೆಳವಣಿಗೆ ನಡೆದಿದ್ದು, ಇಂದಿನಿಂದ ಮೂರು ದಿನಗಳ ಕಾಲ ನಡೆಯಬೇಕಿದ್ದ ಬ್ಯಾಂಕ್ ಮುಷ್ಕರವನ್ನು ಮುಂದೂಡಲಾಗಿದೆ. ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಕರೆ ನೀಡಿದ್ದ ಮುಷ್ಕರವನ್ನು ಹಿಂಪಡೆಯಲಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಟಿಸಿದೆ.
ಎಲ್ಲಾ ಬ್ಯಾಂಕಿಂಗ್ ಸೇವೆಗಳು ಲಭ್ಯ
ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಕರೆ ನೀಡಿದ್ದ ಬ್ಯಾಂಕ್ ಮುಷ್ಕರವನ್ನು ಮುಂದೂಡಲಾಗಿದೆ. ಹೀಗಾಗಿ ಬ್ಯಾಂಕಿಂಗ್ ಸೇವೆಗಳಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ. ದೇಶದಾದ್ಯಂತ ಎಸ್ಬಿಐನ ಎಲ್ಲಾ ಶಾಖೆಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಗ್ರಾಹಕರಿಗೆ ಎಲ್ಲಾ ಬ್ಯಾಂಕಿಂಗ್ ಸೇವೆಗಳು ಲಭ್ಯವಾಗಲಿವೆ.

ಸೆಪ್ಟೆಂಬರ್ 27ರ ರಾತ್ರಿ ಭಾರತೀಯ ಬ್ಯಾಂಕ್ಗಳ ಸಂಘ (IBA) ಮತ್ತು UFBU ನಡುವೆ ನಡೆದ ಸಭೆಯ ಬಳಿಕ ಮುಷ್ಕರವನ್ನು ಮುಂದೂಡುವ ನಿರ್ಧಾರ ಕೈಗೊಳ್ಳಲಾಗಿದೆ.
READ THIS : 3 ದಿನ ಬ್ಯಾಂಕ್ ಮುಷ್ಕರ – ದೇಶಾದ್ಯಂತ ಯಾವೆಲ್ಲ ಸೇವೆಗಳಲ್ಲಿ ವ್ಯತ್ಯಯ?
ಶನಿವಾರಗಳ ರಜೆ ಕುರಿತು ಸಮಿತಿ ರಚನೆ
ಸಭೆಯಲ್ಲಿ ತಿಂಗಳ ಎಲ್ಲಾ ಶನಿವಾರಗಳನ್ನು ಬ್ಯಾಂಕ್ ರಜಾದಿನಗಳಾಗಿ ಘೋಷಿಸುವ ಬೇಡಿಕೆ ಕುರಿತು ಚರ್ಚಿಸಲು ತಕ್ಷಣವೇ ಉನ್ನತ ಮಟ್ಟದ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ವಿಚಾರದ ಎಲ್ಲ ಸಾಧ್ಯತೆಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರ ಕಂಡುಕೊಳ್ಳಲು ಸಮಿತಿ ಮುಂದಾಗಲಿದೆ.

PLI ಯೋಜನೆ ಬದಲಾವಣೆಗೆ ಮಾತುಕತೆ
ಸ್ಕೇಲ್-IV ಹಾಗೂ ಅದಕ್ಕಿಂತ ಮೇಲಿನ ಹಂತದ ಅಧಿಕಾರಿಗಳಿಗೆ ಸಂಬಂಧಿಸಿದ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನ (PLI) ಯೋಜನೆಯ ಬದಲಾವಣೆ ಕುರಿತು IBA ಜೊತೆ ಮಾತುಕತೆ ಆರಂಭಿಸಲು ಒಪ್ಪಂದವಾಗಿದೆ. ಅಧಿಕಾರಿಗಳ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೂ ತರಲು ನಿರ್ಧರಿಸಲಾಗಿದೆ.
ಇದಲ್ಲದೆ, 2024ರ ಮಾರ್ಚ್ 8ರಂದು ನಡೆದ ಸಭೆಯಲ್ಲಿ ಪ್ರಸ್ತಾಪಿಸಲಾಗಿದ್ದ ಬಾಕಿ ಉಳಿದಿರುವ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವ ಭರವಸೆಯೂ ನೀಡಲಾಗಿದೆ. ಸದ್ಯ ಈ ಎಲ್ಲಾ ಒಪ್ಪಂದಗಳ ಕಾರಣದಿಂದಾಗಿ, UFBU ಕರೆ ನೀಡಿದ್ದ ಮೂರು ದಿನಗಳ ಬ್ಯಾಂಕ್ ಮುಷ್ಕರವನ್ನು ಹಿಂಪಡೆದಿದೆ.

MUST WATCH : ಕೇಂದ್ರದಿಂದ ಮೂರು ಬರ ಅಧ್ಯಯನ ತಂಡ – ಎಲ್ಲೆಲ್ಲಿ ಅಧ್ಯಯನ ಬಗ್ಗೆ ಪರಮೇಶ್ವರ್ ಮಾಹಿತಿ




